ಮಹಿಳಾ ಉದ್ಯೋಗಿಯ ಡ್ರೆಸ್‌ನ್ನು ಕೆಕ್ಕೆರಿಸಿ ನೋಡಿದ ಮ್ಯಾನೇಜರ್‌ | ಅಷ್ಟೇ ಆಮೇಲೆ ಆದದ್ದು ಭಾರೀ ಆಘಾತ

ಪ್ರತೀ ಕಂಪನಿಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ನೀತಿ ನಿಯಮಗಳು ಇದ್ದೇ ಇರುತ್ತದೆ. ಇನ್ನು ನಿಯಮಗಳನ್ನು ಪಾಲಿಸದೇ ಇದ್ದಲ್ಲಿ ಆ ವ್ಯಕ್ತಿ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ಸಹ ಇರುತ್ತದೆ ಅದಲ್ಲದೆ ವೈಯಕ್ತಿಕ ವಿಷಯಗಳ ಬಗ್ಗೆ ಯಾರಾದರೂ ಮಾತನಾಡಲು ಬಂದ್ರೆ, ದೈಹಿಕವಾಗಿ ಶೋಷಣೆಯನ್ನು ಮಾಡಲು ಬಂದ್ರೆ ಕಂಪ್ಲೇಂಟ್​ ಮಾಡುವ ಎಲ್ಲಾ ಹಕ್ಕುಗಳು ಉದ್ಯೋಗಿಗಳಿಗೆ ಇರುತ್ತದೆ.

ಆಯಾ ಕಂಪೆನಿಗಳಲ್ಲಿ ಉದ್ಯೋಗಿಗಳಿಗಾಗಿಯೇ ನೀತಿ, ನಿಯಮಗಳು ಇರುತ್ತದೆ. ಇದರ ಜೊತೆಗೆ ಅವರ ಉದ್ಯೋಗಿಗಳ ರಕ್ಷಣೆಗಾಗಿ ಹಲವಾರು ಕಾನೂನುಗಳು ಕೂಡ ಇರುತ್ತದೆ. ಹೆಣ್ಣಿನ ಮೇಲೆ ಅಥವಾ ಗಂಡಿನ ಮೇಲೆ ಯಾವುದೇ ರೀತಿಯ ದೌರ್ಜನ್ಯ​ ನಡೆದಿದ್ದಲ್ಲಿ ಕಂಪೆನಿಯಿಂದಲೇ ಕೇಸ್​ ಅನ್ನು ಹಾಕಲಾಗುತ್ತದೆ. ಈ ಕಾನೂನು ಉದ್ಯೋಗಿಗಳ ರಕ್ಷೆಣೆಗಾಗಿ ಮಾಡಲಾಗಿದೆ.

ಪ್ರಸ್ತುತ ​ ಐರಿಷ್​ನಲ್ಲಿ ಒಂದು ಈ ತರಹದ ಘಟನೆ ನಡೆದಿದೆ. ಹೌದು ಮಹಿಳೆಯು ತನ್ನ ವರ್ಕ್ ಪ್ಲೇಸ್​ನಲ್ಲಿ ಕೆಟ್ಟ ಘಟನೆಯನ್ನು ಎದುರಿಸಿದ್ದಾರೆ. ಮಹಿಳೆ ನಿಂತಿದ್ದಾಗ ಆಕೆಯ ಮ್ಯಾನೇಜರ್​ ಅವರ ಹಿಂಬಾಗಕ್ಕೆ ಸ್ಕೇಲ್​ನಿಂದ ಹೊಡೆದಿದ್ದಾರೆ. ಇದರಿಂದ ಕೋಪಗೊಂಡ ಆಕೆ ಅವರಿಗೆ ಗಟ್ಟಿಧ್ವನಿಯಲ್ಲಿ ಮಾತನಾಡಿ ಸೀನ್​ ಕ್ರಿಯೇಟ್​ ಮಾಡಿದ್ದಾರೆ. ಆದರೆ ಹೊಡೆದ ಮ್ಯಾನೇಜರ್ ​ ಮತ್ತು ಸಹೋದ್ಯೋಗಿ ಒಟ್ಟಿಗೆ ಸೇರಿಕೊಂಡು ಈಕೆಯನ್ನೇ ಮತ್ತಷ್ಟು ಗೇಲಿ ಮಾಡಿದ್ದಾರೆ. ಇದರಿಂದ ಕೋಪಗೊಂಡ ಮಹಿಳೆ ತನ್ನ ಕಂಪೆನಿಯ ಮೇಲಾಧಿಕಾರಿಯಾದ “ನಾರ್ದರನ್​ ಐರ್ಲ್ಯಾಂಡ್​ ಈಕ್ವಾಲಿಟಿ ಕಮಿಷನ್​ನ” ಚೀಫ್​ ಕಮಿಷ್ನರ್​ಗೆ ದೂರನ್ನು ಸಲ್ಲಿಸಿದ್ದಾಳೆ. ಆದರೆ, ಇಲ್ಲಿನ ತಪ್ಪಿತಸ್ತ” ಇಲ್ಲ ಈಕೆಯ ಬಟ್ಟೆಯೇ ಕಾರಣ, ನನ್ನನ್ನು ಟೆಮ್ಟ್​ ಮಾಡುವದಂತಹ ಬಟ್ಟೆಯನ್ನು ಧರಿಸಿ ಬಂದಿದ್ದರು, ಹಾಗಾಗಿ ನಾನು ಈ ರೀತಿಯಾಗಿ ಮಾಡಬೇಕಾಗಿ ಬಂತು” ಎಂದು ಹೇಳಿದ್ದಾರೆ.

