Hero XPulse 200T 4V: ಸ್ಟೈಲಿಶ್ ಲುಕ್ ಕೊಡೋ ಈ ಬೈಕನ್ನ, ಜಸ್ಟ್ 2500 ಕೊಟ್ಟು ಬುಕ್ ಮಾಡಿ!
ದೇಶದ ಮಾರುಕಟ್ಟೆಯಲ್ಲಿ ದಿನೇ ದಿನೇ ವಾಹನಗಳ ಬಿಡುಗಡೆ ಹೆಚ್ಚುತ್ತಿದ್ದು, ಇದೀಗ ಹೀರೋ ಕಂಪನಿಯು ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ಹೊಸ Hero XPulse 200T 4V ಬೈಕ್ ಅನ್ನು ಬಿಡುಗಡೆ ಮಾಡಿದೆ. ಇದು ತನ್ನ Expuls 200T ಮಾದರಿಯ ಹೊಸ ನವೀಕರಿಸಿದ ಆವೃತ್ತಿ ಆಗಿದೆ. ಸ್ಟೈಲಿಶ್ ಲುಕ್ ಕೊಡೋ ಈ ಬೈಕನ್ನ, ನೀವು ಜಸ್ಟ್ 2,500 ಕೊಟ್ಟು ಬುಕ್ ಮಾಡಬಹುದು. ಇನ್ನೂ, ಈ ಬೈಕ್ ನ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ಈ ಬೈಕ್ ನ ಎಕ್ಸ್ ಶೋ ರೂಂ ಬೆಲೆ ರೂ. 1,25,726 ಆಗಿದ್ದು, ಈ ಹೊಸ ನವೀಕರಿಸಿದ ಆವೃತ್ತಿಯು BS6 200cc 4 ವಾಲ್ವ್ ಎಂಜಿನ್ ಹೊಂದಿದೆ. ಈ ಆಯಿಲ್ ಕೂಲ್ಡ್ ಎಂಜಿನ್‌ನ ಶಕ್ತಿಯು 19 HP ಮತ್ತು 17.3 Nm ಟಾರ್ಕ್ ಆಗಿದ್ದು, ಮೊದಲಿದ್ದ ಮಾದರಿಗಿಂತ ಈ ಹೊಸ ಬೈಕ್‌ನ ಶಕ್ತಿ ಶೇಕಡಾ 6 ರಷ್ಟು ಜಾಸ್ತಿಯಾಗಿದ್ದು, ಟಾರ್ಕ್ ಕೂಡ ಶೇಕಡಾ 5 ರಷ್ಟು ಹೆಚ್ಚಿದೆ.
ಇನ್ನೂ ಈ ಬೈಕ್ ನ ವಿನ್ಯಾಸದ ಬಗ್ಗೆ ಹೇಳಬೇಕಾದರೆ, ಈ ಹೊಸ ಆವೃತ್ತಿಯಲ್ಲಿ ಕೆಂಪು, ಹಳದಿ ಬಣ್ಣಗಳಂತಹ ಇನ್ನೂ ಕೆಲವು ಕಣ್ಮನ ಸೆಳೆಯುವ ಬಣ್ಣಗಳಲ್ಲಿ ಲಭ್ಯವಿದೆ. ಇದರಲ್ಲಿ ವೃತ್ತಾಕಾರದ ಪೂರ್ಣ ಎಲ್ಇಡಿ ಹೆಡ್ ಲ್ಯಾಂಪ್ ಹಾಗೆಯೇ ಇರುತ್ತದೆ. ಆದರೆ ಇದರ ಸ್ಥಾನವನ್ನು ಮಾತ್ರ ಬದಲಾಗಿದೆ. ಇದು 37 ಎಂಎಂ ಮುಂಭಾಗದ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ 7-ಹಂತದ ಹೊಂದಾಣಿಕೆ ಮಾಡಬಹುದಾದ ಮೊನೊ ಶಾಕ್ ಸಸ್ಪೆನ್ಷನ್ ಅನ್ನು ಸಹ ಪಡೆಯುತ್ತದೆ. ಹಾಗೇ ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳಿವೆ.
ಹಾಗೇ ಸೀಟಿನ ಕೆಳ ಭಾಗದಲ್ಲಿ USB ಚಾರ್ಜರ್ ಸೌಲಭ್ಯವಿದ್ದು, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ ತಂತ್ರಜ್ಞಾನವನ್ನು ಒದಗಿಸುತ್ತದೆ. ಜೊತೆಗೆ LCD ಉಪಕರಣ ಕ್ಲಸ್ಟರ್ ಇದ್ದು, ಮೊಬೈಲ್ ಸಂಪರ್ಕ, ಕರೆ ಅಲರ್ಟ್, ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಗೇರ್ ಇಂಡಿಕೇಟರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಈ ಹೊಸ ಬೈಕ್ ನಲ್ಲಿ ನೀಡಲಾಗಿದೆ. ಇನ್ನೂ ಈ Hero XPulse 200T 4V ಬೈಕ್ ಹೋಂಡಾ CB 200X, Honda XBlade, TVS Apache RTR 160 4V ಮತ್ತು ಕೀವೇ SR 125 ನಂತಹ ಬೈಕ್‌ಗಳೊಂದಿಗೆ ಸ್ಪರ್ಧಿಸಲಿದೆ. ಈ ಬೈಕ್ ಅನ್ನು ಜಸ್ಟ್ 2,500 ಕೊಟ್ಟು ಬುಕ್ ಮಾಡಿ, ನಿಮ್ಮದಾಗಿಸಿಕೊಳ್ಳಿ.