ಓದುಗರೇ ನಿಮಗೊಂದು ಚಾಲೆಂಜ್ | ನೇರಳೆ ಗ್ರಾಫಿಕ್ ತರಹದ ವಾಲ್‌ಪೇಪರ್ ನಲ್ಲಿರುವ ಮೂರು ಅಂಕಿಯ ಸಂಖ್ಯೆಯನ್ನು ಪತ್ತೆ ಹಚ್ಚಬಲ್ಲಿರಾ?

ದಿನದಿಂದ ದಿನಕ್ಕೆ ಒಂದೊಂದೇ ರೀತಿಯ ವಿಶೇಷ ಮಾಹಿತಿಯಿಂದ ಹಿಡಿದು ವೈರಲ್ ವಿಡಿಯೋಗಳೆಲ್ಲ ಹರಿದಾಡುತ್ತಲೇ ಇದೆ. ಎಲ್ಲೆಲ್ಲೋ ನಡೆಯೋ ಘಟನೆಗಳು ಕ್ಷಣಾರ್ಧದಲ್ಲಿ ನಮ್ಮ ಕೈ ಸೇರಿರುತ್ತೆ. ಇದೇ ರೀತಿ ಓದುಗರಾದ ನಿಮ್ಮ ಕಣ್ಣಿಗೆ ಕೆಲಸ ಕೊಡೊ ಚಾಲೆಂಜ್ ಇಲ್ಲಿದೆ ನೋಡಿ.

 

ಅಂತರ್ಜಾಲದಲ್ಲಿ ಆಪ್ಟಿಕಲ್ ಭ್ರಮೆಯ ಫೋಟೋಗಳು ಹೆಚ್ಚಾಗಿ ವೈರಲ್ ಆಗುತ್ತಿದ್ದು,ಇವು ನೆಟ್ಟಿಗರನ್ನು ತಲೆ ಕೆರೆದುಕೊಳ್ಳುವಂತೆ ಮಾಡುವುದಲ್ಲದೆ ಕುತೂಹಲ ಮೂಡಿಸುವುದರಲ್ಲಿ ಸಂಶಯವೇ ಇಲ್ಲ. ಇದೀಗ ವೈರಲ್ ಆಗಿರುವ ಫೋಟೋದಲ್ಲಿ ನಿಮಗಿರುವ ಕೆಲಸ ಏನಪ್ಪಾ ಅಂದ್ರೆ ನೇರಳೆ ಗ್ರಾಫಿಕ್ ತರಹದ ವಾಲ್‌ಪೇಪರ್ ನಲ್ಲಿರುವ ಮೂರು ಅಂಕಿಯ ಗುಪ್ತ ಸಂಖ್ಯೆಯನ್ನು ಪತ್ತೆ ಹಚ್ಚುವುದು.

ನಿಮ್ಮ ಸಮಯ ಈಗ ಶುರುವಾಗಿದ್ದು, 15 ಸೆಕೆಂಡುಗಳಲ್ಲಿ ನೀವೂ ಸಂಖ್ಯೆಯನ್ನು ಗುರುತಿಸಬೇಕು. ಎಷ್ಟು ಹುಡುಕಿದರೂ ಸಂಖ್ಯೆ ಮಾತ್ರ ಕಾಣುತ್ತಿಲ್ವೆ..? ಹಾಗಿದ್ರೆ ನಿಮ್ಮ ಕೆಲಸ ಕಡಿಮೆ ಮಾಡಲು ಸ್ವಲ್ಪ ಸಹಾಯ ನಾವು ಮಾಡುತ್ತೇವೆ. ನಿಖರವಾದ ಸಂಖ್ಯೆಗಳನ್ನು ನೋಡಲು ನೀವು ಚಿತ್ರವನ್ನು ಸ್ವಲ್ಪ ಮೇಲಕ್ಕೆ ಮತ್ತು ಕೆಳಕ್ಕೆ ಸರಿಸಬೇಕಾಗುತ್ತದೆ. ಚಿತ್ರಾತ್ಮಕ ಮಾದರಿಯನ್ನು 708 ಅನ್ನು ರೂಪಿಸುವ ರೀತಿಯಲ್ಲಿ ಇರಿಸಲಾಗಿದೆ. ಉತ್ತರವನ್ನು ಹುಡುಕುವ ಮೂಲಕ ನಿಮ್ಮ ದೃಷ್ಟಿ ಗೆ ನೀವೇ ಅಂಕ ಕೊಟ್ಟುಕೊಳ್ಳಿ… ಇದು ಬುದ್ದಿವಂತರಿಗೆ ಸವಾಲು….

Leave A Reply

Your email address will not be published.