ವಾಟ್ಸಪ್ ನಲ್ಲಿ ‘ಹಾಯ್ ಅಮ್ಮ’ಯೆಂದು ಮೆಸೇಜ್ ಬರುತ್ತಲೇ ಖಾತೆಯಿಂದ ಖಾಲಿ ಆಗುತ್ತೆ ಹಣ!

ಇಂದಿನ ಕಾಲ ಹೇಗೆ ಆಗಿದೆ ಅಂದ್ರೆ ಟೆಕ್ನಾಲಜಿ ಏನೋ ಮುಂದುವರಿದಿದೆ. ಅದರಂತೆ ವಂಚಕರ ಸಂಖ್ಯೆಯೂ ಹೆಚ್ಚಾಗಿದೆ. ಹಲವು ಯುಪಿಐ ನಂತಹ ಡಿಜಿಟಲ್ ಪಾವತಿಗಳು ಬಂದ ಮೇಲಂತೂ ಜನರಿಗೆ ಸುಲಭವಾಗಿ ವಹಿವಾಟು ನಡೆಸಲು ಸಾಧ್ಯವಾಗುತ್ತಿದೆ. ಆದ್ರೆ ಇದನ್ನೇ ಬಂಡವಾಳವಾಗಿಸಿಕೊಂಡು ಹಣ ಲೂಟಿ ಮಾಡುತ್ತಿದ್ದಾರೆ.

ಹೌದು. ಬ್ಯಾಂಕ್ ಖಾತೆಯಿಂದ ಹಣ ಕದಿಯಲು ಹೊಸ ಐಡಿಯಾ ಮಾಡಿಕೊಂಡಿರುವ ಕಿರಾತಕರು, ದೈತ್ಯ ಮೆಸ್ಸೇಜ್ ಆಪ್ ವಾಟ್ಸಪ್ ಅನ್ನೇ ಉಪಯೋಗಿಸಿಕೊಂಡಿದ್ದಾರೆ. ಆದ್ದರಿಂದಲೇ ಸೈಬರ್ ಸೆಕ್ಯೂರಿಟಿಯವರು ಸಾರ್ವಜನಿಕರಿಗೆ ಈ ವಾಟ್ಸಾಪ್ ಮತ್ತು ಎಸ್‌ಎಂಎಸ್ ನಲ್ಲಿ ಬರುವ ಅನಗತ್ಯ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ ಮತ್ತು ಅಪರಿಚಿತ ಸಂಖ್ಯೆಗಳಿಂದ ಬರುವಂತಹ ಸಂದೇಶಗಳನ್ನು ತೆರೆದು ಸಹ ನೋಡಬೇಡಿ ಎಂದು ಮಾಹಿತಿ ನೀಡಿದ್ದಾರೆ.

ಅದ್ರಂತೆ ಇದೀಗ ವಾಟ್ಸಾಪ್‌ನಲ್ಲಿ ಹಾಯ್‌ ಅಮ್ಮ ಅಂತಾ ಸಂದೇಶ ಕಳುಹಿಸಿ ಬ್ಯಾಂಕ್‌ ಅಕೌಂಟ್‌ನಲ್ಲಿ ಹಣ ಎಗರಿಸುವ ತಂಡವೊಂದು ಸುತ್ತಾಡುತ್ತಿದೆ. ಹೌದು. ವಾಟ್ಸಾಪ್‌ನಲ್ಲಿ ಕುಟುಂಬ ಸದಸ್ಯರಂತೆ ಸಂದೇಶ ಕಳುಹಿಸುವ ವಂಚಕರು ಅಕೌಂಟ್‌ ಡಿಟೇಲ್ಸ್‌ ಪಡೆದು ಹಣ ಎಗರಿಸುವ ಮಾರ್ಗ ಅನುಸರಿಸುತ್ತಿದ್ದಾರೆ. ಇಂತಹ ಘಟನೆಯೊಂದು ಆಸ್ಟ್ರೇಲಿಯಾದಲ್ಲಿ ನಡೆದಿದೆ.

