PM Kisan Status 2022: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕುರಿತ ಮಹತ್ವದ ಮಾಹಿತಿ ಇಲ್ಲಿದೆ

ಇತ್ತೀಚೆಗಷ್ಟೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 12ನೇ ಕಂತಿನ ಹಣ ಬಿಡುಗಡೆ ಮಾಡಿದ್ದು, ಇದೀಗ 13ನೇ ಕಂತಿಗಾಗಿ ರೈತರು ಎದುರು ನೋಡುತ್ತಿದ್ದಾರೆ. ರೈತರ ನೆರವಿಗೆ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಆರ್ಥಿಕ ನೆರವಿನ ಜೊತೆಗೆ ರಸಗೊಬ್ಬರ ಪೂರೈಕೆ ಮಾಡಿ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ.

ಈಗಾಗಲೆ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 17 ರಂದು ಪಿಎಂ ಕಿಸಾನ್ ಯೋಜನೆಯ 12 ನೇ ಕಂತನ್ನು ಬಿಡುಗಡೆ ಮಾಡಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ (ಪಿಎಂ ಕಿಸಾನ್ ಯೋಜನೆ) 12ನೇ ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡಿದ್ದು, 12ನೇ ಕಂತಿನ 2000 ರೂಪಾಯಿಯಂತೆ ಒಟ್ಟು 16,000 ಕೋಟಿ ರೂಪಾಯಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. ಆದರೆ ಈಗ ಪಿಎಂ ಕಿಸಾನ್ ಯೋಜನೆ ನಿಯಮದಲ್ಲಿ ಕೆಲವು ಬದಲಾವಣೆಯಾಗಿದ್ದು, ಇನ್ನೂ  ಹಣ ಖಾತೆಗೆ ಜಮೆ ಆಗಿದೆಯೇ ಎಂದು ಪರೀಕ್ಷಿಸಲು ರಿಜಿಸ್ಟರ್ ಆದ ಮೊಬೈಲ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯವಾಗಿದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 13ನೇ ಕಂತು ಇಂದು ಬೆಳಗ್ಗೆ 11 ಗಂಟೆಗೆ ಬಿಡುಗಡೆಯಾಗಲಿದ್ದು, ಅನ್ನದಾತನ ನೆರವಿಗೆ ಜೊತೆಗೆ  ರೈತರ ಆದಾಯವನ್ನು ಹೆಚ್ಚಿಸಲು ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲು ಹಲವು ಕ್ರಮಗಳನ್ನು ಕೈಗೊಂಡಿದೆ.

2019ರ ಫೆಬ್ರವರಿಯಲ್ಲಿ ಜಾರಿ ಮಾಡಿದ  ಅನುಸಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಕೂಡ ಒಂದಾಗಿದ್ದು, ಇತ್ತೀಚೆಗಷ್ಟೇ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ಹಣ ರೈತರ ಖಾತೆಗೆ ಬಿಡುಗಡೆ ಮಾಡಿದ್ದು, ಈ  ಯೋಜನೆಯ ಭಾಗವಾಗಿ ಇದುವರೆಗೆ 10 ಕೋಟಿಗೂ ಹೆಚ್ಚು ರೈತರು 12 ಕಂತುಗಳನ್ನು ಪಡೆದಿದ್ದಾರೆ.

ಈ ಮೊತ್ತವನ್ನು ಪ್ರತಿ 4 ತಿಂಗಳಿಗೊಮ್ಮೆ ಪ್ರತಿ ವ್ಯಕ್ತಿಗೆ 2,000 ರೂ.ನಂತೆ ಮೂರು ಕಂತುಗಳಲ್ಲಿ ಡಿಬಿಟಿ ಮೂಲಕ ರೈತರ ಖಾತೆಗೆ ವರ್ಗಾಯಿಸಲಾಗುತ್ತದೆ.ಇದರ ಜೊತೆಗೆ ಯೋಜನೆಯ ಭಾಗವಾಗಿ ವಾರ್ಷಿಕ 6 ಸಾವಿರ ರೂಪಾಯಿ ರೈತರ ಖಾತೆಗೆ ರವಾನೆ ಮಾಡಲಾಗಿದೆ. 

ಕೋಟಿಗಟ್ಟಲೆ ರೈತರಿಗೆ ಒಂದೇ ಬಾರಿಗೆ ಕಂತುಗಳಲ್ಲಿ ಜಮಾ ಆಗುವುದರಿಂದ ಖಾತೆಗೆ ಹಣ ಜಮಾ ಆಗಲು ಸ್ವಲ್ಪ ಸಮಯ ಹಿಡಿದು ತಡವಾಗುವುದು ಸಹಜ. ಆದರೆ, ತಿಂಗಳಾದರೂ ಕೆಲ ರೈತರ ಖಾತೆಗೆ ಹಣ ಜಮಾ ಆಗಿಲ್ಲ. ಹಾಗಾಗಿ,  ಹಣ ಠೇವಣಿ ಮಾಡದಿದ್ದರೆ ರೈತರು ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ದೂರು ದಾಖಲಿಸಬಹುದಾಗಿದೆ.

ರೈತರು ಮೊದಲು  ಇ-ಕೆವೈಸಿ, ಭೂಮಿಯ ವಿವರಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಲಾಗಿದೆಯೇ ಎಂದು ಪರಿಶೀಲಿಸಬೇಕು. ಇದು ಭರ್ತಿ ಮಾಡಿದ್ದರೆ 13ನೇ ಕಂತು ಖಂಡಿತವಾಗಿಯೂ ನಿಮ್ಮ ಖಾತೆಗೆ ಬರಲಿದೆ. ಏಕೆಂದರೆ ಪಿಎಂ ಕಿಸಾನ್ ಯೋಜನೆಯಲ್ಲಿ ವಂಚನೆಯನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ  ಕ್ರಮ ಕೈಗೊಂಡಿದೆ. ಪಿಎಂ ಕಿಸಾನ್ ಯೋಜನೆಯ ಇತ್ತೀಚಿನ ಕಂತು ಪಡೆಯಲು ಜಮೀನು ವಿವರಗಳನ್ನು ಪರಿಶೀಲನೆ ಮತ್ತು ಇ-ಕೆವೈಸಿ ಮಾಡಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ.

ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇದ್ದರೆ ನೀವು ಅಧಿಕೃತ ಇಮೇಲ್ ಐಡಿಯಲ್ಲಿ ಸಂಪರ್ಕಿಸಬಹುದಾಗಿದೆ. ಇಲ್ಲವೇ ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಸಹಾಯವಾಣಿ ಸಂಖ್ಯೆ- 155261 ಅಥವಾ 1800115526 (ಟೋಲ್ ಫ್ರೀ) ಅಥವಾ 011-23381092 ಅನ್ನು ಸಹ ಸಂಪರ್ಕಿಸಬಹುದು. ಈ ಯೋಜನೆಗೆ ಸಂಬಂಧಿಸಿದ ನಿಮ್ಮ ಪ್ರತಿಯೊಂದು ಸಮಸ್ಯೆಯನ್ನು ಇಲ್ಲಿ ಕೂಡ  ಪರಿಹರಿಸಲಾಗುತ್ತದೆ.

Leave A Reply

Your email address will not be published.