ಗ್ರಾಮ ಲೆಕ್ಕಿಗರ ನೇಮಕ | ದಾಖಲೆ ಪರಿಶೀಲನೆ ಪಟ್ಟಿ, ದಿನಾಂಕಗಳ ಮಾಹಿತಿ ಇಲ್ಲಿದೆ.

ಈಗಾಗಲೇ ಮಂಡ್ಯ ಜಿಲ್ಲೆಯ 54 ಗ್ರಾಮ ಲೆಕ್ಕಿಗ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿ 2 ವರ್ಷಗಳು ಕಳೆದರೂ ಇನ್ನೂ ಸಹ ನೇಮಕ ಪ್ರಕ್ರಿಯೆ ಮುಗಿದಿಲ್ಲ. ಜಿಲ್ಲೆಯಲ್ಲಿ ಇನ್ನೂ ಅಗತ್ಯವಾಗಿ 136 ಗ್ರಾಮಲೆಕ್ಕಿಗರ ಹುದ್ದೆಗಳು ಬಾಕಿ ಇವೆ. ಮುಂದಿನ ದಿನಗಳಲ್ಲಿ ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾಗಲಿದ್ದು, ಗ್ರಾಮಲೆಕ್ಕಿಗರ ಸೇವೆ ಅತ್ಯವಶ್ಯಕವಾಗಿರುವ ಹಿನ್ನೆಲೆ, ಜರೂರಾಗಿ ಈ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲು ಪ್ರಸ್ತುತ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದಾರೆ.

ಹೌದು ಮಂಡ್ಯ ಜಿಲ್ಲಾ ಕಂದಾಯ ಘಟಕದ ವಿವಿಧ ತಾಲ್ಲೂಕುಗಳಲ್ಲಿ ಗ್ರೂಪ್ ಸಿ ವೃಂದದಲ್ಲಿ ಖಾಲಿ ಇದ್ದು 54 ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮಾಡಲು 2020 ರ ಮಾರ್ಚ್‌ 20 ರಂದು ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿತ್ತು.

ಈಗಾಗಲೇ ಹುದ್ದೆಗಳ ನೇಮಕ ಸಂಬಂಧ 1:5 ಅನುಪಾತದಲ್ಲಿ ಎರಡು ಬಾರಿ ಮೂಲ ದಾಖಲೆಗಳ ಪರಿಶೀಲನೆಗೆ ಅವಕಾಶ ನೀಡಿ, ಈ ಪ್ರಕ್ರಿಯೆ ನಡೆಸಲಾಗಿತ್ತು. ಆದರೂ ಸಹ 54 ಹುದ್ದೆಗಳ ಭರ್ತಿಗೆ ಸಾಕಷ್ಟು ಅಭ್ಯರ್ಥಿಗಳು ದಾಖಲೆ ಪರಿಶೀಲನೆಗೆ ಹಾಜರಾಗದ ಕಾರಣ ಈಗ ಮತ್ತೊಂದು ಅವಕಾಶ ನೀಡಿ, 270 ಅಭ್ಯರ್ಥಿಗಳ 06:10 ಅನುಪಾತದ ಹೆಚ್ಚುವರಿ ಪರಿಶೀಲನಾ ಪಟ್ಟಿಯನ್ನು ಗ್ರಾಮ ಲೆಕ್ಕಿಗರ ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಬಿಡುಗಡೆ ಮಾಡಿದ್ದಾರೆ.

ಪ್ರಸ್ತುತ ಪ್ರಕಟವಾಗಿರುವ ಹೆಚ್ಚುವರಿ ಪರಿಶೀಲನಾ ಪಟ್ಟಿಯ ಒಟ್ಟು ಅಭ್ಯರ್ಥಿಗಳ ಸಂಖ್ಯೆ 270 ಆಗಿದ್ದು ಕೆಟಗರಿವಾರು ಸಂಖ್ಯೆ ಕೆಳಗಿನಂತಿದೆ.

