ನಾನು ನನ್ನ ಮಗ ಒಟ್ಟಿಗೆ ಅಡೆಲ್ಟ್‌ ಕಂಟೆಂಟ್‌ ಸಿನಿಮಾ ನೋಡಿದ್ದೇವೆ – RGV ತಾಯಿಯ ಮಾತು ಕೇಳಿ ಶಾಕ್‌ ಆದ ಜನ

ಭಾರತೀಯ ಸಿನಿರಂಗದಲ್ಲಿ ಸರ್ಕಾರ, ರಕ್ತಚರಿತ್ರೆ, ಅಟ್ಯಾಕ್ಸ್‌ ಅಪ್‌ 26-11 ಸೇರಿದಂತೆ ಟಾಲಿವುಡ್‌ನಲ್ಲಿಯೂ ಸಹ ಅದ್ಭುತ ಸಿನಿಮಾಗಳನ್ನು ಆರ್‌ಜಿವಿ ನಿರ್ದೇಶಿಸಿದ್ದು, ಇತ್ತೀಚೆಗೆ ವಿವಾದಗಳಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿರುವ ಡೈರೆಕ್ಟರ್‌ ರಾಮ್ ಗೋಪಾಲ್ ಸದ್ಯ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದ್ದಾರೆ.

 


ಭಾರತೀಯ ಚಿತ್ರದ ಸ್ಟಾರ್‌ ಡೈರೆಕ್ಟರ್‌ಗಳ ಪೈಕಿ ಆರ್‌ಜಿವಿ ಕೂಡಾ ಒಬ್ಬರಾಗಿದ್ದು, ವರ್ಮಾ ಸಿನಿಮಾಗಳು ಎಂದರೆ ಸಾಕು ಜನರಿಗೆ ಇನ್ನಿಲ್ಲದ ಕ್ರೇಜ್‌ ಎಂದರೆ ತಪ್ಪಾಗದು. ರಕ್ತಸಿಕ್ತ ಸಿನಿಮಾಗಳನ್ನೂ ಹೆಚ್ಚಾಗಿ ನಿರ್ಮಾಣ ಮಾಡುತ್ತಿದ್ದ ಆರ್‌ಜಿವಿ ಇದೀಗ ರೊಮ್ಯಾಂಟಿಕ್‌ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ.

‘ಶಿವ’, ‘ಸರ್ಕಾರ್‌’, ‘ರಂಗೀಲಾ’, ‘ಕಂಪೆನಿ’, ‘ರಕ್ತಚರಿತ್ರ’ ರೀತಿಯ ಅದ್ಭುತ ಸಿನಿಮಾಗಳನ್ನು ನಿರ್ದೇಶಿಸಿದ ರಾಮ್‌ಗೋಪಾಲ್ ವರ್ಮಾ ಈಗ ಬಿಗ್ರೇಡ್ ಸಿನಿಮಾಗಳನ್ನು ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಚಿತ್ರ ಕಾಮೆಂಟ್‌ಗಳನ್ನು ಮಾಡುತ್ತಾ ಕಾಲ ಹರಣ ಮಾಡುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅಶ್ಲೀಲ ಸಿನಿಮಾಗಳನ್ನು ನಿರ್ದೇಶಿಸುತ್ತಿದ್ದ ವರ್ಮಾ ಈಗ ಅಶ್ಲೀಲ ಸಂದರ್ಶನಗಳನ್ನು ಕೂಡ ಹಂಚುತ್ತಿದ್ಧು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಅರಿಯಾನ, ಅಶು ರೆಡ್ಡಿ, ಸಿರಿ ಸ್ಟೆಜಿ ಯಂತಹ ನಿರೂಪಕಿಯರ ಜೊತೆಗೂ ಕೂಡ ಅತಿ ಸಲಿಗೆಯಿಂದ ನಡೆದುಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ನಿರೂಪಕಿಯ ಕಾಲಿಗೆ ಮುತ್ತಿಡುವ ವೀಡಿಯೋ ವೈರಲ್ ಆದ ಬೆನ್ನಲ್ಲೆ, ತೊಡೆ ಚೆನ್ನಾಗಿದೆ ಎಂದದ್ದು ಸಾಲದು ಎಂಬಂತೆ ಇದನ್ನು ಊಹಿಸಿಕೊಂಡು ತನ್ನ ಕಲ್ಪನಾ ಲೋಕದಲ್ಲಿ ವಿಹರಿಸುತ್ತಾ ಹಸ್ತ ಮೈಥುನ ಮಾಡಿಕೊಂಡೆ ಎನ್ನುವ ಮಾತುಗಳ ಮೂಲಕ ನೆಟ್ಟಿಗರ ಕೋಪಕ್ಕೆ ತುತ್ತಾಗಿದ್ದಾರೆ.

