ರಾತ್ರಿ ಹೊತ್ತು ಹಾಸ್ಟೆಲ್ ವಿದ್ಯಾರ್ಥಿನಿಯರು ಹೊರಗೆ ಹೋಗಬಹುದು – ಹೈಕೋರ್ಟ್ ಆದೇಶ
ಸ್ವತಂತ್ರ ರಾಷ್ಟ್ರವಾದ ಭಾರತದಲ್ಲಿ ಹದಿನೆಂಟನೇ ವಯಸ್ಸಿಗೆ ಎಲ್ಲಾ ಬಗೆಯ ಸ್ವಾತಂತ್ರ್ಯ ಹೊಂದಿರುವುದು ಹಾಗೂ ಸರಿಯಾದ ಮತ್ತು ಉತ್ತಮ ಎನ್ನಬಹುದಾದ ಅಂಶವಲ್ಲ ಎಂಬ ಹೇಳಿಕೆಯನ್ನು ಕೇರಳ ಯುನಿವರ್ಸಿಟಿ (Kerala University) ಆಫ್ ಹೆಲ್ತ್ ಸೈನ್ಸಸ್ (KUHS), ಕೇರಳದ ಉಚ್ಛ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯೊಂದರ ಸಂಬಂಧದಲ್ಲಿ ಕೋರ್ಟಿಗೆ ಸಲ್ಲಿಸಿದ ಉಲ್ಲೇಖದಲ್ಲಿ ತಿಳಿಸಿದೆ.
ಈ ಪ್ರಶ್ನೆ ಯಾಕೆ ಉದ್ಭವಿಸಿತು ಎಂದರೆ, ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ನಲ್ಲಿರುವ ಮಹಿಳಾ ವಿದ್ಯಾರ್ಥಿಗಳು ರಾತ್ರಿ 9:30 ಗಂಟೆಯ ನಂತರ ಹೊರಗೆ ಸಂಚರಿಸುವುದಕ್ಕೆ ಪ್ರತಿಬಂಧವಿರುವುದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಇತ್ತೀಚಿಗಷ್ಟೇ ಕೇರಳ ಹೈಕೋರ್ಟ್, ವಿದ್ಯಾರ್ಥಿನಿಯರಿಗೆ ರಾತ್ರಿ 9:30 ಗಂಟೆಯ ನಂತರ ಹೊರಗೆ ಹೋಗುವುದನ್ನು ನಿಷೇಧಿಸಿದ ಅಧಿಸೂಚನೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಅದು, ಇಂತಹ ನಿಷೇಧ ಕೇವಲ ಹೆಣ್ಣು ಮಕ್ಕಳಿಗೆ ಮಾತ್ರ ಏಕಿದೆ, ಪುರಿಷ ವಿದ್ಯಾರ್ಥಿಗಳಿಗೇಕಿಲ್ಲ ಎಂದು ಖಾರವಾಗಿ ಪ್ರಶ್ನಿಸಿತ್ತು. ಕೇರಳ ಯುನಿವರ್ಸಿಟಿ (Kerala University) ಆಫ್ ಹೆಲ್ತ್ ಸೈನ್ಸಸ್ (KUHS), ಕೇರಳದ ಉಚ್ಛ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯೊಂದರ ಸಂಬಂಧದಲ್ಲಿ ಕೋರ್ಟಿಗೆ ಸಲ್ಲಿಸಿದ ಉಲ್ಲೇಖದಲ್ಲಿ ತಿಳಿಸಿದೆ.
ಇದಕ್ಕೂ ಮೊದಲು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ಐದು ಮಹಿಳಾ ವಿದ್ಯಾರ್ಥಿಗಳು ಈ “ರಾತ್ರಿ ಹೊರ ಸಂಚಾರ ನಿಷೇಧ”ವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇನ್ನೊಂದೆಡೆ ಕೇರಳದಲ್ಲಿರುವ ಎಡ ಸರ್ಕಾರವು ನ್ಯಾಯಾಲಯದ ಮುಂದೆ, ಡಿಸೆಂಬರ್ 6 ರಂದೇ ಆದೇಶವನ್ನು ಹೊರಡಿಸಲಾಗಿದ್ದು ಆ ಪ್ರಕಾರ ಹಾಸ್ಟೆಲ್ ಸಮಯಗಳಲ್ಲಿ ಮಹತ್ತರ ಸಡಿಲಿಕೆಯನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದೆ ಹಾಗೂ ನ್ಯಾ. ದೇವನ್ ರಾಮಚಂದ್ರನ್ ಅವರು ಸರ್ಕಾರಕ್ಕೆ ಈ ಆದೇಶವು ಸಮರ್ಪಕವಾಗಿ ಇನ್ನು ಮುಂದೆ ಜಾರಿಯಾಗುವೆಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದಾರೆ.
