Prize Money: ಈ ಹಂತಕನ 1 ಸುಳಿವು ಕೊಟ್ಟವರಿಗೆ ಸಿಗುತ್ತೆ 289 ಕೋಟಿ! ಯಾರೀತ ? ಈತ ಮಾಡಿದ್ದಾದರೂ ಏನು?

ಯಾರಿಗುಂಟು ಯಾರಿಗಿಲ್ಲ??.. ಅದೃಷ್ಟ ಕೈ ಹಿಡಿಯೋ ಸುವರ್ಣ ಅವಕಾಶ ಒಲಿದು ಬಂದ್ರೆ ಯಾರು ಬೇಡ ಅಂತೀರಾ?? ನೀವು ಜೀವನಪರ್ಯಂತ ದುಡಿದು ತಿಂದರೂ ಸಂಪಾದಿಸಲು ಕೋಟಿಗಟ್ಟಲೆ ಹಣ ಉಳಿಸಲು ಕಷ್ಟವೇ ಸರಿ!! ಹೌದು!! ಅಷ್ಟಕ್ಕೂ ಸುಲಭದಲ್ಲೇ ಹಣ ಸಂಪಾದಿಸುವ ಮಾರ್ಗವೊಂದಿದೆ. ಅದು ಹೇಗೆ ಅಂತೀರಾ??  ಈ ಇಂಟ್ರೆಸ್ಟಿಂಗ್ ಕಹಾನಿ ಓದಿ ನೋಡಿ!!. ಸಾಧ್ಯವಾದರೆ ನೀವು ಪ್ರಯತ್ನ ಪಟ್ಟು ಕೋಟ್ಯಾಧಿಪತಿ ಆಗುವ ಅವಕಾಶ ಪಡೆದುಕೊಳ್ಳಬಹುದು.

ಒಂದು ಸುಳಿವು (Hint) ಬೇಕಾಗಿದ್ದು,  ಆ ಸುಳಿವು ಕೊಟ್ಟರೆ ನಿಮ್ಮ ಕೈಸೇರೋದು ಕೇವಲ ಒಂದಲ್ಲ , ಎರಡಲ್ಲ    ಬರೋಬ್ಬರಿ 289.25 ಕೋಟಿ. ಅರೇ.. ಇದೇನಪ್ಪಾ ಅಷ್ಟು ದೊಡ್ಡ ಮೊತ್ತದ ಹಣ ಸಿಗುತ್ತಾ?? ಇದೆಲ್ಲ ತಮಾಷೆ ಅಂದುಕೊಂಡರೆ ಖಂಡಿತ ಇಲ್ಲ!!. ನಿಮಗೆ ಶಾಕ್ ಆದ್ರೂ ನಿಜ ಕಣ್ರೀ!!

ಈ ರೀತಿಯ ಸುವರ್ಣ ಅವಕಾಶ (Opportunity)​ ಜೀವಮಾನದಲ್ಲಿ ಒಮ್ಮೆ  ಸಿಗುವುದೇ ಅಪರೂಪ. ಅದ್ರಲ್ಲಿ ಕೂಡ ಕೆಲವರು ಹಗಲಿರುಳು ಶ್ರಮಿಸುತ್ತಾ ಕೋಟ್ಯಾಧಿಪತಿ ಯಾಗುತ್ತಾರೆ (Billionaire) ಇನ್ನೂ ಕೆಲವರು ನಾಳೆ ಅದೃಷ್ಟ ಖುಲಾಯಿಸುತ್ತದೆ ಎಂಬ ತಿರುಕನ ಕನಸಿನಂತೆ ಭ್ರಮೆಯಲ್ಲಿ ದಿನ ದೂಡುತ್ತಾರೆ.

