Watch Video: ಪೆಟ್ರೋಲ್ ನಿಂದ ಮಾತ್ರವಲ್ಲ ನೀರಿನಿಂದ ಕೂಡ ಬೈಕ್ ಓಡುತ್ತೆ | ಹೇಗೆ ಸಾಧ್ಯ ಎಂಬುದಕ್ಕೆ ಇಲ್ಲಿದೆ ಮಾಹಿತಿ
ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಹಾಗೆ ಬೈಕ್ ಗೆ ಪೆಟ್ರೋಲ್ ಹಾಕಿದ್ರೆ ಅದು ಓಡುತ್ತೆ. ಆದರೆ ಇಲ್ಲೊಂದು ಯುಟ್ಯೂಬ್ ವಿಡಿಯೋದಲ್ಲಿ ಬೈಕ್ ಗೆ ಪೆಟ್ರೋಲ್ ಬದಲಾಗಿ ನೀರನ್ನು ಕೂಡ ಬಳಸಿ ಓಡಿಸಬಹುದು ಎಂದು ಹೇಳಲಾಗಿದೆ. ಕೇಳಿದರೆ ಆಶ್ಚರ್ಯ ಎನಿಸುತ್ತದೆ ಅಲ್ವಾ!! ಇದು ಹೇಗೆ ಸಾಧ್ಯ ಎಂಬ ಯೋಚನೆ ಉಂಟಾಗಬಹುದು. ಹೇಗೆಂದರೆ, ಬೈಕನ್ನು ಕೇವಲ ನೀರು ಮಾತ್ರ ಬಳಸಿ ಓಡಿಸಲು ಸಾಧ್ಯವಿಲ್ಲ, ಬದಲಾಗಿ ನೀರಿನ ಜೊತೆಗೆ ರಾಸಾಯನಿಕವನ್ನು ಬಳಸಿ, ಫ್ಯುಯೆಲ್ ತಯಾರಿಸಿದಾಗ ಅದರಿಂದ ಬೈಕ್ ಎಂಜಿನ್ ಸ್ಟಾರ್ಟ್ ಆಗುತ್ತದೆ ಎನ್ನಲಾಗಿದೆ. ಇನ್ನೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಯೂಟ್ಯೂಬ್ ವೀಡಿಯೊದ ಪ್ರಕಾರ, ಕ್ಯಾಲ್ಸಿಯಂ ಕಾರ್ಬೈಡ್ ಗೆ ನೀರನ್ನು ಬೆರೆಸಿದಾಗ ಉಂಟಾಗುವಂತಹ ರಾಸಾಯನಿಕ ಕ್ರಿಯೆ ಅಸಿಟಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತದೆ. ಅಸಿಟಿಲೀನ್ ಅನಿಲ ಬೆಂಕಿಯ ಸಂಪರ್ಕಕ್ಕೆ ಬಂದಾಗ ತುಂಬಾ ವೇಗವಾಗಿ ಉರಿಯಲು ಆರಂಭವಾಗುತ್ತದೆ. ಆಗ ನೀವು ಬೈಕ್‌ನ ಇಂಜಿನ್ ಸ್ಟಾರ್ಟ್ ಮಾಡಬಹುದು.
ಇನ್ನೂ, ವೀಡಿಯೊದಲ್ಲಿ, ಮೊದಲು ಬೈಕ್ ನ ಟ್ಯಾಂಕ್ ಗೆ ಬಾಟಲ್ ನಲ್ಲಿದ್ದ ಪೂರ್ತಿ ನೀರನ್ನು ತುಂಬಿಸಿದ್ದಾರೆ. ನಂತರ ಒಂದು ಕುಕ್ಕರ್ ತೆಗೆದುಕೊಂಡು ಅದರಲ್ಲಿ ಸ್ವಲ್ಪ ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಹಾಕಿದ್ದಾರೆ. ನಂತರ ಕುಕ್ಕರ್‌ಗೆ ಸ್ವಲ್ಪ ನೀರು ಹಾಕಿ ಅದನ್ನು ತಕ್ಷಣ ಮುಚ್ಚಿದ್ದಾರೆ. ಹಾಗೇ ಗ್ಯಾಸ್ ಹೊರಬರುವ ಕುಕ್ಕರ್‌ನ ಮೇಲ್ಭಾಗದಲ್ಲಿ IV ಸೆಟ್ ಇದ್ದು, IV ಸೆಟ್‌ನ ಇನ್ನೊಂದು ತುದಿಯಲ್ಲಿರುವ ಪಿನ್ ಪೈಪ್ ಅನ್ನು ಬೈಕ್ ಎಂಜಿನ್ ಗೆ ಗಾಳಿ ಸೇರಿಸುವ ಪೈಪ್‌ಗೆ ಜೋಡಿಸಲಾಗಿದೆ.
ನಂತರ ಬೈಕ್ ಅನ್ನು ಸ್ಟಾರ್ಟ್ ಮಾಡಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ನೋಡಬಹುದು. ಆದರೆ ಎಷ್ಟೇ ಪ್ರಯತ್ನಪಟ್ಟರೂ ಬೈಕ್ ಸ್ಟಾರ್ಟ್ ಆಗುತ್ತಿಲ್ಲ. ನಂತರ ಮತ್ತೆ ಕುಕ್ಕರ್ ಗೆ ಇನ್ನಷ್ಟು ಕ್ಯಾಲ್ಸಿಯಂ ಕಾರ್ಬೈಡ್ ಮತ್ತು ನೀರು ಹಾಕಿ, ಪುನಃ ಬೈಕ್ ಸ್ಟಾರ್ಟ್ ಮಾಡಲಾಯಿತು. ಈ ಬಾರಿ ಬೈಕ್ ಬೇಗನೆ ಸ್ಟಾರ್ಟ್ ಆಗಿ ಚಲಿಸಿದೆ.
ಇದು ನೀರಿನ ಜೊತೆಗೆ ರಾಸಾಯನಿಕ ಪ್ರಕ್ರಿಯೆಯಿಂದ ಸ್ಟಾರ್ಟ್ ಆಗಿರುವ ಬೈಕ್ ಹಾಗಾಗಿ ಪೆಟ್ರೋಲ್ ಬೈಕ್ ನಲ್ಲಿ ಸಿಗುವ ಓಡಾಟದ ಸ್ಮೂತ್ನೆಸ್ ಈ ಬೈಕ್ ನಲ್ಲಿ ಇರಲಿಲ್ಲ. ಇದೀಗ ಈ ಯುಟ್ಯೂಬ್ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ವೀಕ್ಷಕರು ವಿಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ, ನೀವು ಖುದ್ದಾಗಿ ಅಥವಾ ತಜ್ಞರ ಅನುಪಸ್ಥಿತಿಯಲ್ಲಿ ಇಂತಹ ಯಾವುದೇ ಪ್ರಯತ್ನವನ್ನು ಮಾಡಬೇಡಿ.