‘ಕಾಂತಾರ’ ರೀತಿಯಲ್ಲೇ ಕಾಣಿಸಿಕೊಂಡ ಮೆಸ್ಸಿ ಮೆರಡೋನ

ಕಾಂತಾರ ಅನ್ನೋ ಸಿನಿಮಾ ರಿಲೀಸ್ ಆದ ದಿನದಿಂದ ಒಂದಲ್ಲ ಒಂದು ವಿಚಾರಕ್ಕೆ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ತುಳುನಾಡಿನ ಸಂಸ್ಕೃತಿಯನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಿದ ಸಿನಿಮಾದ ಹವಾ ಎಷ್ಟರಮಟ್ಟಿಗೆ ಇದೆ ಎಂಬುದನ್ನು ವಿವರಿಸಬೇಕಾಗಿಲ್ಲ. ಎಲ್ಲಿ ಹೋದರೂ ಬಂದರೂ..ಎಲ್ಲರ ಬಾಯಲ್ಲೂ ಸಿನಿಮಾದ ಬಗ್ಗೆಯೇ ಹೆಚ್ಚು ಮಾತುಗಳು ಕೇಳಿಬರುತ್ತಿವೆ .

 

ಎಲ್ಲೆಡೆ ಮೋಡಿ ಮಾಡಿ ಇಡೀ ಜಗತ್ತಿನಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಸಿನಿಮಾ ಪ್ರತಿಯೊಬ್ಬರ ಮನದಲ್ಲಿ ಅಚ್ಚಳಿಯದೆ ಉಳಿದಿದ್ದು,ಅಭಿಮಾನಿಗಳ ಮನದಲ್ಲಿ ತನ್ನ ಸ್ಥಾನ ಭದ್ರ ಪಡಿಸಿಕೊಂಡು ಬಿಟ್ಟಿದೆ. ಇದೀಗ, ಫುಟ್​ಬಾಲ್​ ದಿಗ್ಗಜರಾದ ಲಿಯೋನೆಲ್​ ಮೆಸ್ಸಿ ಮತ್ತು ಡಿಯಾಗೋ ಮರಡೋನಾ ‘ಕಾಂತಾರ’ ಥೀಮ್​ನಲ್ಲಿ ಮೂಡಿ ಬಂದಿರುವ ಅವರ ಮೀಮ್​​ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಚಿತ್ರಮಂದಿರದಲ್ಲಿ ಅಬ್ಬರಿಸಿದ ಬಳಿಕ ಒಟಿಟಿಯಲ್ಲೂ ಈ ಸಿನಿಮಾ ದೂಳೆಬ್ಬಿಸಿದೆ. ‘ಕಾಂತಾರ’ ಚಿತ್ರಕ್ಕೆ ಸಂಬಂಧಿಸಿದಂತೆ ಲೆಕ್ಕವಿಲ್ಲದಷ್ಟು ಮೀಮ್ಸ್​ ಸಂಚಲನ ಮೂಡಿಸಿದೆ. ಕಾಂತಾರ ಸಿನೆಮಾದ ಪ್ರತಿ ಡೈಲಾಗ್ ಕೂಡ ಜನರ ಬಾಯಲ್ಲಿ ಹರಿದಾಡುತ್ತಿದೆ. ‘ಕಾಡಲ್ಲಿ ಒಂದು ಸೊಪ್ಪು ಸಿಗ್ತದೆ.., ದೈವದ ಕೂಗಿನ ತನಕ ಹತ್ತಾರು ವಿಷಯಗಳ ಕುರಿತಾದ ಮೀಮ್ಸ್​ ಈಗ ಟ್ರೆಂಡ್ ಆಗುತ್ತಿದೆ. ಇದೆಲ್ಲದರ ನಡುವೆ, ಫಿಫಾ ವಿಶ್ವಕಪ್ (Fifa World Cup 2022)​ ವಿಚಾರದಲ್ಲೂ ಈ ಹವಾ ಮುಂದುವರೆಯುತ್ತಿದೆ.