ಈ ರೀತಿಯ ಸಂದರ್ಶನದ ಮೂಲಕ ಯಾರಿಗೆ ಉಪಯೋಗವಾಗುತ್ತಿದೆ?? ಇದೆಲ್ಲ ಅತಿಯಾಯಿತು ಎಂದು ಕುಟುಂಬ ಸದಸ್ಯರೇ ಹೇಳುತ್ತಿರುವ ನಡುವೆ ಆರ್‌ಜಿವಿ ತಾಯಿ ಮಾತ್ರ “ನನ್ನ ಮಗ ಮಾಡುತ್ತಿರುವುದರಲ್ಲಿ ತಪ್ಪೇನಿದೆ?” ಎಂದಿದ್ದು ಎಲ್ಲರನ್ನು ಅಚ್ಚರಿಗೆ ತಳ್ಳಿದೆ.

ವರ್ಮಾ ಅವರ ವಾದ, ಮಾತುಗಳು ನೋಡುಗರಿಗೆ ಬೆರಗು ಮೂಡಿಸುತ್ತದೆ. ಅವರ ಚಿಂತನಾ ಶೈಲಿ, ಮಾತನಾಡುವ ವೈಖರಿ ಹೆಚ್ಚಿನವರಿಗೆ ಅಸಹ್ಯ ಭಾವನೆ ಮೂಡಿಸುತ್ತದೆ. ಆದರೆ ಅವರ ತಾಯಿ ಸೂರ್ಯವತಿ ಮಾತುಗಳು ಅದಕ್ಕಿಂತಲೂ ವಿಚಿತ್ರ ಎಂದೆನಿಸುತ್ತದೆ. ಇದಕ್ಕೆ ಕಾರಣವೂ ಇದೆ. ಇತ್ತೀಚೆಗೆ ಯೂಟ್ಯೂಬ್‌ ಸಂದರ್ಶನವೊಂದರಲ್ಲಿ ಸೂರ್ಯವತಿಯವರ ಮಾತುಗಳನ್ನು ಕೇಳಿದವರು ಶಾಕ್ ಆಗಿದ್ದು, ಈ ರೀತಿ ಯೋಚಿಸುವ ತಾಯಿ ಕೂಡ ಇರಲು ಸಾಧ್ಯವೇ?? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ಆರ್‌ಜಿವಿ ಹುಚ್ಚಾಟದ ಬಗ್ಗೆ ಅವರ ಸ್ವಂತ ಭಾವ ಕೂಡ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ರಾಮ್‌ಗೋಪಾಲ್ ವರ್ಮಾ ಅವರ ನಡೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರ ತಾಯಿ ಸೂರ್ಯವತಿ ಸಮಾಜಾಯಿಸಿ ಕೊಂಡಿದ್ದು ನಿಜಕ್ಕೂ ಅಚ್ಚರಿ ಹಾಗೂ ನೆಟ್ಟಿಗರನ್ನು ಅವಕ್ಕಾಗಿಸಿದೆ.

‘ನನಗೆ ಅವನು ಒಬ್ಬ ಯೋಗಿ, ಒಬ್ಬ ವಿಜ್ಞಾನಿ ರೀತಿ ಕಾಣುತ್ತಾನೆ. ನನ್ನ ಮಗ ಬಹಳ ಒಳ್ಳೆಯವನು. ಆತ ಯಾರಿಗೂ ಕೆಟ್ಟದನ್ನು ಬಯಸುವುದಿಲ್ಲ. ಆತ ತನಗನ್ನಿಸಿದ್ದನ್ನು ಮಾಡುತ್ತಾನೆ, ತನಗನ್ನಿದ್ದನ್ನು ಹೇಳುತ್ತಾನೆ. ಅದರಲ್ಲಿ ನನಗಂತೂ ತಪ್ಪು ಕಾಣಿಸುವುದಿಲ್ಲ’ ಎಂದು ಸೂರ್ಯವತಿ ಅವರು ಮಗನ ಪರ ಬ್ಯಾಟಿಂಗ್ ಮಾಡಿದ್ದಾರೆ.

