Zeb Pixaplay 17: 224 ಇಂಚಿನ ಸ್ಮಾರ್ಟ್ ಪ್ರೊಜೆಕ್ಟರ್ ಇಲ್ಲಿದೆ ನೋಡಿ | ಒಮ್ಮೆ ಖರೀದಿಸಿ ನೋಡಿ, ಥೇಟ್ ಥಿಯೇಟರ್ ಫೀಲಿಂಗ್ ಕೊಡುತ್ತೆ!!!

ಮಾರುಕಟ್ಟೆಗೆ ಸ್ಮಾರ್ಟ್ ಟಿವಿ, ಸ್ಮಾರ್ಟ್ ಫೋನ್ ಗಳು ಲಗ್ಗೆ ಇಡುವಂತೆ, ಸ್ಮಾರ್ಟ್ ಪ್ರೊಜೆಕ್ಟರ್ ಕೂಡ ಹೆಚ್ಚು ಬಿಡುಗಡೆ ಆಗುತ್ತಿವೆ. ಹಾಗೆಯೇ ಇದೀಗ ಝೆಬ್​ ಪಿಕ್ಸಾಪ್ಲೇ ಕಂಪನಿಯಿಂದ, ಥಿಯೇಟರ್ ರೀತಿಯಲ್ಲೇ ಉತ್ತಮ ಅನುಭವ ನೀಡುವಂತಹ ಹೊಸ ಸ್ಮಾರ್ಟ್​ ಪ್ರೊಜೆಕ್ಟರ್​ ಝೆಬ್​ ಪಿಕ್ಸಾಪ್ಲೇ 17 (Zeb Pixaplay 17) ಬಿಡುಗಡೆಯಾಗಿದ್ದು, ಇದು 224 ಡಿಸ್​ಪ್ಲೇ ಸ್ಕ್ರೀನ್​ನೊಂದಿಗೆ ಚಿತ್ರಗಳನ್ನು ಪ್ರದರ್ಶಿಸುತ್ತದೆ. ಇನ್ನು ಇದರ ಫೀಚರ್ಸ್ ಹೇಗಿದೆ? ಬೆಲೆ ಎಷ್ಟು? ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಈ ಸ್ಮಾರ್ಟ್​ ಪ್ರೊಜೆಕ್ಟರ್​ ಹಲವು ಉತ್ತಮ ಫೀಚರ್ಸ್​ಗಳಾದ ಆಟೋಫೋಕಸ್, ಕೀಸ್ಟೋನ್ ಅಳವಡಿಕೆ ಮತ್ತು ಡಾಲ್ಬಿ ಆಡಿಯೋ ಬೆಂಬಲದಂತಹ ಫೀಚರ್ಸ್​ಗಳನ್ನು ಒಳಗೊಂಡಿದೆ. ಹಾಗೆಯೇ ಉತ್ತಮ ಗುಣಮಟ್ಟದ ಪವರ್​ಫುಲ್​ ಸ್ಪೀಕರ್​​ ಅನ್ನು ಕೂಡ ಹೊಂದಿದೆ. ಡ್ಯುಯಲ್ ಹೆಚ್​​ಡಿಎಮ್​ಐ ಪೋರ್ಟ್‌ಗಳು, ಎರಡು ಯುಎಸ್​​ಬಿ ಪೋರ್ಟ್‌ಗಳು ಮತ್ತು AUX ಔಟ್‌ಪುಟ್ ಪೋರ್ಟ್ ಅನ್ನು ಹೊಂದಿದ್ದು, ಪ್ರೊಜೆಕ್ಟರ್ ಲೈಟ್​​ ಸುಮಾರು 30 ಸಾವಿರ ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ಹಾಗೇ ಈ ಪ್ರೊಜೆಕ್ಟರ್‌ನಲ್ಲಿ ನಿಮ್ಮ ಸ್ಮಾರ್ಟ್ ಫೋನ್‌ನಿಂದ ಕಾಸ್ಟಿಂಗ್ ಕನೆಕ್ಟ್​ ಮಾಡುವ​​ ಮೂಲಕ ನಿಮಗಿಷ್ಟವಾದ ಸಿನೆಮಾಗಳನ್ನು ನೋಡಬಹುದಾಗಿದೆ.

