ಸಂಧಿವಾತ, ಕೀಲು ನೋವಿನಂತಹ ಸಮಸ್ಯೆ ನಿಮಗಿದ್ರೆ ನೋ ಟೆನ್ಷನ್ | ಜಸ್ಟ್ ಫಾಲೋ ಮಾಡಿ ಈ ಫುಡ್!
ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಹೀಗಾಗಿ, ನಮ್ಮ ಬಗ್ಗೆ ನಾವೆಷ್ಟು ಕಾಳಜಿ ತೆಗೆದುಕೊಳ್ಳುತ್ತೇವೆ ಎಂಬುದು ಮುಖ್ಯವಾಗಿರುತ್ತದೆ. ಕೆಲವೊಂದು ಬಾರಿ ಅದೆಷ್ಟೇ ಒಳ್ಳೆಯ ಆಹಾರ ಸೇವಿಸಿದ್ರು ನಮ್ಮ ಆರೋಗ್ಯ ಮಾತ್ರ ಹದಗೆಟ್ಟಿರುತ್ತೆ. ಕಾರಣ ತಿನ್ನುವ ಆಹಾರ.
ಹೌದು. ಇಂದಿನ ಆಹಾರ ಪದ್ಧತಿಯಿಂದ ಮಕ್ಕಳಿಗೂ ಕೂಡ ಅತೀ ಚಿಕ್ಕ ವಯಸ್ಸಲ್ಲೇ ಅನಾರೋಗ್ಯ ಕಾಡುತ್ತಿದೆ. ಅದರಲ್ಲೂ ಇತ್ತೀಚೆಗೆ ಸಂಧಿವಾತ, ಕೀಲು ನೋವಿನಂತಹ ಸಮಸ್ಯೆಗಳು ಅತೀ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆಹಾರ ತಜ್ಞರ ಪ್ರಕಾರ, ನಿಮ್ಮ ನಿತ್ಯದ ಡಯಟ್ನಲ್ಲಿ ಕೆಲವು ಆಹಾರಗಳನ್ನು ಸೇರಿಸುವ ಮೂಲಕ ಕೀಲು ನೋವಿನ ಸಮಸ್ಯೆಯನ್ನು ಬುಡದಿಂದ ನಿವಾರಿಸಬಹುದು ಎಂದು ಹೇಳಲಾಗುತ್ತದೆ. ಹೀಗಾಗಿ ತಜ್ಞರ ಸಲಹೆ ಮೇರೆಗೆ ಈ ಆಹಾರಗಳನ್ನು ಸೇವಿಸುವುದು ಉತ್ತಮ..
ಬೆಳ್ಳುಳ್ಳಿ:
ಸಾಮಾನ್ಯವಾಗಿ ಚಳಿಗಾಲದಲ್ಲಿ ಶೀತದಿಂದ ಪರಿಹಾರ ಪಡೆಯಲು ಬೆಳ್ಳುಳ್ಳಿಯನ್ನು ಬಳಸಲಾಗುತ್ತದೆ. ಆದರೆ, ಕ್ಯಾಲ್ಸಿಯಂನ ಸಮೃದ್ಧ ಮೂಲವಾಗಿರುವ ಬೆಳ್ಳುಳ್ಳಿಯನ್ನು ನಿತ್ಯ ನಿಮ್ಮ ಆಹಾರದಲ್ಲಿ ಸೇವಿಸುವುದರಿಂದ ಕೀಲು ನೋವಿನ ಸಮಸ್ಯೆಯಿಂದ ಪರಿಹಾರ ಪಡೆಯಬಹುದಾಗಿದೆ. ಬೆಳ್ಳುಳ್ಳಿಯಲ್ಲಿರುವ ಉರಿಯೂತದ ಗುಣಲಕ್ಷಣಗಳು ನೋವು ಮತ್ತು ಊತದ ಸಮಸ್ಯೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸೋಯಾಬೀನ್:
ಸೋಯಾಬೀನ್ನಲ್ಲಿ ಉತ್ತಮ ಪ್ರಮಾಣದ ಒಮೆಗಾ 3 ಕೊಬ್ಬಿನಾಮ್ಲಗಳು ಕಂಡು ಬರುತ್ತದೆ. ಉರಿಯೂತ ಮತ್ತು ನೋವನ್ನು ನಿವಾರಿಸಲು ಸಹಾಯ ಮಾಡುವ ಒಮೆಗಾ 3 ಕೊಬ್ಬಿನಾಮ್ಲಗಳು ಕೀಲು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಶುಂಠಿ:
ಕೀಲು ನೋವು, ದುರ್ಬಲ ಮೂಳೆ ಸಮಸ್ಯೆ ಹೊಂದಿರುವವರಿಗೆ ಶುಂಠಿ ದಿವ್ಯೌಷಧವಾಗಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕ ಮತ್ತು ಉರಿಯೂತದ ಗುಣಲಕ್ಷಣಗಳು ನೋವನ್ನು ನಿವಾರಿಸಲು ಸಹಾಯಕವಾಗಿವೆ.
ಮೀನು:
ಒಮೆಗಾ 3 ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿರುವ ಮೀನಿನ ಸೇವನೆಯು ಕೀಲು ನೋವು ನಿವಾರಣೆಗೆ ವರದಾನವಿದ್ದಂತೆ. ಇದರಲ್ಲಿ ವಿಟಮಿನ್ ಡಿ ಕೂಡ ಸಮೃದ್ಧವಾಗಿದ್ದು, ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
ಆಲಿವ್ ಎಣ್ಣೆ:
ಕೀಲು ನೋವಿನಿಂದ ಪರಿಹಾರ ಪಡೆಯಲು ಆಲಿವ್ ಆಯಿಲ್ ಬಹಳ ಪ್ರಯೋಜನಕಾರಿ ಆಗಿದೆ. ಆಲಿವ್ ಎಣ್ಣೆಯಲ್ಲಿರುವ ಪೋಷಕಾಂಶಗಳು ನೋವು ಮತ್ತು ಉರಿಯೂತವನ್ನು ನಿವಾರಿಸಲು ಕೆಲಸ ಮಾಡುತ್ತದೆ. ಆಲಿವ್ ಎಣ್ಣೆಯಿಂದ ಮಸಾಜ್ ಕೂಡ ಮಾಡಬಹುದಾಗಿದೆ. ಹೀಗಾಗಿ, ಈ ಉತ್ತಮ ಸಲಹೆಯೊಂದಿಗೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ..