ಮದರಸಾಗಳ ಬಗ್ಗೆ ಮಹತ್ವದ ನಿರ್ಧಾರ | ಪ್ರಮುಖ ನಿಯಮ ಬದಲಾವಣೆ
ಸರ್ಕಾರ ಮದರಸಾಗಳ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪ್ರಮುಖ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಹೌದು!!..ಉತ್ತರ ಪ್ರದೇಶ ಸರ್ಕಾರವು ಮದರಸಾಗಳಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ಕೈಗೊಂಡಿದೆ.
ಹೀಗಾಗಿ, ಅನೇಕ ನಿಯಮಗಳನ್ನು ಬದಲಾಯಿಸಿದ್ದು, ಲಕ್ನೋದಲ್ಲಿ ನಡೆದ ಮದರಸಾ ಮಂಡಳಿ ಸಭೆಯಲ್ಲಿ ಎಲ್ಲಾ ಮದರಸಾಗಳ ವಾರದ ರಜೆಯನ್ನು ಬದಲಾಯಿಸುವ ಮಹತ್ವದ ನಿರ್ಧಾರವನ್ನು ಮಾಡಿದ್ದು, ಇದರ ಜೊತೆಗೆ ಮದರಸಾಗಳಲ್ಲೂ ಸಮವಸ್ತ್ರ ಧರಿಸಲು ನಿರ್ಧರಿಸಲಾಗಿದೆ.
ಮದರಸಾ ಮಂಡಳಿಯ ಅಧ್ಯಕ್ಷ ಇಫ್ತಿಕಾರ್ ಅಹಮದ್ ಜಾವೇದ್ ಅವರು ಈ ಸಭೆ ಕರೆದಿದ್ದು, ವಾರದ ರಜೆಯಲ್ಲಿ ಬದಲಾವಣೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಇನ್ನೂ ಮುಂದೆ ಯುಪಿಯ ಮದರಸಾಗಳಲ್ಲಿ ಶುಕ್ರವಾರ ರಜೆ ಇರುವುದಿಲ್ಲ. ಇದರ ಬದಲಿಗೆ ಭಾನುವಾರದಂದು ಮದರಸಾಗಳಿಗೆ ರಜೆ ಇರಲಿದೆ. ಈ ಆದೇಶವು ಯುಪಿಯ ಎಲ್ಲಾ ಅನುದಾನಿತ ಮತ್ತು ಅನುದಾನರಹಿತ ಮಾನ್ಯತೆ ಪಡೆದ ಮದರಸಾಗಳಿಗೆ ಅನ್ವಯವಾಗುತ್ತದೆ ಎನ್ನಲಾಗಿದೆ.
ಇದರ ಜೊತೆಗೆ, ಉತ್ತರ ಪ್ರದೇಶದ ಮದರಸಾಗಳಲ್ಲಿಯೂ ಸಮವಸ್ತ್ರ ಇರಲಿದ್ದು, ಉತ್ತರ ಪ್ರದೇಶ ಮದರಸಾ ಎಜುಕೇಶನ್ ಕೌನ್ಸಿಲ್ ಅಧ್ಯಕ್ಷ ಡಾ. ಇಫ್ತೆಕರ್ ಅಹಮದ್ ಜಾವೇದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯದ ಎಲ್ಲಾ ಮದರಸಾಗಳಲ್ಲಿ ವಸ್ತ್ರ ಸಂಹಿತೆ ಅನ್ವಯವಾಗುವಂತೆ ನಿರ್ಣಯ ಮಾಡಲಾಗಿದೆ.
ಇದರೊಂದಿಗೆ ಅರೇಬಿಕ್-ಪರ್ಷಿಯನ್ ಪರೀಕ್ಷೆಗಳ ಪರೀಕ್ಷಾ ಶುಲ್ಕವನ್ನು ಆನ್‌ಲೈನ್ ಮೂಲಕವೂ ಜಮಾ ಮಾಡಲು ವ್ಯವಸ್ಥೆ ಮಾಡಲು ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿದೆ.