ಮನೆಯಲ್ಲಿ ಕಪ್ಪು ಹಾಗೂ ಕೆಂಪು ಇರುವೆ ಕಂಡುಬಂದ್ರೆ ಯಾವುದರ ಸಂಕೇತ ಗೊತ್ತೇ?
ಅದೃಷ್ಟ ಮತ್ತು ದುರಾದೃಷ್ಟ ಇವೆರಡೂ ನಮ್ಮ ಕೈಯಲ್ಲಿಲ್ಲ. ಯಾವುದೇ ಸಂದರ್ಭವನ್ನು ಒಳ್ಳೆಯದು ಅಥವಾ ಕೆಟ್ಟದ್ದೆಂದು ಕರೆಯುವ ಮೊದಲು ತಾಳ್ಮೆ ಇರಬೇಕು. ಆರಂಭದಲ್ಲಿ ನಮಗೆ ಕೆಟ್ಟದ್ದು ಎನಿಸಿದ್ದು ಮುಂದೆ ಅದೃಷ್ಟ ತರಬಹುದು. ಆದ್ರೆ, ಕೆಲವೊಂದು ಬಾರಿ ಮುಂಜಾನೆಯಿಂದ ಮುಸ್ಸಂಜೆವರೆಗೆ ಹೇಗೆ ನಮ್ಮ ದಿನಚರಿ ಆರಂಭಿಸುತ್ತೇವೆ ಎಂಬುದರ ಮೇಲೆ ಪೂರ್ತಿ ದಿನ ನಿಂತಿರುತ್ತದೆ.
ಶಾಸ್ತ್ರ, ಸಂಪ್ರದಾಯಗಳ ಪ್ರಕಾರ ನೋಡೋದಾದ್ರೆ, ಹಿರಿಯರು ಕೆಲವೊಂದು ವಿಚಾರಗಳನ್ನು ಅಶುಭ ಎಂದು ಪರಿಗಣಿಸುತ್ತಾರೆ. ಹೌದು. ಹೆಚ್ಚಿನ ಜನರಿಗೆ ಅಭ್ಯಾಸವೇ ಇದೆ. ಆ ದಿನ ಏನಾದರೂ ಕೆಟ್ಟದು ಸಂಭವಿಸಿದ್ರೆ, ಬೆಳಗ್ಗೆ ಆ ಕೆಲಸ ಮಾಡಿದೆ ಅಥವಾ ಆ ವ್ಯಕ್ತಿಯನ್ನು ನೋಡಿದೆ ಅನ್ನೋರು ಹೆಚ್ಚು. ಇದೇ ರೀತಿ ಹಲವು ನಂಬಿಕೆಗಳ ಮೇಲೆ ಘಟನೆಗಳನ್ನು ಸೂಚಿಸಲಾಗುತ್ತದೆ.
ಅದರಂತೆ, ಮನೆಯಲ್ಲಿ ಇರುವೆಗಳು ಕಾಣಿಸಿಕೊಳ್ಳುವುದಕ್ಕೂ ಸೂಚನೆಗಳಿವೆ. ಕೆಲವು ಸಂದರ್ಭಗಳಲ್ಲಿ, ದೊಡ್ಡ ಸಂಖ್ಯೆಯ ಇರುವೆಗಳು ಒಂದೇ ಬಾರಿಗೆ ಮನೆಯಲ್ಲಿ ಕಾಣಿಸಿಕೊಳ್ಳುತ್ತವೆ. ಅದು ಸ್ವಲ್ಪ ಸಮಯದ ನಂತರ ಕಣ್ಮರೆಯಾಗುತ್ತಾದೆ. ಕಪ್ಪು ಮತ್ತು ಕೆಂಪು ಇರುವೆಗಳು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುತ್ತವೆ. ಶಕುನಗಳ ಪ್ರಕಾರ, ಕಪ್ಪು ಇರುವೆಗಳ ನೋಟವನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಮನೆಯಲ್ಲಿ ಕಪ್ಪು ಇರುವೆಗಳನ್ನು ನೋಡುವುದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ನಿಮ್ಮ ದೈಹಿಕ ಸಂತೋಷಗಳು ಹೆಚ್ಚಾಗಲಿವೆ ಎಂಬುದಕ್ಕೆ ಇದು ಉತ್ತಮ ಸಂಕೇತವಾಗಿದೆ. ಯಾವುದೇ ಧಾನ್ಯದಲ್ಲಿ ಕಪ್ಪು ಇರುವೆ ಕಂಡುಬಂದರೆ, ಅದು ಹೆಚ್ಚು ಮಂಗಳಕರ ಎಂದರ್ಥ. ಮನೆಯಲ್ಲಿ ಕಪ್ಪು ಇರುವೆಗಳು ಕಂಡುಬಂದರೆ, ಸಕ್ಕರೆ ಅಥವಾ ಹಿಟ್ಟಿನಂತಹದನ್ನು ನೀಡುವುದು ಒಳ್ಳೆಯದು.
ಒಂದು ವೇಳೆ, ಒಂದೇ ಬಾರಿ ಕೆಂಪು ಇರುವೆಗಳು ಗುಂಪು ಗುಂಪಾಗಿ ಬಂದರೆ ಅದು ದುರಾದೃಷ್ಟದ ಸಂಕೇತ ಎಂದು ಹೇಳಲಾಗುತ್ತದೆ. ಇದು ಮನೆಯಲ್ಲಿ ಮುಂಬರುವ ತೊಂದರೆಯ ಸಂಕೇತವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ಕೆಂಪು ಇರುವೆಗಳು ಹೊರಬಂದರೆ, ಭವಿಷ್ಯದಲ್ಲಿ ನೀವು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ಹಣಕಾಸಿನ ವೆಚ್ಚಗಳು ಸಹ ಹೆಚ್ಚಾಗುತ್ತವೆ ಎಂದರ್ಥ. ಕಪ್ಪು ಇರುವೆಗಳು ಉತ್ತರ ದಿಕ್ಕಿನಿಂದ ಬಂದರೆ ಅದು ತುಂಬಾ ಶುಭ. ಹಾಗೆಯೇ ಕೆಂಪು ಇರುವೆಗಳು ಪೂರ್ವದಿಂದ ಬಂದರೆ ಅಶುಭ. ಕೆಂಪು ಇರುವೆಗಳು ಪಶ್ಚಿಮದಿಂದ ಮಂಗಳಕರವಾಗಿವೆ.