ನೀವು ಅಧಿಕ ತೂಕ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಒಮ್ಮೆ ಕುಂಬಳಕಾಯಿ ಜ್ಯೂಸ್ ಟ್ರೈ ಮಾಡಿ
ನಾವು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳಿಗೆ ಮುಖ್ಯ ಕಾರಣವೆಂದರೆ ನಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿ. ಅನೇಕ ರೋಗಗಳು ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ನಮ್ಮ ಆರೋಗ್ಯವನ್ನು ಸಾಧ್ಯವಾದಷ್ಟು ರಕ್ಷಿಸಲು ನಾವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಬಿಪಿ, ಶುಗರ್, ಡಯಾಬಿಟಿಸ್ ಮತ್ತು ಅಧಿಕ ತೂಕವು ಇಂದಿನ ಕಾಲದಲ್ಲಿ ಮಾನವ ಸಮಾಜವು ಎದುರಿಸುತ್ತಿರುವ ಕೆಲವು ಪ್ರಮುಖ ಸಮಸ್ಯೆಗಳಾಗಿವೆ. ಇವುಗಳಲ್ಲಿ, ಅಧಿಕ ತೂಕವು ಮಾತ್ರ ಇತ್ತಿಚಿನ ದಿನಗಳಲ್ಲಿ ಹೆಚ್ಚಾಗಿ ಕಾಡುವ ಬಹುದೊಡ್ಡ ಸಮಸ್ಯೆಯಾಗಿದೆ
ಆದರೆ ಮನೆಯಲ್ಲಿ ತರಕಾರಿ ಮತ್ತು ಹಣ್ಣಿನ ರಸಗಳನ್ನು ಸೇವಿಸುವ ಮೂಲಕ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ? ತೂಕ ನಷ್ಟವನ್ನು ವಿಶೇಷವಾಗಿ ಕುಂಬಳಕಾಯಿ ಬಳಕೆಯಿಂದ ಮಾಡಬಹುದು. ಇದು ವಿವಿಧ ಔಷಧೀಯ ಗುಣಗಳನ್ನು ಹೊಂದಿದೆ. ಕುಂಬಳಕಾಯಿಯಲ್ಲಿ ವಿಟಮಿನ್ ಗಳು, ಫೈಬರ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದನ್ನು ತೆಗೆದುಕೊಳ್ಳುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ ಇಷ್ಟೇ ಅಲ್ಲದೆ ಕುಂಬಳಕಾಯಿ ಜ್ಯೂಸ್ ಸೇವನೆ ಮಾಡೋದ್ರಿಂದ ನಿಯಮಿತವಾಗಿ ತೂಕ ಇಳಿಸಬಹುದು
ತಯಾರಿಸುವುದು ಹೇಗೆ?:
ಕುಂಬಳಕಾಯಿ ರಸವನ್ನು ತಯಾರಿಸಲು ಮಾಗಿದ ಕುಂಬಳಕಾಯಿ ತುಂಡುಗಳ ತೆಗೆದುಕೊಳ್ಳಿ ಮತ್ತು ಅವುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಈ ತುಂಡುಗಳಿಂದ ಸಿಪ್ಪೆಗಳನ್ನು ತೆಗೆದುಹಾಕಿದ ನಂತರ ಓವನ್ ಅಥವಾ ಕುಕ್ಕರ್ ನಲ್ಲಿ ಬೇಯಿಸಿ. ನಂತರ ಚೆನ್ನಾಗಿ ರುಬ್ಬಿಕೊಳ್ಳಿ ಮತ್ತು ಅದಕ್ಕೆ ಸೇಬಿನ ತುಂಡುಗಳನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ನಂತರ ನೀವು ಈ ರಸವನ್ನು ಕುಡಿಯಬಹುದು. ತೂಕ ಇಳಿಸಿಕೊಳ್ಳಲು ಬಯಸುವವರು ಪ್ರತಿದಿನ ಈ ರಸವನ್ನು ತೆಗೆದುಕೊಳ್ಳಬಹುದು.
ಕುಂಬಳಕಾಯಿ ರಸದ ಪ್ರಯೋಜನಗಳು:
- ಕುಂಬಳಕಾಯಿ ರಸವನ್ನು ಕುಡಿಯುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು. ಇದರಲ್ಲಿರುವ ನಾರಿನಂಶವು ಇಡೀ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವುದಲ್ಲದೆ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿದ್ದರೆ ತೂಕ ಇಳಿಸಿಕೊಳ್ಳಲು ಕುಂಬಳಕಾಯಿ ಹೆಚ್ಚು ಪ್ರಯೋಜನಕಾರಿಯಾಗಿದೆ.
- ಕುಂಬಳಕಾಯಿ ರಸವು ಅದರ ರೋಗ ನಿರೋಧಕ ಗುಣಲಕ್ಷಣಗಳಿಂದಾಗಿ ದೇಹದಲ್ಲಿನ ಫ್ರೀ ರಾಡಿಕಲ್ಗಳ ವಿರುದ್ಧ ಹೋರಾಡುತ್ತದೆ. ಉರಿಯೂತವನ್ನು ಕಡಿಮೆ ಮಾಡಲು ಸಹ ಇದು ಉಪಯುಕ್ತವಾಗಿದೆ.