ಜನನಿಬಿಡ ಪ್ರದೇಶದಲ್ಲಿ ಡ್ರೈವಿಂಗ್ ಕಲಿಕೆ | ಫುಟ್‌ಫಾತ್‌ನಲ್ಲಿ ಚಳಿ ಕಾಯಿಸುತ್ತಿದ್ದ ಮೂರು ಪುಟ್ಟ ಮಕ್ಕಳಿಗೆ ಕಾರು ಡಿಕ್ಕಿ , ಮಕ್ಕಳು ಗಂಭೀರ | ಆರೋಪಿ ಪರಾರಿ
ವಾಹನ ಚಾಲನೆ ಕಲಿಯುವಾಗ ಜನನಿಬಿಡ ಪ್ರದೇಶದಲ್ಲಿ ಕಲಿಯದಿದ್ದರೆ ಉತ್ತಮ. ಏಕೆಂದರೆ ನಿಯಂತ್ರಣ ತಪ್ಪಿ ಏನಾದರೂ ಅಪಘಾತ ಸಂಭವಿಸಿದರೆ ಆಮೇಲೆ ಆಗುವ ಅನಾಹುತಗಳಿಗೆ ಹೊಣೆ ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅಂತಹುದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಡ್ರೈವಿಂಗ್ ಕಲಿಯುವ ಸಂದರ್ಭ ನಿಯಂತ್ರಣಕ್ಕೆ ಸಿಗದ ಕಾರು ಫುಟ್‌ಪಾತ್‌ನಲ್ಲಿ ಕುಳಿತಿದ್ದ ಪುಟ್ಟ ಮಕ್ಕಳಿಗೆ ಡಿಕ್ಕಿ ಹೊಡೆದಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಉತ್ತರ ದೆಹಲಿಯಲ್ಲಿ ಡ್ರೈವಿಂಗ್ ಕಲಿಯುತ್ತಿದ್ದ ವ್ಯಕ್ತಿಯ ನಿಯಂತ್ರಣ ತಪ್ಪಿ, ಫುಟ್‌ಪಾತ್ ಮೇಲೆ ಕುಳಿತಿದ್ದ ಮೂವರು ಮಕ್ಕಳಿಗೆ ಡಿಕ್ಕಿ ಹೊಡೆದಿದ್ದು, ಅವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಉತ್ತರ ದೆಹಲಿಯ ಗುಲಾಬಿ ಬಾಗ್ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.
ಚಾಲಕನನ್ನು ಪ್ರತಾಪ್ ನಗರದ ನಿವಾಸಿ ಗಜೇಂದರ್ ಎಂದು ಗುರುತಿಸಲಾಗಿದೆ. ಪ್ರತಾಪ್ ತಮ್ಮ ಸೋದರನೊಂದಿಗೆ ಮಾರುತಿ ಬ್ರೆಜ್ಜಾವನ್ನು ಓಡಿಸಲು ಕಲಿಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ವೇಳೆ ಕಾರು ನಿಯಂತ್ರಣ ತಪ್ಪಿದಾಗ ಈ ಅವಘಡ ಸಂಭವಿಸಿದೆ. ಇನ್ನೂ, ಪ್ರತಾಪ್ ಮಾನ್ಯವಾದ ನಿಯಮಿತ ಅಥವಾ ಕಲಿಯುವವರ ಚಾಲನಾ ಪರವಾನಗಿಯನ್ನು ಹೊಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಶಕ್ತಿನಗರದಲ್ಲಿರುವ ಲೀಲಾವತಿ ಶಾಲೆಯ ಬಳಿ ಬೆಳಗ್ಗೆ 9 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಫುಟ್‌ಪಾತ್ ಮೇಲೆ ನಿಂತು ಬೆಂಕಿ ಕಾಯಿಸುತ್ತಿದ್ದ ಮೂವರು ಮಕ್ಕಳಿಗೆ ಕಾರು ಡಿಕ್ಕಿ ಹೊಡೆದಿದೆ. ಮಕ್ಕಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಳಿಕ ಆರೋಪಿ ಎಸ್ಕೇಪ್ ಆಗಿದ್ದು, ಹುಡುಕಾಟ ಮುಂದುವರೆದಿದೆ.