ಆನ್‌ಲೈನ್‌ನಲ್ಲಿ ಹಣ ವಂಚನೆ ಮಾಡುವ ಸಾಕಷ್ಟು ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿವೆ. ಆದರೆ ವಾಟ್ಸಾಪ್‌ ಮೂಲಕ ನಿಮ್ಮ ಬ್ಯಾಂಕ್‌ ಖಾತೆಗೆ ಕನ್ನ ಹಾಕುವ ಈ ರೀತಿಯ ಪ್ರಕರಣ ತೀರಾ ಅಪರೂಪ ಎನ್ನಬಹುದಾಗಿದೆ. ಸದ್ಯ ವಾಟ್ಸಾಪ್‌ ಮೂಲಕ ಹಣ ಎಗರಿಸುವ ಪ್ರಕರಣ ಇದೀಗ ಎಲ್ಲೆಡೆ ಸಖತ್‌ ಸೌಂಡ್‌ ಮಾಡ್ತಿದೆ. ಹಣಕ್ಕಾಗಿ ಸೈಬರ್‌ ವಂಚಕರು ಹೇಗೆಲ್ಲಾ ಟ್ರಿಕ್ಸ್‌ ಬಳಸುತ್ತಾರೆ ಅನ್ನೊದಕ್ಕೆ ಇದೊಂದು ಸ್ಪಷ್ಟ ಉದಾಹರಣೆಯಾಗಿದೆ. ಇದು ಆಸ್ಟ್ರೇಲಿಯಾದಲ್ಲಿ ನಡೆದಿರುವ ಘಟನೆಯಾಗಿದ್ದು, ಎಲ್ಲಾ ವಾಟ್ಸಾಪ್‌ ಬಳಕೆದಾರರು ದಂಗಾಗುವಂತೆ ಮಾಡಿದೆ.

ಪ್ರಕರಣದಲ್ಲಿ ವಂಚಕರು ವಾಟ್ಸಾಪ್‌ನಲ್ಲಿ ವ್ಯಕ್ತಿಯೊಬ್ಬರಿಗೆ ‘ಹಾಮ್‌ ಮಮ್‌’ (ಹಾಯ್‌ ಅಮ್ಮ) ಅಂತಾ ಸಂದೇಶ ಕಳುಹಿಸಿದ್ದಾರೆ. ಕುಟುಂಬ ಸದಸ್ಯರ ರೀತಿಯಲ್ಲಿ ಸಂದೇಶ ಕಳುಹಿಸಿ ಮನೆಯವರನ್ನು ಯಾಮಾರಿಸಿದ್ದಾರೆ. ಅಲ್ಲದೆ ಆಪ್ತ ಸ್ನೇಹಿತರು ಅಥವಾ ಕುಟುಂಬ ಸದಸ್ಯರ ರೀತಿಯಲ್ಲಿ ನಿಮ್ಮ ಕುಟುಂಬ ಸದಸ್ಯರ ಫೋನ್‌ ಕಳೆದುಹೋಗಿದೆ ಅವರಿಗೆ ಇದೀಗ ಹಣದ ಸಹಾಯದ ಅವಶ್ಯಕತೆಯಿದೆ ಎಂದು ಜನರನ್ನು ನಂಬಿಸಿ ಅವರಿಂದ ಬ್ಯಾಂಕ್‌ ಮಾಹಿತಿ ಪಡೆದುಕೊಂಡು ಹಣ ಎಗಿರಿಸಿದ್ದಾರೆ.

ಇದೇ ರೀತಿಯಲ್ಲಿ ಬೇರೆ ಸಂಖ್ಯೆಯಿಂದ ವಾಟ್ಸಾಪ್‌ನಲ್ಲಿ ಹಾಯ್‌ ಅಮ್ಮು ಅಂತಾ ಕಳುಹಿಸಿ ಆಸ್ಟ್ರೇಲಿಯಾದಲ್ಲಿ ಸುಮಾರು $ 7 ಮಿಲಿಯನ್ (ಅಂದಾಜು 57.84 ಕೋಟಿ ರೂ.) ಹಣವನ್ನು ದೋಚಿದ್ದಾರೆ. ಆಸ್ಟ್ರೇಲಿಯನ್ ಗ್ರಾಹಕ ಮತ್ತು ಕಾಂಪಿಟಿಷನ್ ಆಯೋಗವು (ACCC) ‘ಹಾಯ್ ಮಮ್’ ಹಗರಣದ ಬಗ್ಗೆ ಮಾಹಿತಿ ನೀಡಿದೆ. ಅದರಂತೆ ಈ ಹಗರಣದಲ್ಲಿ ಅಂದಾಜು 1,150 ಕ್ಕೂ ಹೆಚ್ಚು ಜನರು ಮೋಸ ಹೋಗಿದ್ದಾರೆ ಎಂದು ವರದಿಯಾಗಿದೆ.

Leave A Reply

Your email address will not be published.