 • ಜೆನೆರಲ್ ಕೆಟಗರಿ ಅಭ್ಯರ್ಥಿಗಳು : 135
 • ಪರಿಶಿಷ್ಟ ಜಾತಿ ಅಭ್ಯರ್ಥಿಗಳು : 40
 • ಪರಿಶಿಷ್ಟ ಪಂಗಡ ಅಭ್ಯರ್ಥಿಗಳು : 10
 • 2A ಕೆಟಗರಿ ಅಭ್ಯರ್ಥಿಗಳು: 40
 • 2B ಕೆಟಗರಿ ಅಭ್ಯರ್ಥಿಗಳು : 10
 • 3A ಕೆಟಗರಿ ಅಭ್ಯರ್ಥಿಗಳು : 10
 • 3B ಕೆಟಗರಿ ಅಭ್ಯರ್ಥಿಗಳು : 15
 • ಪ್ರವರ್ಗ-1 ಅಭ್ಯರ್ಥಿಗಳು : 10

ಮೇಲೆ ನೀಡಲಾದ ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳು ದಿನಾಂಕ 26-12-2022 ರಂದು ಬೆಳಿಗ್ಗೆ 10-00 ರಿಂದ ಸಂಜೆ 05-00 ಗಂಟೆಯವರೆಗೆ ಮೂಲ ದಾಖಲೆಗಳ ಪರಿಶೀಲನೆಗೆ, ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಹಾಜರಾಗಲು ತಿಳಿಸಲಾಗಿದೆ.

ಕರ್ನಾಟಕ ಗ್ರಾಮಲೆಕ್ಕಿಗ ಹುದ್ದೆಗಳಿಗೆ ಮೂಲ ದಾಖಲೆಗಳ ಸಮಯದಲ್ಲಿ ಸಲ್ಲಿಸಬೇಕಾದ ದಾಖಲೆಗಳ ವಿವರ :

 • ಇತ್ತೀಚಿನ 2 ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರಗಳು.
 • ದ್ವಿತೀಯ ಪಿಯುಸಿ ಮೂಲ ಅಂಕಪಟ್ಟಿ
 • ವಯಸ್ಸಿನ ಬಗ್ಗೆ ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಅಥವಾ ಜನನ ಪ್ರಮಾಣ ಪತ್ರ ಮೂಲ ಪ್ರತಿ.

ಮೀಸಲಾತಿ ಅಡಿ ಅರ್ಜಿ ಸಲ್ಲಿಸಿದ್ದಲ್ಲಿ ಈ ಕೆಳಗಿನ ದಾಖಲೆಗಳನ್ನು ಹಾಜರುಪಡಿಸಬೇಕು :

