ವಿಮಾನದಲ್ಲಿ ವ್ಯಕ್ತಿಯ ಆರೋಗ್ಯ ಏರುಪೇರು | ಆಪತ್ಕಾಲದಲ್ಲಿ ಪ್ರಾಣ ಉಳಿಸಿದ ವೈದ್ಯ
ಮುಂಬೈ: ದೆಹಲಿ-ಮುಂಬೈ ವಿಮಾನದಲ್ಲಿ ಕೊಲ್ಲಾಪುರ ಎಂಜಿನಿಯರ್ ಒಬ್ಬರ ಆರೋಗ್ಯದಲ್ಲಿ ಏರುಪೇರಾಗಿದ್ದು, ಈ ವೇಳೆ ವಿಮಾನದಲ್ಲಿದ್ದ ಮುಂಬೈನ ಪ್ರಮುಖ ಸ್ತ್ರೀರೋಗತಜ್ಞರು ಚಿಕಿತ್ಸೆ ನೀಡಿ, ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ.
ಡಿಸೆಂಬರ್ 17 ರಂದು ರಾತ್ರಿ ಸುಮಾರು 9.30 ರ ಹೊತ್ತಿಗೆ ವಿಸ್ತಾರಾ ಫ್ಲೈಟ್ ನಂ. ಯುಕೆ 957 ನಲ್ಲಿ ಪ್ರಯಾಣಿಕರು ಊಟ ಮಾಡುತ್ತಿರಬೇಕಾದರೆ ಈ ಘಟನೆ ನಡೆದಿದೆ. ಈ ವೇಳೆ ಗಗನಸಖಿ
ಫ್ಲೈಟ್‌ನಲ್ಲಿ ಯಾರಾದರು ವೈದ್ಯರು ಇದ್ದಾರಾ ಎಂದು ಕೇಳುತ್ತಾ ಸಾಗಿದಾಗ ವಿಮಾನದಲ್ಲಿ ಇದ್ದ ವೈದ್ಯ ನಿರಂಜನ್ ಚವ್ಹಾಣ್ ಎಂಬವರು ಮಾಡುತ್ತಿದ್ದ ಊಟವನ್ನು ಅರ್ಧಕ್ಕೆ ಬಿಟ್ಟು ರೋಗಿಯ ಚಿಕಿತ್ಸೆಗೆ ಧಾವಿಸಿದರು.
ಚಿಕಿತ್ಸೆಗೆ ಧಾವಿಸಿದ ವೈದ್ಯರಿಗೆ ಅಲ್ಲಿಗೆ ಹೋಗಿ ನೋಡಿದಾಗ ಆಶ್ಚರ್ಯವಾಯಿತು. ಕಾರಣ ಆ ವ್ಯಕ್ತಿ ಉಸಿರಾಡಲು ಕಷ್ಟಪಡುತ್ತಿದ್ದರು, ಅವರಿಗೆ ಸರಿಯಾಗಿ ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ, ಕಣ್ಣುಗಳು ಸುತ್ತಿಕೊಂಡಿದ್ದವು ಮತ್ತು ಆತ ಕುಳಿತಲ್ಲಿಯೇ ಇದ್ದರು ದೇಹದಲ್ಲಿ ಯಾವುದೇ ಚಲನೆಯಿರಲಿಲ್ಲ. ಹಾಗೇ ದೇಹವು ತಣ್ಣಗಾಗಿತ್ತು. ಇದನ್ನು ಕಂಡು ವಿಮಾನದಲ್ಲಿದ್ದ ಸಹ ಪ್ರಯಾಣಿಕರಿಗೆ ಆತಂಕ ಉಂಟಾಗಿದ್ದು, ಎಂಜಿನಿಯರ್ ನನ್ನು ಪರೀಕ್ಷಿಸಿದ ವೈದ್ಯರು ಆತನಿಗೆ ಹೈಪೊಟೆನ್ಷನ್ ಇತ್ತು ಎಂದು ಹೇಳಿದರು.
ಈತನನ್ನು ಕೊಲ್ಹಾಪುರದ ಇಂಜಿನಿಯರ್ ಸುಶಾಂತ್ ಶೆಲ್ಕೆ (31) ಎಂದು ಗುರುತಿಸಲಾಗಿದ್ದು, ತನ್ನ ಸಹಾಯಕರ ಜೊತೆಗೆ ನವದೆಹಲಿಯಲ್ಲಿ ನಡೆದ ವೃತ್ತಿಪರ ನಿಯೋಜನೆಯನ್ನು ಪೂರ್ಣಗೊಳಿಸಿ ಹಿಂದಿರುಗುತ್ತಿದ್ದರು. ಸುಶಾಂತ್ ಅವರ ನಾಡಿಮಿಡಿತವನ್ನು ಪರಿಶೀಲಿಸಿದ ವೈದ್ಯರು ಅದರಿಂದ ಏನೂ ತಿಳಿಯಲಿಲ್ಲ. ನಂತರ ನನ್ನ ಸ್ಮಾರ್ಟ್ ವಾಚ್ ನಿಂದ ಪರಿಶೀಲಿಸಿ ಅವರಿಗೆ 96 ರಷ್ಟು ದುರ್ಬಲತೆ ಇರುವುದು ತಿಳಿಯಿತು.