ಏನೇ ಆದರೂ ಕಾಲ ಕೂಡಿ ಬರಬೇಕು. ನೀವು ಕೂಡ ಸಿರಿಯ ಅಧಿಪತಿಯಾಗುವ ಕನಸು ಕಾಣುತ್ತಿದ್ದರೆ ಈ ಅವಕಾಶವನ್ನು ಬಳಸಿಕೊಂಡರೇ ಕೆಲವೇ ಕ್ಷಣಗಳಲ್ಲಿ ನೀವೂ ಕೋಟ್ಯಧಿಪತಿಯಾಗಬಹುದು. ಆದರೆ, ಇದು ಅಷ್ಟೊಂದು ಸುಲಭದ ಕೆಲಸವಲ್ಲ. ಒಂದು ಸುಳಿವು (Hint) ಬೇಕಾಗಿದ್ದು, ಆ ಸುಳಿವು ಕೊಟ್ಟರೆ ನಿಮ್ಮ ಕೈಸೇರೋದು ಒಂದು, ಎರಡು ಕೋಟಿಯಲ್ಲ. ಬರೋಬ್ಬರಿ 289.25 ಕೋಟಿ ಆಗಿರಲಿದೆ.

ಕೆನಡಾದ ಶ್ರೀಮಂತ ದಂಪತಿಗಳಾದ ಬ್ಯಾರಿ ಮತ್ತು ಹನಿ ಶೆರ್ಮನ್ ಅವರನ್ನು ಕೊಂದ ಹಂತಕರು ಬಗ್ಗೆ ಸುಳಿವು ಕೊಟ್ಟರೆ 3.5 ಮಿಲಿಯನ್​ ಡಾಲರ್​ (289.25 ಕೋಟಿ ರೂ.) ಬಹುಮಾನ ನೀಡುವುದಾಗಿ ಘೋಷಿಸಿದ್ದು,  ಕೊಲೆಯಾದ ದಂಪತಿ ಮಗ ಈ ಬಹುಮಾನವನ್ನು ಘೋಷಿಸಿದ್ದಾರೆ. 5 ವರ್ಷಗಳ ಹಿಂದೆ ದಂಪತಿಯ ಶವಗಳು ಅವರ ಮನೆಯಲ್ಲಿ ಪತ್ತೆಯಾಗಿದ್ದವು. ಹೀಗಾಗಿ, ಹಂತಕರ ಪತ್ತೆಗೆ ಈ ಮೊದಲು ಬಹುಮಾನ 1 ಕೋಟಿ ಡಾಲರ್ ಎಂದು ಘೋಷಣೆ ಮಾಡಲಾಗಿತ್ತು.

ಪ್ರಕರಣದ ಪ್ರಾಥಮಿಕ ಹಂತದಲ್ಲಿ ಆತ್ಮಹತ್ಯೆ ಎಂದು ಪರಿಗಣಿಸಲಾಗಿತ್ತು. ಆದರೆ ಪೊಲೀಸರು ಅದನ್ನು ಕೊಲೆ ಎಂದು ಘೋಷಿಸಿದ ಬಳಿಕ, ಕೊಲೆಗೈದ ಆರೋಪಿಗೆ ಶೋಧ ಕಾರ್ಯ ನಡೆಯುತ್ತಿದೆ.

ಬ್ಯಾರಿ ಶೆರ್ಮನ್ ಔಷಧೀಯ ಕಂಪನಿ ಅಪೊಟೆಕ್ಸ್‌ನ ಸಂಸ್ಥಾಪಕರಾಗಿದ್ದರು ಜೊತೆಗೆ  ಅವರ ಸಾವಿನ ಮೊದಲು ಅಂದಾಜು $3 ಬಿಲಿಯನ್ ಆದಾಯವನ್ನು ಹೊಂದಿದ್ದರು ಅವರ ಪತ್ನಿ ಪ್ರಸಿದ್ಧ ಸಮಾಜ ಸೇವಕಿಯಾಗಿದ್ದಾರೆ.

ಡಿಸೆಂಬರ್ 13, 2017 ರಂದು ಪೊಡ್ಜ್ ಟೊರೊಂಟೊದಲ್ಲಿನ ಅವರ ಮನೆಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಸಾಯುವಾಗ ವೆರಿಯ ವಯಸ್ಸು 75 ವರ್ಷ ಮತ್ತು ಹನಿ ಅವರ ವಯಸ್ಸು 70 ವರ್ಷ ಎನ್ನಲಾಗಿದೆ. ಜೊನಾಥನ್, ‘ಅವರ ಸಾವು ನನಗೆ ತುಂಬಾ ನೋವುಂಟು ಮಾಡಿದೆ’. ಬಲವಂತದ ಪ್ರವೇಶಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಇದನ್ನು ಆತ್ಮಹತ್ಯೆ ಎಂದು ಘೋಷಿಸಲಾಯಿತು.

