Passport Office Recruitment 2023: ಡಿಗ್ರಿ ಪಾಸಾದವರಿಗೆ ಪಾಸ್‌ಪೋರ್ಟ್ ಸಂಸ್ಥೆಯಲ್ಲಿ ಭರ್ಜರಿ ಉದ್ಯೋಗವಕಾಶ | ಸಂಬಳ 2 ಲಕ್ಷದವರೆಗೆ
Passport Office Recruitment 2023: ಕೇಂದ್ರೀಯ ಪಾಸ್‌ಪೋರ್ಟ್ ಸಂಸ್ಥೆಯಲ್ಲಿ(The Central Passport Organization) ಅನೇಕ ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಮಾಹಿತಿಯನ್ನು ಓದಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಕಳುಹಿಸಬೇಕು. ಇದರೊಂದಿಗೆ, ಅಧೀನ ಕಾರ್ಯದರ್ಶಿ/ ಉನ್ನತ ಅಧಿಕಾರಿಗಳು ಶಿಫಾರಸ್ಸು ಮಾಡಿದ ಕಳೆದ 5 ವರ್ಷಗಳ APARನ ಪ್ರತಿಯನ್ನು ಅರ್ಜಿಯೊಂದಿಗೆ ಸೇರಿಸಬೇಕು.
ಸಂಸ್ಥೆ : ಕೇಂದ್ರೀಯ ಪಾಸ್‌ಪೋರ್ಟ್ ಸಂಸ್ಥೆ
ಹುದ್ದೆ : ಡೆಪ್ಯುಟಿ ಪಾಸ್‌ಪೋರ್ಟ್ ಆಫೀಸರ್
ಒಟ್ಟು ಹುದ್ದೆ : 8
ವೇತನ : ತಿಂಗಳಿಗೆ 67,700-2,08,700
ಉದ್ಯೋಗದ ಸ್ಥಳ : ಭಾರತ
ಅರ್ಜಿ ಸಲ್ಲಿಕೆ ಬಗೆ : ಆಫ್ಲೈನ್
ಹುದ್ದೆಯ ವಿವರ :
ಕೊಯಮತ್ತೂರ್-1
ವಿಜಯವಾಡ-1
ಅಹಮದಾಬಾದ್-1
ಚಂಡೀಗರ್-1
ಘಾಜಿಯಾಬಾದ್-1
ಲಕ್ನೋ-1
ಮಧುರೈ-1
ಪಾಟ್ನಾ-1
ಶೈಕ್ಷಣಿಕ ಅರ್ಹತೆ: ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಶೇ.50ರಷ್ಟು ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರಬೇಕು.
ಪೇರೆಂಟ್ ಕೇಡರ್ ಅಥವಾ ಡಿಪಾರ್ಟ್‌ಮೆಂಟ್‌ನಲ್ಲಿ ನಿಯಮಿತ ಹುದ್ದೆಯಲ್ಲಿ ಕೆಲಸ ಮಾಡಿರಬೇಕು. ಅಥವಾ ಪೇ ಮ್ಯಾಟ್ರಿಕ್ಸ್ ಲೆವೆಲ್ 10 ರ ಅಡಿಯಲ್ಲಿ 5 ವರ್ಷಗಳ ಕೆಲಸದ ಅನುಭವವನ್ನು ಹೊಂದಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಪಾಸ್‌ಪೋರ್ಟ್/ ಕಾನ್ಸುಲರ್/ ವಲಸೆ/ ಆಡಳಿತ/ ಹಣಕಾಸು/ ಖಾತೆಗಳು/ ವಿಜಿಲೆನ್ಸ್ ಕೆಲಸ/ ಸಾರ್ವಜನಿಕ ಕುಂದುಕೊರತೆ ಇಲಾಖೆಯಲ್ಲಿ 5 ವರ್ಷಗಳ ಕೆಲಸದ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವೇತನ: ಕೇಂದ್ರೀಯ ಪಾಸ್‌ಪೋರ್ಟ್ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 67,700-2,08,700 ರೂ.ರವರೆಗೆ ಸಂಬಳ ಕೊಡಲಾಗುತ್ತದೆ.
ವಯೋಮಿತಿ: ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು 56 ವರ್ಷ ಮೀರಿರಬಾರದು.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೇಂದ್ರೀಯ ಪಾಸ್‌ಪೋರ್ಟ್ ಸಂಸ್ಥೆಯ ಅಧಿಕೃತ ವೆಬ್ಸೈಟ್ passportindia.gov.in ಗೆ ಭೇಟಿ ನೀಡಬಹುದು. ನವೆಂಬರ್ 30ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಕೊನೆಯ ದಿನಾಂಕವನ್ನು ಇನ್ನೂ ಸಹ ತಿಳಿಸಿಲ್ಲ. ಹಾಗಾಗಿ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಿ.