Bank Holidays In January 2023 : ಜನವರಿ ತಿಂಗಳಲ್ಲಿ 14ದಿನ ಬ್ಯಾಂಕ್ ರಜೆ | ಕಂಪ್ಲೀಟ್ ಲಿಸ್ಟ್ ಇಲ್ಲಿದೆ
ಇನ್ನೇನು ಹೊಸವರ್ಷಕ್ಕೆ ಕಾಲಿಡಲು ಬೆರಳೆಣಿಕೆಯಷ್ಟು ದಿನಗಳು ಬಾಕಿಯಿದೆ. ವಿಶ್ವದ ಜನರೆಲ್ಲರೂ 2023ರ ಹೊಸವರ್ಷವನ್ನು ಆಮಂತ್ರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಹೊಸ ವರ್ಷಕ್ಕೆ 2023ರ ಕ್ಯಾಲೆಂಡರ್ನ್ನು ಖರೀದಿಸಲು ಜನರೆಲ್ಲಾ ಸಜ್ಜಾಗಿದ್ದಾರೆ. ಇದೀಗ, ಬ್ಯಾಂಕುಗಳ ರಜಾಪಟ್ಟಿಯು ಬಿಡುಗಡೆಯಾಗಿದ್ದೂ, ಹೊಸ ವರ್ಷದ ಆರಂಭದಲ್ಲಿಯೇ ಒಂದರ ಹಿಂದೆ ಒಂದರಂತೆ ಸಾಲು ಸಾಲು ರಜೆಗಳು ಎದುರಾಗಿದೆ.
ಹೌದು, ಜನವರಿ ತಿಂಗಳಿನಲ್ಲಿ ಬರೋಬ್ಬರಿ ಹದಿನಾಲ್ಕು ದಿನಗಳ ಕಾಲ ಬ್ಯಾಂಕ್ ಗಳಿಗೆ ರಜೆ ಇರಲಿದೆ. ಆರ್ಬಿಐ (RBI) ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದೂ, ಜನವರಿ 2023 ರಲ್ಲಿ ಬ್ಯಾಂಕುಗಳು 14 ದಿನಗಳವರೆಗೆ ಮುಚ್ಚಲ್ಪಡುತ್ತವೆ. 14 ದಿನಗಳ ರಜೆಯ ಹೊರತಾಗಿಯೂ, ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಎಲ್ಲಾ ಭಾನುವಾರದಂದು ಬ್ಯಾಂಕುಗಳು ಮುಚ್ಚಿರುತ್ತವೆ.
ಭಾರತೀಯ ರಿಸರ್ವ್ ಬ್ಯಾಂಕ್ ಬ್ಯಾಂಕ್ ರಜಾದಿನಗಳನ್ನು ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ರಜಾದಿನ ಎಂದು ವರ್ಗಿಕರಿಸಲಾಗಿದೆ. ಎಲ್ಲಾ ಬ್ಯಾಂಕ್ಗಳು ರಾಷ್ಟ್ರೀಯ ಹಬ್ಬಗಳನ್ನು ಆಚರಿಸಿದರೆ, ಕೆಲವು ಬ್ಯಾಂಕ್ಗಳು ಪ್ರಾದೇಶಿಕ ಹಬ್ಬಗಳು ಮತ್ತು ರಜಾದಿನಗಳನ್ನು ಒಳಗೊಂಡಿರುತ್ತದೆ. ಅದರ ಜೊತೆಯಲ್ಲಿ ಪ್ರಾದೇಶಿಕ ಬ್ಯಾಂಕ್ ರಜಾದಿನಗಳನ್ನು ಆಯಾ ರಾಜ್ಯ ಸರ್ಕಾರಗಳು ನಿರ್ಧರಿಸಲ್ಪಡುತ್ತದೆ. ಗ್ರಾಹಕರು ರಜಾದಿನಗಳನ್ನು ಗಮನದಲ್ಲಿ ಇಟ್ಟುಕೊಂಡು ಬ್ಯಾಂಕ್ ವ್ಯವಹಾರಗಳನ್ನು ನಡೆಸಬೇಕಾಗಿದೆ. ಹಾಗಾಗಿ ಬ್ಯಾಂಕ್ ವ್ಯವಹಾರಕ್ಕೆ ಗ್ರಾಹಕರು ತೆರಳುವ ಮುನ್ನ ಈ ಕೆಳಗಿನ ರಜಾದಿನಗಳ ಮೇಲೆ ಗಮನಹರಿಸಬೇಕಾಗಿದೆ.
ಜನವರಿ 2023 ರ ಬ್ಯಾಂಕ್ ರಜಾದಿನಗಳ ಪಟ್ಟಿ
ಜನವರಿ 1 (ಭಾನುವಾರ):– ಹೊಸ ವರ್ಷದ ಬ್ಯಾಂಕ್ ರಜೆ ಮತ್ತು ಭಾನುವಾರ ಬ್ಯಾಂಕ್ ರಜೆ.
ಜನವರಿ 2 (ಸೋಮವಾರ):– ಹೊಸ ವರ್ಷದ ಬ್ಯಾಂಕ್ ಆಚರಣೆ – ಮಿಜೋರಾಂ.
ಜನವರಿ 5 (ಗುರುವಾರ):– ಗುರು ಗೋಬಿಂದ್ ಸಿಂಗ್ ಜಯಂತಿ – ಹರಿಯಾಣ ಮತ್ತು ರಾಜಸ್ಥಾನ.
ಜನವರಿ 8 (ಭಾನುವಾರ ):– ಭಾನುವಾರ ಬ್ಯಾಂಕ್ ರಜೆ.
ಜನವರಿ 11 (ಬುಧವಾರ ):– ಮಿಷನರಿ ಡೇ- ಮಿಜೋರಾಂ.
ಜನವರಿ 14 (ಶನಿವಾರ):– ಎರಡನೇ ಶನಿವಾರ ಬ್ಯಾಂಕ್ ರಜೆ.
ಜನವರಿ 15 (ಭಾನುವಾರ):– ಭಾನುವಾರ ಬ್ಯಾಂಕ್ ರಜೆ.
ಜನವರಿ 22 (ಭಾನುವಾರ):– ಭಾನುವಾರ ಬ್ಯಾಂಕ್ ರಜೆ.
ಜನವರಿ 23 (ಸೋಮವಾರ):– ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ – ತ್ರಿಪುರ ಮತ್ತು ಪಶ್ಚಿಮಬಂಗಾಳ.
ಜನವರಿ 25 (ಬುಧವಾರ):– ರಾಜ್ಯ ದಿನ – ಹಿಮಾಚಲ ಪ್ರದೇಶ.
ಜನವರಿ 26 (ಗುರುವಾರ):– ಗಣರಾಜ್ಯೋತ್ಸವ.
ಜನವರಿ 28 (ಶನಿವಾರ):– ನಾಲ್ಕನೇ ಶನಿವಾರ ಬ್ಯಾಂಕ್ ರಜೆ.
ಜನವರಿ 29 (ಭಾನುವಾರ):– ವಾರಾಂತ್ಯದ ಬ್ಯಾಂಕ್ ರಜೆ.
ಜನವರಿ 31 (ಸೋಮವಾರ):– ಮಿ-ಡ್ಯಾಮ್-ಮಿ-ಫೈ -ಅಸ್ಸಾಂ.