ಆದರೆ ಪೊಲೀಸರು ನಂತರ ಇದು ಕೊಲೆ ಮತ್ತು ಅದರ ಹಿಂದಿನ ಕಾರಣ ಹಣದ ವ್ಯಾಮೋಹ ಎನ್ನಲಾಗುತ್ತಿದೆ. ಆದರೆ, ಈ ಪ್ರಕರಣ ಇಲ್ಲಿಯವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆ ಹಂತಕನ ಒಂದೇ ಒಂದು ಸುಳಿವು ಕೂಡ ಸಿಕ್ಕಿಲ್ಲ. ಹೀಗಾಗಿ, ಕಳೆದ ವಾರ, ಅವರ ಮಗ ಜೊನಾಥನ್ ಶೆರ್ಮನ್ 1 ಮಿಲಿಯನ್ ಡಾಲರ್ ಬಹುಮಾನಕ್ಕೆ ಹೆಚ್ಚುವರಿ 2.5 ಮಿಲಿಯನ್ ಡಾಲರ್‌ಗಳನ್ನು ಸೇರಿಸುವುದಾಗಿ ಘೋಷಿಸಿದ್ದಾರೆ.

ಆರಂಭದಲ್ಲಿ ಕೊಲೆ ಎಂದು ಪೊಲೀಸರು ಘೋಷಿಸಿದ್ದನ್ನು ಕೋಟ್ಯಾಧಿಪತಿ ದಂಪತಿಯ ಪುತ್ರ ಇದನ್ನು ಅಲ್ಲಗಳೆದಿದ್ದಾರೆ. ಅವರು ತಮ್ಮದೇ ಆದ ವಿಧಿವಿಜ್ಞಾನ ತಂಡ ಮತ್ತು ಖಾಸಗಿ ಪತ್ತೆದಾರರನ್ನು ನೇಮಿಸಿಕೊಂಡಿದ್ದಾರೆ.

ಹೈಪ್ರೊಫೈಲ್ ಕೇಸ್ ಆಗಿರುವುದರಿಂದ ಪೊಲೀಸರ ಮೇಲೆ ಎಲ್ಲ ಕಡೆಯಿಂದ  ಒತ್ತಡ ಹೇರಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಿದಾಗ ದಂಪತಿ ಕತ್ತು ಹಿಸುಕಿ ಕೊಲೆ ಮಾಡಿರುವುದು ಶವ ಪರೀಕ್ಷೆ ವರದಿಯಲ್ಲಿ ದೃಢಪಟ್ಟಿದೆ.

ಶವ ಪತ್ತೆಯಾದ ಆರು ವಾರಗಳ ಬಳಿಕ ಪೊಲೀಸರು ಇದು ಆತ್ಮಹತ್ಯೆಯಲ್ಲ ಎಂದು ಒಪ್ಪಿಕೊಂಡಿದ್ದಾರೆ. ತಪ್ಪು ತಿಳುವಳಿಕೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅಪರಾಧಿಯನ್ನು ಹಿಡಿಯುವವರೆಗೂ ಈ ಪ್ರಕರಣವನ್ನು ಮುಚ್ಚುವುದಿಲ್ಲ ಎಂದು ಜೊನಾಥನ್ ಶೆರ್ಮನ್ ಹೇಳಿದ್ದು,  ದಿನದಿಂದ ದಿನಕ್ಕೆ ನೋವು, ಸಂಕಟ ಹೆಚ್ಚಾಗುತ್ತಿದೆ ಎಂದಿದ್ದಾರೆ. ಹಾಗಾಗಿಯೇ ಆದಷ್ಟು ಬೇಗ ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ.


Leave A Reply

Your email address will not be published.