4 ವರ್ಷಗಳ ಹಿಂದೆ ರಾಮ್‌ಗೋಪಾಲ್ ವರ್ಮಾ ಜಿಎಸ್‌ಟಿ(ಗಾಡ್ ಸೆಕ್ಸ್ ಥ್ರೂತ್) ಎನ್ನುವ ವಿವಾದಾತ್ಮಕ ಶಾರ್ಟ್ ಫಿಲ್ಮ್ ಮಾಡಿದ್ದಾರೆ. ಅಮೆರಿಕಾದ ಪೋರ್ನ್ ಸ್ಟಾರ್ ಮಿಯಾ ಮಾಲ್ಕೊವಾ ಜೊತೆ ಈ ಅಡೆಲ್ಟ್ ಕಂಟೆಂಟ್ ಸಿನಿಮಾ ಮಾಡಿದ್ದು, ಮಿಲಾ ಮಾಲ್ಕಾವಾ ಸಂಪೂರ್ಣ ಬೆತ್ತಲಾಗಿ ಈ ಕಿರುಚಿತ್ರದಲ್ಲಿ ನಟಿಸಿದ್ದು, ಮಹಿಳೆಯರ ಅಂಗಾಂಗವನ್ನು ವರ್ಣಿಸುತ್ತಾ ಭಿನ್ನ ವಿಭಿನ್ನ ಕೋನಗಳಲ್ಲಿ ಮದನಾರಿ ಮಿಯಾ ಮಾಲ್ಕೊವಾಳನ್ನು ತೆರೆಯ ಮೇಲೆ ತೋರಿಸಿದ್ದಾರೆ. ಈ ಸಿನೆಮಾದ ಕುರಿತು ಸೂರ್ಯವತಿಯವರು ಹೇಳಿಕೆ ನೀಡಿದ್ದು, ‘ಜಿಎಸ್‌ಟಿ ಸಿನಿಮಾ ನಾನು ನೋಡಿದ್ದೇನೆ. ಅಷ್ಟೆ ಅಲ್ಲ ವರ್ಮಾ ಜೊತೆಗೆ ಕೂತು ನೋಡಿದ್ದೇನೆ’ ಎಂಬ ಮಾತುಗಳನ್ನು ಹೇಳಿ ಎಲ್ಲರನ್ನು ಬೆರಗು ಮೂಡಿಸಿದ್ದಾರೆ.

ಮಗನ ಜೊತೆಗೆ ಕೂತು ಜಿಎಸ್‌ಟಿ ಸಿನಿಮಾ ನೋಡಿದ್ದೇನೆ ಎನ್ನುವ ಸೂರ್ಯವತಿಯರ ಮಾತು ಕೇಳಿ ಈ ರೀತಿಯ ಕುಟುಂಬ ಪ್ರಪಂಚದಲ್ಲಿ ಎಲ್ಲಿಯೂ ಸಿಗಲು ಸಾದ್ಯವಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದರ ಜೊತೆಗೆ ‘ವರ್ಮಾ ಈ ಜನ್ಮದಲ್ಲಿ ಬದಲಾಗುವುದಿಲ್ಲ ಎಂದು ಕೆಲವರು ಕಿಡಿಕಾರುತ್ತಿದ್ದಾರೆ.

ಚಿಕ್ಕಂದಿನಿಂದಲೂ ವರ್ಮಾ ಬಹಳ ಬುದ್ದಿವಂತನಾಗಿದ್ದು, ಆದರೆ ಆ ಸಂದರ್ಭ ನನಗೆ ಗೊತ್ತಾಗುತ್ತಿರಲಿಲ್ಲ. ನಾವು ಸರಿಯಾಗಿ ಓದುತ್ತಿಲ್ಲ ಎಂದು ಭಾವಿಸಿಕೊಂಡಿದ್ದೆವು. ಆತನ ಜ್ಞಾನಾರ್ಜನೆ ದೊಡ್ಡದು’ ಎಂದು ಸೂರ್ಯವತಿ ಹೇಳಿದ್ದಾರೆ.

ಸದ್ಯ ರಾಮ್‌ ಗೋಪಾಲ್ ವರ್ಮಾ ‘ಡೇಂಜರಸ್’ ಎನ್ನುವ ಲೆಸ್ಬಿಯನ್ ಸಿನಿಮಾ ಮಾಡಿದ್ದಾರೆ. ಅಪ್ಸರಾ ರಾಣಿ ಹಾಗೂ ನೈನಾ ಗಂಗೂಲಿ ಈ ಚಿತ್ರದಲ್ಲಿ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಇಬ್ಬರನ್ನು ಸಿಕ್ಕಾಪಟ್ಟೆ ಬೋಲ್ಡ್ ಆಗಿ ವರ್ಮಾ ತೋರಿಸಿದ್ದಾರೆ. ಈ ಸಿನಿಮಾ ರಿಲೀಸ್‌ಗೆ ಸಾಕಷ್ಟು ಅಡೆತಡೆ ಎದುರಾಗಿದೆ.

Leave A Reply

Your email address will not be published.