ಈ ಸ್ಮಾರ್ಟ್​​ ಪ್ರೊಜೆಕ್ಟರ್​ ಬಲಿಷ್ಠವಾದ ಕ್ವಾಡ್ ಕೋರ್ ಪ್ರೊಸೆಸರ್ ಅನ್ನು ಹೊಂದಿದ್ದು, 32 GB RAM ಇದ್ದು, ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಂತಹ ಫೀಚರ್ಸ್​ ಅನ್ನು ಕೂಡ ಒಳಗೊಂಡಿದೆ. ಹಾಗೇ ​ಪ್ರೊಜೆಕ್ಟರ್ ಅನ್ನು ರಿಮೋಟ್ ಮೂಲಕ ಕಂಟ್ರೋಲ್ ಮಾಡಬಹುದು. ಅಲ್ಲದೆ, ಇದಕ್ಕೆ ಹೆಚ್ಚುವರಿ ಸ್ಪೀಕರ್‌ಗಳನ್ನು ಕೂಡ ಸೇರಿಸಬಹುದು. ಜೊತೆಗೆ ಬ್ಲೂಟೂತ್ 5.1 ಲಭ್ಯವಿದ್ದು, ಸ್ಪೀಕರ್‌ಗಳಿಗೆ ಸುಲಭವಾಗಿ ಕನೆಕ್ಟ್​ ಮಾಡಬಹುದಾಗಿದೆ. ಇದಿಷ್ಟೇ ಅಲ್ಲದೆ, ಈ ಸ್ಮಾರ್ಟ್ ಪ್ರೊಜೆಕ್ಟರ್ ಖರೀದಿ ಮಾಡುವವರಿಗೆ ಬ್ಯಾಕ್‌ಪ್ಯಾಕ್ ಕೂಡ ಲಭ್ಯವಾಗುತ್ತದೆ. ಹಾಗಾಗಿ ನೀವು ಈ ಪ್ರೊಜೆಕ್ಟರ್​ ಅನ್ನು ಎಲ್ಲಿಬೇಕಾದರು ಕೊಂಡೊಯ್ಯಬಹುದು.

ಇನ್ನೂ, ಡಿಸ್​ಪ್ಲೇ ಫೀಚರ್ಸ್​ ಬಗ್ಗೆ ಹೇಳಬೇಕಾದರೆ, ಇದರಲ್ಲಿ 224 ಇಂಚುಗಳ ಡಿಸ್​ಪ್ಲೇ ಸ್ಕ್ರೀನ್​ನೊಂದಿಗೆ ಸಿನೆಮಾಗಳನ್ನು ನೋಡಬಹುದು. ಈ ಪ್ರೊಜೆಕ್ಟರ್ 6000 ಲ್ಯುಮೆನ್ಸ್ ಬ್ರೈಟ್‌ನೆಸ್ ಹೊಂದಿದೆ ಎಂದು ಕಂಪನಿ ತನ್ನ ವರದಿಯಲ್ಲಿ ಹೇಳಿದೆ. ಹಾಗೇ ಈ ಬ್ರೈಟ್​ನೆಸ್​ ಅನ್ನು ವೀಕ್ಷಕರಿಗೆ ಬೇಕಾದ ಹಾಗೆ ಇಟ್ಟುಕೊಂಡು ಸಿನೆಮಾಗಳನ್ನು ನೋಡಬಹುದಾಗಿದೆ.

ಈ ಸ್ಮಾರ್ಟ್ ಪ್ರೊಜೆಕ್ಟರ್ ಅನ್ನು ಟೆಕ್ನಾಲಜಿ ಮಾರುಕಟ್ಟೆಯಲ್ಲಿ 24,999 ರೂಪಾಯಿಗೆ ಖರೀದಿಸಬಹುದು. ನೀವು ಬ್ಯಾಂಕ್ ಕ್ರೆಡಿಟ್​ ಕಾರ್ಡ್​ ಅಥವಾ ಡೆಬಿಟ್​ ಕಾರ್ಡ್​ ಮೂಲಕ ಖರೀದಿ ಮಾಡುವುದಾದರೆ ಈ ಸ್ಮಾರ್ಟ್ ಪ್ರೊಜೆಕ್ಟರ್ ಕೇವಲ 24 ಸಾವಿರ ರೂಪಾಯಿಯಲ್ಲಿ ಲಭ್ಯವಾಗುತ್ತದೆ. ಹಾಗೆಯೇ ಈ ಸ್ಮಾರ್ಟ್​​ ಪ್ರೊಜೆಕ್ಟರ್​ ದೊಡ್ಡ ಡಿಸ್​ಪ್ಲೇ ಗಾತ್ರವನ್ನು ಹೊಂದಿರುವುದರಿಂದ ಸಣ್ಣ ಮನೆಗಳಿಗೆ ಸೂಕ್ತವಲ್ಲ. ಹಾಗಾಗಿ ಇದನ್ನು ಖರೀದಿ ಮಾಡಬೇಕಾದರೆ ಸರಿಯಾಗಿ ಚೆಕ್​ ಮಾಡಿ, ಸಂಪೂರ್ಣ ಮಾಹಿತಿ ತಿಳಿದುಕೊಂಡು ಖರೀದಿಸಿದರೆ ಒಳ್ಳೆಯದು.

Leave A Reply

Your email address will not be published.