ರಕ್ಷಿತ್ ಶೆಟ್ಟಿ ನಿರ್ಮಾಣದ ಹೊಸ ಚಿತ್ರದಿಂದ ನಟ ರಿಷಬ್ ಶೆಟ್ಟಿ ಔಟ್!!!
ನಟ ನಿರ್ದೇಶಕ, ರಿಷಬ್ ಶೆಟ್ಟಿ ರಾತ್ರೋ ರಾತ್ರಿ ಫ್ಯಾನ್ ಇಂಡಿಯಾ ಆಗಿ ಮಿಂಚಿದ್ದು, ಇತ್ತೀಚೆಗೆ ಎಲ್ಲರ ಪಾಲಿನ ಸೆಂಟರ್ ಆಫ್ ಅಟ್ರಾಕ್ಷನ್ ಆಗಿ ಬಿಟ್ಟಿದ್ದಾರೆ. ಅಷ್ಟೆ ಅಲ್ಲ ಇವರ ಬಗ್ಗೆ ಅಭಿಮಾನಿ ಬಳಗದಲ್ಲಿ ದೊಡ್ಡ ಮಟ್ಟದಲ್ಲೇ ಚರ್ಚೆ ನಡೆಯುತ್ತಿದೆ. ಶೆಟ್ರ ಮುಂದಿನ ನಡೆಯೇನು ಎಂಬ ಬಗ್ಗೆ ಹೆಚ್ಚಿನ ಕೂತೂಹಲ ಬುಗಿಲೆದ್ದಿದೆ.
ನಟ ರಕ್ಷಿತ್ ಶೆಟ್ಟಿ, ತಮ್ಮ ಪರಂವಃ ಸ್ಟುಡಿಯೋ ಅಡಿಯಲ್ಲಿ ನಿರ್ಮಾಪಕರಾಗಿ ಸಾಲು ಸಾಲು ಚಿತ್ರನಿರ್ಮಾಣಕ್ಕೆ ಮುಂದಾಗಿದ್ದಾರೆ. ಇತ್ತೀಚೆಗಷ್ಟೇ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ಘೋಷಿಸಿದ್ದ ಪರಂವಃ ಸ್ಟುಡಿಯೋ ದಿಂದ ಹೊಸ ವಿಚಾರವೊಂದು ಹೊರಬಿದ್ದಿದೆ. ಕಾಂತಾರ ಸಿನೆಮಾದ ಬಳಿಕ ದೊಡ್ಡ ನೇಮ್, ಫೇಮ್ ಪಡೆದುಕೊಂಡ ರಿಷಬ್ ಶೆಟ್ಟಿಗೆ ಸಿನೆಮಾದ ಯಶಸ್ಸು ತಲೆಗೆ ಏರಿತಾ?? ಎಂಬ ಪ್ರಶ್ನೆ ಇತ್ತೀಚೆಗಷ್ಟೇ ಮೂಡಿತ್ತು. ಆದರೆ ಅದಕ್ಕೆ ಉತ್ತರ ಮಾತ್ರ ಶೂನ್ಯ ಎಂದು ಕೂಡ ಸಾಬೀತಾಗಿತ್ತು. ಇದೀಗ, ಕಾಂತಾರ ಯಶಸ್ಸಿನಲ್ಲಿ ತೇಲುತ್ತಿರುವ ರಿಷಬ್ ಶೆಟ್ಟಿ ಅವರು ಸ್ವತಃ ಚಿತ್ರದಿಂದ ಹೊರನಡೆದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಇತ್ತೀಚೆಗಷ್ಟೇ ನಟ ದಿಗಂತ್ ಅವರು ಮಾಧ್ಯಮ ಸಂವಾದದ ಸಂದರ್ಭ ರಿಷಬ್ ಶೆಟ್ಟಿ ಅವರು ಈ ಪ್ರಾಜೆಕ್ಟ್ ನಿಂದ ಹೊರ ಬಿದ್ದ ವಿಚಾರವನ್ನು ಬಹಿರಂಗಪಡಿಸಿದ್ದು, ಚಿತ್ರತಂಡವು ರಿಷಬ್ ಅವರ ಬದಲಿಗೆ ಆ ಪಾತ್ರಕ್ಕೆ ಮತ್ತೋರ್ವ ನಟನ ಹುಡುಕಾಟದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.