‘ಕಾಂತಾರ’ ಚಿತ್ರದ ಪೋಸ್ಟರ್​ ರೀತಿಯಲ್ಲಿ ಲಿಯೋನೆಲ್​ ಮೆಸ್ಸಿ (Lionel Messi) ಮತ್ತು ಡಿಯಾಗೋ ಮರಡೋನಾ ಅವರ ಮೀಮ್​​ ರಚಿಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸಂಚಲನ ಮೂಡಿಸಿದೆ. ತುಳುನಾಡಿನ ಸಂಸ್ಕೃತಿಯನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸಿದ ಸಿನಿಮಾ ಪ್ರತಿಯೊಬ್ಬರ ಮನದಲ್ಲಿ ಭಕ್ತಿ ಹಾಗೂ ಅನೇಕ ಸೂಕ್ಷ್ಮ ವಿಚಾರಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಕ್ಲೈಮ್ಯಾಕ್ಸ್​ ವೇಳೆಗೆ ಕಥಾನಾಯಕ ಶಿವನನ್ನು ದೈವವು ಬಡಿದೆಬ್ಬಿಸುವ ಒಂದು ಸನ್ನಿವೇಶವಿದ್ದು, ದೈವದ ಪಾತ್ರವನ್ನು ನೋಡಿದವರೆಲ್ಲ ಭಕ್ತಿ ಭಾವದಿಂದ ಕಣ್ತುಂಬಿ ಕೊಳ್ಳುವಂತೆ ಇದ್ದು, ಅದರಲ್ಲೂ ಕೂಡ ದೈವ ಮೇಲೇಳುವ ದೃಶ್ಯ ನೋಡುಗರ ಮೈ ಮನ ರೋಮಾಂಚನ ಗೊಳಿಸುತ್ತದೆ. ಈ ದೃಶ್ಯ ‘ಕಾಂತಾರ’ ಪೋಸ್ಟರ್​ನಲ್ಲೂ ಹೈಲೈಟ್​ ಆಗಿದ್ದು, ಇದೆ ರೀತಿ, ಲಿಯೋನೆಲ್​ ಮೆಸ್ಸಿ ಮತ್ತು ಡಿಯಾಗೋ ಮರಡೋನಾ ಅವರ ಮೀಮ್​​ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ನೆಲ್​ ಮೆಸ್ಸಿ ಅವರನ್ನು ಡಿಯಾಗೋ ಮರಡೋನಾ ಅವರು ದೈವದ ರೀತಿಯಲ್ಲಿ ಕೂಗಿ ಎಬ್ಬಿಸುತ್ತಿರುವ ರೀತಿಯ ಈ ಮೀಮ್​ ಮೂಡಿಬಂದಿದ್ದು, ಈ ದೃಶ್ಯ ನೋಡಿದ ‘ಕಾಂತಾರ’ ಪ್ರೇಕ್ಷಕರು ಮತ್ತು ಫುಟ್ಬಾಲ್​ ಪ್ರಿಯರು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಳ್ಳುತ್ತಿದ್ದಾರೆ.ಇವರ ಚಾಣಾಕ್ಷತನಕ್ಕೆ ಅನೇಕರು ಶಹಾಬಾಶ್ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಅಕ್ಷಯ್​ ಕುಮಾರ್​ ಅವರು ಹೆಚ್ಚಾಗಿ ಬಯೋಪಿಕ್​ ಬಗ್ಗೆ ಆಸಕ್ತಿ ಪ್ರದರ್ಶಿಸುವ ಕಾರಣ ಅವರನ್ನು ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ದಿಡಿರನೆ ಯಾರಾದ್ರೂ ನೇಮ್ ಫೇಮ್ ಪಡೆದುಕೊಂಡು ಬಿಟ್ಟರೆ ಸಾಕು ಅವರ ಬಯೋಪಿಕ್​ನಲ್ಲಿ ಅಕ್ಷಯ್​ ಕುಮಾರ್​ ನಟಿಸುತ್ತಾರೆ ಎಂಬ ಮೀಮ್ಸ್​ ಹರಿದಾಡಲು ಶುರುವಾಗುತ್ತವೆ. ಇದೀಗ, ಲಿಯೋನಲ್​ ಮೆಸ್ಸಿ ಬಯೋಪಿಕ್​ ವಿಚಾರ ಬಂದಾಗ ನೆಟ್ಟಿಗರು ಕಾಲೆಳೆಯಲು ಮುಂದಾಗಿದ್ದಾರೆ.

ಅರ್ಜೆಂಟೀನಾ ತಂಡ ಫಿಫಾ ವಿಶ್ವಕಪ್​ ಟ್ರೋಫಿ ಎತ್ತಿ ಹಿಡಿಯುತ್ತಿದ್ದಂತೆಯೇ ಒಂದಷ್ಟು ಮಂದಿ ಲಿಯೋನಲ್​ ಮೆಸ್ಸಿಯ ಬಯೋಪಿಕ್​ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ. ಆ ಬಯೋಪಿಕ್​ನಲ್ಲಿ ಮೆಸ್ಸಿ ಪಾತ್ರವನ್ನು ಅಕ್ಷಯ್​ ಕುಮಾರ್​ ಮಾಡಲಿದ್ದಾರೆ ಎಂಬ ಗಾಳಿ ಸುದ್ದಿ ಹಬ್ಬಿಸುತ್ತಿದ್ದು , ಈ ಮೀಮ್ಸ್​ ಹರಿಬಿಡುವ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಹಾಸ್ಯದ ವಿಷಯವಾಗಿ ಕೂಡ ಮಾರ್ಪಟ್ಟಿದೆ.

ಇದೆಲ್ಲದರ ನಡುವೆ ಈ ಗಾಳಿ ಸುದ್ದಿ ನಿಜವಾಗಲಿದೆ ಎಂಬ ಭವಿಷ್ಯ ಕೂಡ ಕೆಲವರು ನುಡಿದಿದ್ದು, ಏನೇ ಆದರೂ ಕಾಂತಾರ ಸಿನೆಮಾ ದಿನ ಒಂದಲ್ಲ ಒಂದು ವಿಷಯಕ್ಕೆ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.

Leave A Reply

Your email address will not be published.