ರಕ್ತದೊತ್ತಡ ಕುಸಿದಿದ್ದು, ದೇಹ ತಣ್ಣಗಾಗಿತ್ತು. ತಕ್ಷಣವೇ ಏರ್‌ಲೈನ್ ಸಿಬ್ಬಂದಿಗಳಿಗೆ ಆಮ್ಲಜನಕವನ್ನು ಪ್ರಾರಂಭಿಸಲು ಹೇಳಿದರು. ಹಾಗೂ ಸ್ವಲ್ಪ ಸಕ್ಕರೆ ಪುಡಿಯನ್ನು ತೆಗೆದುಕೊಂಡು ಅದನ್ನು ಸುಶಾಂತ್ ಅವರ ನಾಲಿಗೆ ಮೇಲೆ ಇರಿಸಿದರು ಮತ್ತು ಹಣ್ಣಿನ ರಸವನ್ನು ಶೆಲ್ಕೆಗೆ ಹೀರಲು ಹೇಳಿದರು. ವೈದ್ಯರು ರಕ್ತದೊತ್ತಡ ಹೆಚ್ಚಿಸಲು ಮತ್ತು ದೇಹದ ಉಷ್ಣತೆಯನ್ನು ಹೆಚ್ಚಿಸಲು ಅವರ ಕೈಗಳಿಗೆ ಮಸಾಜ್ ಮಾಡಿದರು. ಈ ವೇಳೆ ವೈದ್ಯರ ಚಿಕಿತ್ಸೆಯನ್ನು ವಿಮಾನದಲ್ಲಿದ್ದ ಜನರು ಗುಂಪಾಗಿ ನಿಂತು ನೋಡುತ್ತಿದ್ದರು. ಅವರನ್ನು ಅಲ್ಲಿಂದ ತೆರಳಲು ಹೇಳಿ, ವಿಮಾನದ ಸಿಬ್ಬಂದಿಗಳು ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಇನ್ನೂ, ಈ ಎಲ್ಲಾ ಪ್ರಥಮ ಚಿಕಿತ್ಸೆ ನಡೆದ ಸ್ವಲ್ಪ ಸಮಯದ ನಂತರ ಶೆಲ್ಕೆ ಅವರ ಆರೋಗ್ಯ ಸುಧಾರಿಸಿದರು. ನಂತರ ಅವರು ಆ ದಿನ ಉಪವಾಸದಲ್ಲಿದ್ದರು ಎಂದು ತಿಳಿಸಿದರು. ಹಾಗೂ ದೆಹಲಿಯಲ್ಲಿ ಮೂರು ದಿನಗಳ ಕಾಲ ಚಹಾ-ಬಿಸ್ಕೆಟ್‌ಗಳನ್ನು ಹೊರತು ಬೇರೇನು ಸೇವಿಸಿರಲಿಲ್ಲ ಕಾರಣ ಅವರಿಗೆ ತಮ್ಮ ಮನೆಯ, ಊರಿನ ಆಹಾರ ಮಾತ್ರ ಪ್ರಿಯವಾಗಿತ್ತು.
ಹಾಗೇ ಪ್ರತಿಷ್ಠಿತ ಮುಂಬೈ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಸೊಸೈಟಿಯ ಅಧ್ಯಕ್ಷರಾಗಿರುವ ಮೆಡಿಕೋ, ಆರೋಗ್ಯದಲ್ಲಿ ಸುಧಾರಿಕೆ ಆಗುತ್ತಿರುವ ಸಹ-ಪ್ರಯಾಣಿಕರನ್ನು ತಾವು ವಿಮಾನದಿಂದ ಇಳಿಯುವ ಮೊದಲು ಎಲ್ಲಾ ರೀತಿಯ ಚಿಕಿತ್ಸೆಯನ್ನು ಪೂರ್ಣಗೊಳಿಸಿದರು. ನಂತರ, ಮಧ್ಯರಾತ್ರಿಯ ಸುಮಾರಿಗೆ, ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ವೈದ್ಯರ ತಂಡದ ಬಳಿ ಶೆಲ್ಕೆ ಅವರನ್ನು ಮುಂದಿನ ತಪಾಸಣೆಗೆ ಕರೆದೊಯ್ಯಲಾಯಿತು. ಇನ್ನೂ ವೈದ್ಯರ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.