ನಿಮ್ಮ ಕಣ್ಣಿಗೊಂದು ಸವಾಲ್‌ ಓದುಗರೇ | ಈ ಡೈಮಂಡ್‌ ಕಾರ್ಡ್‌ನಲ್ಲಿರೋ ಇನ್ನೊಂದು 8 ನ್ನು ಪತ್ತೆ ಮಾಡಿ

ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ಆಗಾಗ ನೋಡಲು ಸಿಗುತ್ತವೆ. ಅದು ಯಾವುದೋ ಪ್ರಾಣಿ-ಪಕ್ಷಿಗಳದ್ದಾಗಿಬಹುದು. ವಸ್ತುಗಳನ್ನು ಪತ್ತೆ ಹಚ್ಚುವ ಕೆಲಸವಾಗಿರಬಹುದು. ಆದರೆ, ನೆಟ್ಟಿಗರ ತಲೆಗೆ ಹುಳ ಬಿಡುವ ಜೊತೆಗೆ ಕಣ್ಣಿಗೆ ಮತ್ತು ಬುದ್ಧಿವಂತಿಕೆಗೆ ಸವಾಲು ಹಾಕುವುದಂತು ನಿಜ. ಇದೀಗ, ಮತ್ತೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

 

ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ಗಮನಿಸುತ್ತೇವೆ ಎಂಬ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ಭಿನ್ನತೆ ಎದುರಾಗುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ಈ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್​ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿವೆ. ಈ ಸವಾಲುಗಳನ್ನು ಸಾಕಷ್ಟು ಜನರು ಸ್ವೀಕರಿಸಿ, ಅದರಲ್ಲಿ ತೊಡಗುತ್ತಾರೆ. ನೀವು ಕೂಡಾ ಈ ಸವಾಲು ಸ್ವೀಕರಿಸಲು ಸಿದ್ದರಾಗಿದ್ದೀರಾ??


ಸಾಮಾನ್ಯವಾಗಿ ಹೆಚ್ಚಿನವರು ಹೊಸ ಹೊಸ ಆಪ್ಟಿಕಲ್ ಇಲ್ಯೂಷನ್ ಸವಾಲುಗಳನ್ನು ಸ್ವೀಕರಿಸುವುದನ್ನು ಆನಂದಿಸುತ್ತಾರೆ. ನಿಮ್ಮ ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸುವಲ್ಲಿ ಆಪ್ಟಿಕಲ್ ಇಲ್ಯೂಷನ್​ಗಳು ಸಹ ಪ್ರಯೋಜನಕಾರಿಯಾಗಿದ್ದು, ನಿಮ್ಮ ಕಣ್ಣಿಗೆ ಕೆಲಸ ಕೊಡಲು ನೀವು ರೆಡಿನಾ??.

ನಿಮಗಿರುವ ಸಿಂಪಲ್ ಟಾಸ್ಕ್ ಇಷ್ಟೇ!!.. ಸದ್ಯ ಇಸ್ಪೀಟ್ ಕಾರ್ಡುಗಳಲ್ಲಿ ಒಂದಾದ 8ನೇ ನಂಬರ್​ನ ಡೈಮಂಡ್​ ಕಾರ್ಡ್​​ ವೈರಲ್​ ಆಗಿದೆ. ಕಾರ್ಡಿನಲ್ಲಿ ಮೇಲೆ ಮತ್ತು ಕೆಳಗೆ ಎರಡು 8ನೇ ನಂಬರ್​ ಇದೆ. ಆದರೆ, ನೀವು ಮೂರನೇ ಎಂಟನೇ ನಂಬರ್​ ಪತ್ತೆಹಚ್ಚಬೇಕು. ನಿಮ್ಮ ವೀಕ್ಷಣಾ ಕೌಶಲ್ಯವನ್ನು ಹೆಚ್ಚಿಸಲು ನೀವು ಬಯಸುವಿರಾ? ಹಾಗಾದರೆ, ಈ ಸವಾಲನ್ನು ಸ್ವೀಕರಿಸಿ…ಹಾಗಿದ್ದರೆ ನಿಮ್ಮ ಸಮಯ ಈಗ ಶುರುವಾಗಿದೆ. ಆದರೆ, ನಿಮಗೆ 10 ಸೆಕೆಂಡ್​ ಸಮಯ ಮಾತ್ರ ಕೊಡಲಾಗುತ್ತದೆ. ಅಷ್ಟರಲ್ಲಿ ನೀವು ಮೂರನೇ 8 ಅನ್ನು ಪತ್ತೆ ಹಚ್ಚಬೇಕು.

ಮೂರನೇ 8 ಅನ್ನು ಪತ್ತೆಹಚ್ಚಲು ನಿಮ್ಮ ತಲೆಗೆ ಸ್ವಲ್ಪ ಕೆಲಸ ಕೊಡಬೇಕಿದೆ. 10 ಸೆಕೆಂಡ್​ ಸಮಯದಲ್ಲಿ ನೀವು ಮೂರನೇ 8 ಅನ್ನು ಕಂಡಹಿಡಿದರೆ ನಿಮ್ಮ ಕಣ್ಣಿನ ಸಾಮರ್ಥ್ಯ ಮತ್ತು ಬುದ್ಧಿಮತ್ತೆಗೆ ನೀವೇ ಫುಲ್​ ಮಾರ್ಕ್ಸ್​ ಕೊಟ್ಟು ಬೆನ್ನು ತಟ್ಟಿಕೊಳ್ಳಿ!!. ಒಂದು ವೇಳೆ ಗುರುತಿಸಲು ಸಾಧ್ಯವಾಗದೇ, ಎಲ್ಲಿದೆ ಅಂತ ಹುಡುಕಾಡುತ್ತಿದ್ದರೆ ಈ ಕೆಳಗಿನ ಚಿತ್ರವನ್ನು ನೋಡಿ ನಿಮಗೆ ಉತ್ತರ ದೊರೆಯಲಿದೆ.

Leave A Reply

Your email address will not be published.