ಇದರ ನಡುವೆ ಈ ಎಲ್ಲ ಬೆಳವಣಿಗೆಯ ಕುರಿತಾಗಿ ಪ್ರೊಡಕ್ಷನ್ ಹೌಸ್ ಇಲ್ಲವೇ ನಿರ್ದೇಶಕ ಅಥವಾ ನಟ ಯಾರು ಕೂಡ ಗುಟ್ಟು ಬಿಟ್ಟು ಕೊಟ್ಟಿಲ್ಲ. ಆದರೆ, ಈ ಕಾಮಿಡಿ ಎಂಟರ್ಟೈನರ್ನಲ್ಲಿ ರಿಷಬ್ ಶೆಟ್ಟಿ ಬದಲಿಗೆ ನಟ ಯೋಗೇಶ್ ಅಲಿಯಾಸ್ ಲೂಸ್ ಮಾದ ಯೋಗಿ ಇರಲಿದ್ದಾರೆ ಎಂಬ ಸುದ್ಧಿ ಹರಿದಾಡುತ್ತಿದೆ.
ಅಭಿಜಿತ್ ಮಹೇಶ್ ಚೊಚ್ಚಲ ನಿರ್ದೇಶನದ ‘ಬ್ಯಾಚುಲರ್ ಪಾರ್ಟಿ’ಗೆ ರಕ್ಷಿತ್ ಶೆಟ್ಟಿ ಪ್ರೊಡ್ಯೂಸರ್ ಜಿ.ಎಸ್. ಗುಪ್ತಾ ಅವರೊಂದಿಗೆ ಚಿತ್ರವನ್ನು ನಿರ್ಮಿಸುತ್ತಿರುವ ನಟ ರಕ್ಷಿತ್ ಶೆಟ್ಟಿ, ಈ ಸಿನಿಮಾವು ಮದುವೆಗಳು ಮತ್ತು ಲವ್ ಲೈಫ್ ಅನ್ನು ಸ್ಟೈಲಿಶ್ ಮತ್ತು ವಿಡಂಬನಾತ್ಮಕವಾಗಿ ಪ್ರದರ್ಶಿಸುವ ಕುರಿತು ಮಾಹಿತಿ ನೀಡಿದ್ದಾರೆ.
ಬ್ಯಾಚುಲರ್ ಪಾರ್ಟಿಗೆ ಅರ್ಜುನ್ ರಾಮು ಸಂಗೀತ ಸಂಯೋಜನೆ ಮಾಡಿದ್ದು, ಅರವಿಂದ್ ಕಶ್ಯಪ್ ಅವರ ಛಾಯಾಗ್ರಹಣವಿದೆ. ಪವನ್ ಕುಮಾರ್, ಸೌಮ್ಯ ಜಗನ್ಮೂರ್ತಿ, ಬಾಲಾಜಿ ಮನೋಹರ್, ಪ್ರಕಾಶ್ ತುಮಿನಾಡ್, ರಘು ರಾಮನಕೊಪ್ಪ, ಶೋಭರಾಜ್ ಮತ್ತು ಗುರುಪ್ರಸಾದ್ ಬ್ಯಾಚುಲರ್ ಪಾರ್ಟಿಯ ಇತರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಯೋಗಿ ಅವರು ಕೊನೆಯದಾಗಿ ಡಾಲಿ ಧನಂಜಯ್ ಅಭಿನಯದ ಹೆಡ್ಬುಷ್ ಸಿನಿಮಾದಲ್ಲಿ ಗಂಗಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾದಲ್ಲಿ, ದಿಗಂತ್ ಜೊತೆಗೆ ಅಚ್ಯುತ್ ಕುಮಾರ್ ಸಹ ನಾಯಕರಾಗಿ ನಟಿಸಿದ್ದಾರೆ ಎನ್ನಲಾಗಿದೆ.
ಅಭಿಜಿತ್ ಅವರ ನಿರ್ದೇಶನದಲ್ಲಿ ಪ್ರಮುಖ ತಾರಾಗಣದೊಂದಿಗೆ ಸಿನಿಮಾ ತಯಾರಿ ನಡೆಯುತ್ತಿರುವುದರಿಂದ, ಈ ಬೆಳವಣಿಗೆಯ ಬಗ್ಗೆ ಪ್ರೊಡಕ್ಷನ್ ಹೌಸ್ ಅಧಿಕೃತ ದೃಢೀಕರಣವನ್ನು ಶೀಘ್ರದಲ್ಲೇ ನೀಡಲಿದೆ ಎನ್ನಲಾಗುತ್ತಿದೆ.