ಗೀಸರ್‌ನಲ್ಲಿ ಈ ಸಣ್ಣದಾದ ಒಂದು ಸಾಧನ ಅಳವಡಿಸಿ ನೋಡಿ, ಅರ್ಧದಷ್ಟು ಬಿಲ್‌ ಕಡಿಮೆ ಬರುತ್ತೆ!!

ಮೈ ನಡುಗೋ ಚುಮು ಚುಮು ಚಳಿಯಲ್ಲಿ ಬಿಸಿ ಬಿಸಿ ಸ್ನಾನ ಮಾಡಿದಾಗ ಅದರ ಖುಷಿಯೇ ಬೇರೆ. ಹಾಗಾಗಿ ಬೇರೆ ಋತುಗಳಿಗಿಂತ ಚಳಿಗಾಲದಲ್ಲಿ ಗೀಸರ್ ಬಳಕೆ ಹೆಚ್ಚು. ಈಗ ಚಳಿಗಾಲ ಬಂದಿದೆ, ಹೆಚ್ಚಾಗಿ ಎಲ್ಲರೂ ಗೀಸರ್ ಬಳಕೆ ಮಾಡ್ತಾರೆ. ಆದರೆ, ಅತಿಯಾದ ಬಳಕೆಯಿಂದ ನಿಮ್ಮ ಕರೆಂಟ್ ಬಿಲ್ ಹೆಚ್ಚು ಬರುತ್ತದೆ. ಇದರಿಂದ ನಿಮ್ಮ ಬಜೆಟ್ ಮೇಲೆ ಹೊಡೆತ ಬೀಳ್ಬೋದು. ನೀವು ಇಂತಹ ಸಮಸ್ಯೆ ಎದುರಿಸುತ್ತಿದ್ದೀರಾ? ಹಾಗಾದ್ರೆ , ಚಿಂತೆ ಬಿಡಿ ನಿಮ್ಮ ಮನೆಯ ಗೀಸರ್‌ನಲ್ಲಿ ಒಂದು ಪುಟ್ಟ ಡಿವೈಸ್ ಅಳವಡಿಸಿದರೆ ಸಾಕು. ನೀವು ದಿನ ಪೂರ್ತಿ ಗೀಸರ್ ಬಳಸಿದರೂ ವಿದ್ಯುತ್ ಬಿಲ್ ಅರ್ಧದಷ್ಟು ಕಡಿಮೆಯಾಗುತ್ತದೆ!!

ಹೌದು, ನೀವು ನಿಮ್ಮ ಮನೆಯ ಗೀಸರ್‌ನಲ್ಲಿ ಶಾಕ್‌ಪ್ರೂಫ್ ವಾಟರ್ ಹೀಟರ್ ಸಾಧನವನ್ನು ಅಳವಡಿಸುವುದರಿಂದ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದು. ಈ ಶಾಕ್‌ಪ್ರೂಫ್ ವಾಟರ್ ಹೀಟರ್ ಸಾಧನವನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ಆರ್ಡರ್ ಮಾಡಬಹುದು. ಮಾತ್ರವಲ್ಲ, ಇದರ ಫಿಟ್ಟಿಂಗ್ ಕೂಡ ತುಂಬಾ ಸುಲಭ.

ಶಾಕ್‌ಪ್ರೂಫ್ ವಾಟರ್ ಹೀಟರ್ ಡಿವೈಸ್ ಒಂದು ಪುಟ್ಟ ಡಿವೈಸ್ ಆಗಿದೆ. ನೀವು ಈ ಸಾಧನವನ್ನು ಫಿಕ್ಸ್ ಮಾಡಲು ಇಂಜಿನಿಯರ್‌ನ ಸಹಾಯವನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ. ಇದನ್ನು ಗೀಸರ್ ಜೊತೆ ಬಹಳ ಸುಲಭವಾಗಿ ಅಳವಡಿಸಬಹುದಾಗಿದೆ. ಈ ಸಾಧನವು ಗೀಸರ್ ತ್ವರಿತವಾಗಿ ನೀರನ್ನು ಬಿಸಿ ಮಾಡಲು ಸಹಾಯಕವಾಗಿದೆ. ಶಾಕ್‌ಪ್ರೂಫ್ ವಾಟರ್ ಹೀಟರ್ ಸಾಧನವು 40% ನಷ್ಟು ವಿದ್ಯುತ್ ಉಳಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.

ಶಾಕ್‌ಪ್ರೂಫ್ ವಾಟರ್ ಹೀಟರ್ ಡಿವೈಸ್ ಸ್ಥಳೀಯ ಮಾರುಕಟ್ಟೆಯಲ್ಲಿಯೂ ಲಭ್ಯವಿರುತ್ತದೆ. ಮಾತ್ರವಲ್ಲ, ಇದನ್ನು ನೀವು ಆನ್‌ಲೈನ್‌ನಲ್ಲಿಯೂ ಬುಕ್ ಮಾಡಬಹುದು. ಆದರೆ, ಶಾಕ್‌ಪ್ರೂಫ್ ವಾಟರ್ ಹೀಟರ್ ಸಾಧನವು ಹೆಚ್ಚು ಬೇಡಿಕೆ ಇರುವ ಸಾಧನವಾಗಿದ್ದು ಇದರ ಬೆಲೆ ಕೂಡ ಹೆಚ್ಚಾಗಿರುತ್ತದೆ. ಮಾರುಕಟ್ಟೆಯಲ್ಲಿ ಇದರ ಬೆಲೆ 2,999 ರೂ.ವರೆಗೆ ಇರುತ್ತದೆ. ಆದರೆ, ನೀವು ಈ ಡಿವೈಸ್ ಅನ್ನು ಆನ್‌ಲೈನ್‌ನಲ್ಲಿ 1,099 ರೂ.ಗಳಿಗೆ ಖರೀದಿಸಬಹುದಾಗಿದೆ. ಆದರೆ, ಇದರ ಕೊಡುಗೆಗಳ ಆಧಾರದ ಮೇಲೆ ಬೆಲೆ ಸ್ವಲ್ಪ ಹೆಚ್ಚು-ಕಡಿಮೆ ಆಗಬಹುದು.

Leave A Reply

Your email address will not be published.