ನೀವು ಈ ಚರ್ಚೆಯನ್ನು ಕಂಪೆನಿಯಿಂದ ಹೊರಗೆ ಪ್ರತ್ಯೇಕವಾಗಿ ಭೇಟಿಯಾಗಿ ಮಾತಾನಾಡಿ ಬಗೆಹರಿಸಿಕೊಳ್ಳಿ ಎಂದು ಕಂಪೆನಿ ಹೇಳಿತ್ತು. ಆದರೆ ಈ ಮಹಿಳೆ ಇಲ್ಲ ಇದು ಅಸಾಧ್ಯ, ನನಗೆ ಕಂಪೆನಿಯಲ್ಲಿ ಈ ಸಮಸ್ಯೆ ಎದುರಾಗಿದ್ದು ಮತ್ತು ಇಲ್ಲೇ ಪರಿಹಾರ ಆಗಬೇಕು ಎಂದು ಹೇಳಿದ್ದಾರೆ.

ಇದಾದ ನಂತರ ವಾದ ವಿವಾದಗಳು ಅವರಿಬ್ಬರ ನಡುವೆ ಏರ್ಪಟ್ಟಿದ್ದು ಹತ್ತು ದಿನಗಳ ನಂತರ ಈಕೆಯ ಸಮಸ್ಯೆಯನ್ನು ಕಂಪೆನಿ ಒಪ್ಪಿಕೊಂಡು ಆ ವ್ಯಕ್ತಿಗೆ ದಂಡವನ್ನು ವಿಧಿಸಿತು.

ಆದರೆ ನೀವು ದಂಡವನ್ನು ಕೇಳಿದ್ರೆ ಪಕ್ಕಾ ಶಾಕ್​ ಆಗ್ತೀರ. ಹೌದು ಬರೋಬ್ಬರಿ 90ಲಕ್ಷವನ್ನು ದಂಡವಾಗಿ ವಿಧಿಸಲಾಗಿದೆ. ಆತನ ಮೇಲೆ “ಸೆಕ್ಷ್ಯುಯಲ್​ ಹರಾಜ್​ಮೆಂಟ್​ ಕೇಸ್​” ಕೂಡ ಹಾಕಿದ್ದಾರೆ. ಕೊನೆಗೂ ಕಂಪೆನಿಯವರು ಮಹಿಳೆಯ ಪರ ಧ್ವನಿ ಎತ್ತಿದಕ್ಕಾಗಿ ಮಹಿಳೆಗೆ ನಿರಾಳ ಅನಿಸಿದೆ.

ಸದ್ಯ ಈ ರೀತಿಯಾಗಿ ನಿಮ್ಮ ಕಂಪೆನಿಗಳಲ್ಲೂ ನಡೆದರೆ ಸರಿಯಾದ ಕಾರಣ ಮತ್ತು ಪುರಾವೆಗಳೊಂದಿದೆ ಕೇಸ್​ಗಳನ್ನು ಹಾಕಲು ಗಂಡು ಅಥವಾ ಹೆಣ್ಣಿಗೆ ಸಂಪೂರ್ಣ ಹಕ್ಕು ಇದೆ ಎಂದು ಈ ಮೂಲಕ ತಿಳಿಸಲಾಗುತ್ತಿದೆ.

Leave A Reply

Your email address will not be published.