ಯುವಕ, ಯುವತಿಯರಿಗೆ 18 ವರ್ಷಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸೂಕ್ತವಲ್ಲ, ಆರೋಗ್ಯ ವಿವಿ ಕೋರ್ಟಿಗೆ ಅಫಿಡವಿಟ್ !
ಯುವಕ, ಯುವತಿಯರಿಗೆ 18ನೇ ವರ್ಷಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡುವುದು ಸೂಕ್ತವಲ್ಲ ಮತ್ತು ಸಮಾಜಕ್ಕೂ ಒಳ್ಳೆಯದಲ್ಲ ಎಂದು ಕೇರಳ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (ಕೆಯುಎಚ್‌ಎಸ್) ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.ಮ್ ಕೋಝಿಕ್ಕೋಡ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ರಾತ್ರಿನಿರ್ದಿಷ್ಟ ಸಮಯದ ನಂತರ ಹಾಸ್ಟೆಲ್ ವಿದ್ಯಾರ್ಥಿಗಳ ಚಲನವಲನ ನಿರ್ಬಂಧದ ವಿರುದ್ಧ ವಿದ್ಯಾರ್ಥಿನಿ ಒಬ್ಬಳು ಅರ್ಜಿ ಸಲ್ಲಿಸಿದ್ದಳು. ಈ ವಿಚಾರಣೆ ವೇಳೆ, ರಾತ್ರಿ ಜೀವನವು ವಿದ್ಯಾರ್ಥಿಗಳಿಗೆ ಒಳ್ಳೆಯದಲ್ಲ ಎಂದು ವಿಶ್ವವಿದ್ಯಾಲಯವು ವಾದಿಸಿದೆ.
ಆದರೆ ಮಧ್ಯ ಪ್ರವೇಶಿಸಿದ ಕೇರಳ ಸರ್ಕಾರ, ಡಿಸೆಂಬರ್ 6 ರಂದು ಹಾಸ್ಟೆಲ್ ಸಮಯವನ್ನು ಗಣನೀಯವಾಗಿ ಸಡಿಲಿಸುವ ಆದೇಶವನ್ನು ಹೊರಡಿಸಿದೆ ಎಂದು ಉಚ್ಚ ನ್ಯಾಯಾಲಯಕ್ಕೆ ತಿಳಿಸಿತು. ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರು ಅದನ್ನು “ತಕ್ಷಣದ ಜಾರಿಗೆ” ನಿರ್ದೇಶಿಸಿದರು.
ಹೊಸ ಆದೇಶದ ಪ್ರಕಾರ, ರಾತ್ರಿ 9.30 ರೊಳಗೆ ಹುಡುಗ ಮತ್ತು ಹುಡುಗಿಯರ ಎರಡೂ ಹಾಸ್ಟೆಲ್‌ಗಳ ಗೇಟ್‌ಗಳನ್ನು ಮುಚ್ಚಬೇಕಾಗಿದ್ದರೂ, 9.30ರ ನಂತರ ಇನ್ನೂ ಹೊಸ ಪರಿಸರ ಮತ್ತು ಪ್ರದೇಶಕ್ಕೆ ಒಗ್ಗಿಕೊಳ್ಳದ ಮೊದಲ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಇತರೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಿಸಲು ಕೆಲವು ಕನಿಷ್ಠ ಷರತ್ತುಗಳ ಮೇಲೆ ಅವಕಾಶ ನೀಡಬೇಕು ಎಂದು ಹೇಳಿರುವುದನ್ನು ನ್ಯಾಯಾಲಯವು ಗಮನಿಸಿ ಸರ್ಕಾರದ ಆದೇಶ ಪಾಲಿಸಲು ಅನುಮತಿ ನೀಡಿದೆ.
ಸರ್ಕಾರದ ಈ ಆದೇಶವನ್ನು ನ್ಯಾಯಾಲಯವು “ಸ್ವಾಗತಾರ್ಹ ಕ್ರಮ” ಎಂದಿದೆ. ವೈದ್ಯಕೀಯ ಕಾಲೇಜುಗಳಿಗೆ ಸಂಬಂಧಿಸಿದ ಎಲ್ಲಾ ಪ್ರಾಂಶುಪಾಲರು ಮತ್ತು ಇತರ ಅಧಿಕಾರಿಗಳಿಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಮೇಲಿನ ಸರ್ಕಾರದ ಆದೇಶದ ಪ್ರಕಾರ ಕಾರ್ಯನಿರ್ವಹಿಸುವಂತೆ ನಾನು ನಿರ್ದೇಶಿಸುತ್ತೇನೆ ಎಂದು ನ್ಯಾಯಮೂರ್ತಿ ರಾಮಚಂದ್ರನ್ ಹೇಳಿದ್ದಾರೆ.
ಇನ್ನೊಂದೆಡೆ, ವಿಶ್ವವಿದ್ಯಾನಿಲಯವು ಅಫಿಡವಿಟ್ ಸಲ್ಲಿಸಿ “ವಯಸ್ಸಿನ ಪ್ರಬುದ್ಧತೆಯ ಜೊತೆಗೇ ಮೆದುಳಿನ ಪಕ್ವತೆಯನ್ನು ಆಗುವುದಿಲ್ಲ” ಮತ್ತು ಹದಿಹರೆಯದವರ ಮೆದುಳು, ಮಾದಕ ವ್ಯಸನ, ದುರ್ಬಲ ಚಾಲನೆ ಮತ್ತು ಅಸುರಕ್ಷಿತ ಲೈಂಗಿಕತೆಯಂತಹ ಅಪಾಯಕಾರಿ ನಡವಳಿಕೆಗೆ ಗುರಿಯಾಗುತ್ತದೆ”. ಇದನ್ನು ಪುಷ್ಟೀಕರಿಸಲು ಹಲವು ವೈಜ್ಞಾನಿಕ ಪುರಾವೆಗಳಿವೆ ಎಂದು ಹೇಳಿಕೊಂಡಿದೆ.