ಅಲ್ಲದೆ, ಕೋರ್ಟ್, “ಇನ್ನು ಮುಂದೆ ಹೊಸ ಆದೇಶದ ಅನ್ವಯ ಹಾಸ್ಟೆಲ್ ಮುಖ್ಯ ದ್ವಾರಗಳು ಎಂದಿನಂತೆ ಪ್ರತಿ ರಾತ್ರಿ 9:30 ಗಂಟೆಗೆ ಮುಚ್ಚಲ್ಪಡುತ್ತದೆ ಆದರೂ ಅದರ ನಂತರದಲ್ಲಿಯೂ ಸಹ ವಿದ್ಯಾರ್ಥಿಗಳು ಕೆಲ ಷರತ್ತುಗಳಿಗೆ ಒಳಪಟ್ಟಂತೆ ಹಾಸ್ಟೆಲ್ ಪ್ರವೇಶಿಸಬಹುದು. ಆದರೆ, ಇದು ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಅನ್ವಯವಾಗುವುದಿಲ್ಲ, ಏಕೆಂದರೆ ಅವರು ಹೊಸದಾಗಿ ಆಗಮಿಸಿರುತ್ತಾರೆ ಇಲ್ಲಿನ ಸ್ಥಳೀಯತೆಯ ಬಗ್ಗೆ ಅಷ್ಟೊಂದು ಅರಿವಿರುವುದಿಲ್ಲ” ಎಂದು ಕೋರ್ಟ್ ತಿಳಿಸಿದೆ.
ಅಷ್ಟಕ್ಕೂ ಈ ಅರ್ಜಿಯ ಪ್ರಕರಣದಾರರು 2019 ರಿಂದ ಜಾರಿಯಾಗಿದ್ದ ಈ ಆದೇಶದ ಮೂಲಕ ಈ ನಿಷೇಧ ಕ್ರಮವು ಕೇವಲ ತಮ್ಮ ಹಾಸ್ಟೆಲ್ ನಲ್ಲಿ ಮಾತ್ರ ಜಾರಿಯಾಗಿದ್ದು ಪುರುಷರ ಕಾಲೇಜಿಗೆ ಇದು ಅನ್ವಯವಾಗಿಲ್ಲ ಏಕೆ ಎಂದು ಪ್ರಶ್ನಿಸಿದ್ದರು. ಇದನ್ನು ಗಮನಿಸಿದ ನ್ಯಾಯಾಲಯವು ಪುರುಷರಿಗಿರುವ ಸ್ವಾತಂತ್ರ್ಯ ಮಹಿಳೆಯರಿಗೇಕಿಲ್ಲ ಎಂದು ಪ್ರಶ್ನಿಸಿತು ಹಾಗೂ ತನ್ನ ಆದೇಶದಲ್ಲಿ ” ರಾತ್ರಿ ಎಂಬುದು ಭಯ ಪಡದಂತಾಗಲಿ, ಪುರುಷ ಹಾಗೂ ಮಹಿಳಾ ವಿದ್ಯಾರ್ಥಿಗಳಿಗೆ ನಿಯಮಗಳು ಸಮಾನವಾಗಿರಲಿ, ರಾಜ್ಯಾಡಳಿತ ಹಾಗೂ ಪ್ರಾಧಿಕಾರಗಳು ಎರಡೂ ಲಿಂಗಗಳನ್ನು ಸಮಾನ ಹಾಗೂ ಸಶಕ್ತಗೊಳಿಸುವಿಕೆಯತ್ತ ಕೆಲಸ ಮಾಡಬೇಕು” ಎಂದು ಹೇಳಿದೆ.