ವೀರಪ್ಪನ್‌ ಸಹಚರ ಜೈಲಿನಿಂದ ಬಿಡುಗಡೆ | 29ವರ್ಷಗಳ ಸೆರೆವಾಸದ ನಂತರ ಕುಟುಂಬ ಸೇರ್ಪಡೆ

Share the Article

ಕಾಡುಗಳ್ಳ ವೀರಪ್ಪನ್‌ ಸಹಚರ ಜ್ಞಾನಪ್ರಕಾಶ್‌ ಇಂದು ಬೆಳಗ್ಗೆ ಮೈಸೂರಿನ ಕೇಂದ್ರ ಕಾರಾಗೃಹದಿಂದ ಜಾಮೀನಿನ ಮೂಲಕ ಹೊರಗಡೆ ಬಂದಿದ್ದಾರೆ. ಜೀವಾವಧಿ ಶಿಕ್ಷೆಗೊಳಗಾಗಿದ್ದ ವೀರಪ್ಪನ್‌ ಸಹಚರ ಇಂದು ಬಿಡುಗಡೆ ಹೊಂದಿದ್ದಾರೆ.

ಜ್ಞಾನಪ್ರಕಾಶ್(68) ಹನೂರು ತಾಲೂಕಿನ ಸಂದನಪಾಳ್ಯ ಗ್ರಾಮದ ನಿವಾಸಿಯಾಗಿದ್ದು ಕಾಡುಗಳ್ಳನ ಮುಖ್ಯ ಸಹಚರಾರಾಗಿದ್ದರು‌. ಭಯಾನಕ ಎನಿಸುವ “ಪಾಲಾರ್ ಬಾಂಬ್ ಸ್ಫೋಟ” ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದ ಜ್ಞಾನಪ್ರಕಾಶ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ‌ಬಳಿಕ, ಸುಪ್ರೀಂ ಕೋರ್ಟ್ 2014 ರಲ್ಲಿ ಗಲ್ಲು ಶಿಕ್ಷೆ ಬದಲಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು.

68 ವರ್ಷದ ಜ್ಞಾನಪ್ರಕಾಶ್ 29 ವರ್ಷಗಳ ಜೈಲುವಾಸ ಅನುಭವಿಸಿದ್ದಾರೆ. ಇತ್ತೀಚೆಗೆ ಮೂರು ವರ್ಷಗಳಿಂದ ಶ್ವಾಸಕೋಸ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರನ್ನು ಮಾನವೀಯತೆ ಆಧಾರದಲ್ಲಿ ಸುಪ್ರೀಂ ಜಾಮೀನು ಮಂಜೂರು ಮಾಡಿದ್ದರಿಂದ ಚಾಮರಾಜನಗರ ನ್ಯಾಯಾಲಯವು ಇಬ್ಬರಿಂದ ಶೂರಿಟಿ ಪಡೆದು ಸೋಮವಾರ ಜಾಮೀನು ಮಂಜೂರು ಮಾಡಿತ್ತು. ಇಂದು ಬೆಳಗ್ಗೆ ಜಾಮೀನಿನಿಂದ ಜ್ಞಾನಪ್ರಕಾಶ್ ಬಿಡುಗಡೆಯಾಗಿದ್ದು ಕುಟುಂಬವನ್ನು ಸೇರಿಕೊಂಡಿದ್ದಾರೆ.

Leave A Reply

Your email address will not be published.