 • ಮೀಸಲಾತಿ ಅಡಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಚಾಲ್ತಿಯಲ್ಲಿರುವ ನಿಗದಿತ ನಮೂನೆಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪಡೆದ ಮೂಲ ಪ್ರಮಾಣ ಪತ್ರ ಹಾಜರುಪಡಿಸಬೇಕು.
 • ಗ್ರಾಮೀಣ ಮೀಸಲಾತಿ ಹಾಗೂ ಕನ್ನಡ ಮಾಧ್ಯಮ ಮೀಸಲಾತಿ ಕೋರಿರುವ ಅಭ್ಯರ್ಥಿಗಳು ಸಕ್ಷಮ ಪ್ರಾಧಿಕಾರದಿಂದ ಪಡೆದ ಮೂಲ ಪ್ರಮಾಣ ಪತ್ರಗಳನ್ನು ಹಾಜರುಪಡಿಸಬೇಕು.
 • ಅಂಗವಿಕಲ ಮೀಸಲಾತಿ ಕೋರಿರುವ ಅಭ್ಯರ್ಥಿಗಳು ನಿಗದಿ ಪಡಿಸಿದ ನಮೂನೆಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪಡೆದ ಮೂಲ ಅಂಗವಿಕಲ ಪ್ರಮಾಣ ಪತ್ರ ನೀಡುವುದು.
 • ತೃತೀಯ ಲಿಂಗ ಮೀಸಲಾತಿ ಕೋರಿರುವ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪಡೆದ ಮೂಲ ಪ್ರಮಾಣ ಪತ್ರ ಹಾಜರುಪಡಿಸಬೇಕು.
 • ಮಾಜಿ ಸೈನಿಕರ ಮೀಸಲಾತಿಯಡಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಸೈನಿಕ ಸೇವೆಯಲ್ಲಿ ಬಿಡುಗಡೆಯಾದ / ಮುಕ್ತಿಹೊಂದಿದ ಬಗೆಗಿನ ಪ್ರಮಾಣ ಪತ್ರ ಹಾಜರುಪಡಿಸಬೇಕು.
 • ಯೋಜನಾ ನಿರಾಶ್ರಿತ ಮೀಸಲಾತಿಯಡಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪಡೆದ ಮೂಲ ಪ್ರಮಾಣ ಪತ್ರ ಹಾಜರುಪಡಿಸಬೇಕು.
 • ಸರ್ಕಾರಿ ಸೇವೆಯಲ್ಲಿ ಇರುವವರು (ರಾಜ್ಯ / ಕೇಂದ್ರ) ಸಂಬಂಧಪಟ್ಟ ಇಲಾಖೆಯ ಸಕ್ಷಮ ಪ್ರಾಧಿಕಾರದಿಂದ ಪಡೆದ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕು. (ಎನ್‌ಒಸಿ)
 • ವಿಧವಾ ಅಭ್ಯರ್ಥಿಯಾದಲ್ಲಿ ಸಕ್ಷಮ ಪ್ರಾಧಿಕಾರದಿಂದ ಪಡೆದ ಮೂಲ ಪ್ರಮಾಣ ಪತ್ರ ಹಾಜರುಪಡಿಸಬೇಕು.
 • ಜೀತಮುಕ್ತಿ ಹೊಂದಿದ ಅಭ್ಯರ್ಥಿ ವಯಸ್ಸಿನ ಸಡಿಲಿಕೆ ಬಯಸಿದ್ದಲ್ಲಿ ಸಕ್ಷಮ ಪ್ರಾಧಿಕಾರದಿಂದ ಪಡೆದ ಮೂಲ ಪ್ರಮಾಣ ಪತ್ರ ಹಾಜರುಪಡಿಸಬೇಕು.
 • ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ಬಗ್ಗೆ Acknowledgement ಹಾಗೂ ಅರ್ಜಿ ಶುಲ್ಕ ಪಾವತಿಸಿದ ಬಗ್ಗೆ ಬ್ಯಾಂಕ್ ಚಲನ್ ಪ್ರತಿ / ಆನ್‌ಲೈನ್‌ ನಿಂದ ಪಡೆದ ಚಲನ್ ಪ್ರತಿಯನ್ನು ಹಾಜರುಪಡಿಸಬೇಕು.

ಈಗಾಗಲೇ ಗ್ರಾಮಲೆಕ್ಕಿಗ ಹುದ್ದೆಗೆ ಅರ್ಜಿ ಹಾಕಿದ ಅಭ್ಯರ್ಥಿಗಳು ಈ ಮೇಲಿನಂತೆ ತಿಳಿಸಿದ ದಾಖಲೆಗಳ ಪೈಕಿ ತಮಗೆ ಅನ್ವಯವಾಗುವ ಎಲ್ಲ ದಾಖಲೆಗಳನ್ನು, ಹಾಗೂ ಒಂದು ಪ್ರತಿ ದೃಢೀಕೃತ ದಾಖಲೆಗಳನ್ನು ಲಗತ್ತಿಸಬಹುದು ಎಂದು ಗ್ರಾಮ ಲೆಕ್ಕಿಗರ ನೇರ ನೇಮಕಾತಿ ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Leave A Reply

Your email address will not be published.