ಕಾರು ಪ್ರಿಯರೇ, ಈ 12 ಕಾರುಗಳ ಮೇಲೆ ಭರ್ಜರಿ ರಿಯಾಯಿತಿ | ಈ ಆಫರ್‌ ಮಿಸ್‌ ಮಾಡ್ಕೊಂಡ್ರೆ, ಮತ್ತೆ ಸಿಗಲ್ಲ

ಇತ್ತೀಚೆಗೆ ಸ್ಮಾರ್ಟ್ ಫೋನ್, ಸ್ಮಾರ್ಟ್ ವಾಚ್ ಸೇರಿದಂತೆ ಹಲವು ಸಾಧನಗಳ ಮೇಲೆ ರಿಯಾಯಿತಿ ನೀಡಲಾಗುತ್ತಿದ್ದು, ಇದೀಗ ಕಾರುಗಳು ಮೇಲೆ ಭರ್ಜರಿ ಆಫರ್ ನೀಡಲಾಗಿದೆ. ನೀವೇನಾದರೂ ಕಾರು ಖರೀದಿಯ ಯೋಚನೆಯಲ್ಲಿದ್ದರೆ ಇಲ್ಲಿದೆ ನಿಮಗೆ ಬಂಪರ್ ಆಫರ್. ಡಿಸೆಂಬರ್ ತಿಂಗಳಿನಲ್ಲಿ, ಹಲವು ಕಾರು ಕಂಪನಿಗಳಿಂದ ಕಾರುಗಳ ಮೇಲೆ ಭಾರೀ ರಿಯಾಯಿತಿ ನೀಡಲಾಗಿದ್ದು, ಜನರಿಗೆ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ. ಇನ್ನೂ, ಯಾವೆಲ್ಲಾ ಕಾರುಗಳ ಮೇಲೆ ರಿಯಾಯಿತಿ ಇದೆ ಎಂಬುದರ ವಿವರ ಇಲ್ಲಿದೆ.

ಜೀಪ್ ಮೆರಿಡಿಯನ್ ಕಾರು, ರೂ. 2.5 ಲಕ್ಷದವರೆಗೆ ರಿಯಾಯಿತಿಯಲ್ಲಿ ಲಭ್ಯವಿದೆ. ಇನ್ನೂ, ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಕಾರುಗಳನ್ನು ಖರೀದಿಸಬೇಕೆಂದಿದ್ದರೆ ನೀವು ಈ ಕಾರನ್ನು ಪರಿಶೀಲಿಸಬಹುದಾಗಿದೆ. ಹಾಗೇ ಜೀಪ್ ಕಂಪಾಸ್ ಕಾರು. ಇದು ಸುಮಾರು ರೂ. 1.5 ಲಕ್ಷದವರೆಗೆ ರಿಯಾಯಿತಿಯಲ್ಲಿ ಲಭ್ಯವಿದೆ. ಹಾಗೇ ಈ ಕಾರಿನ ಮೇಲೆ ನಗದು ರಿಯಾಯಿತಿ, ಲಾಯಲ್ಟಿ ಬೋನಸ್, ಎಕ್ಸ್‌ಚೇಂಜ್ ಬೋನಸ್, ಕಾರ್ಪೊರೇಟ್ ಆಫರ್‌ಗಳು ಕೂಡ ಇವೆ. ಇನ್ನೂ, ಈ ಕಾರು ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

ಹಾಗೇ ಸ್ಕೋಡಾ ಕುಶಾಕ್ ಕಾರಿನ ಮೇಲೆ ಕೂಡ ಬಂಪರ್ ಆಫರ್ ನೀಡಲಾಗಿದೆ. ಈ ಕಾರನ್ನು ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್‌ನಂತಹ ಮಾದರಿಗಳೊಂದಿಗೆ ಸ್ಪರ್ಧಿಸಲು ಪರಿಗಣಿಸಲಾಗಿದೆ. ಇದು 1.0 ಲೀಟರ್ ಪೆಟ್ರೋಲ್ ಮತ್ತು 1.5 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದ್ದು, ಈ ಕಾರಿನ ಮೇಲೆ ರೂ. 1.25 ಲಕ್ಷದವರೆಗೆ ರಿಯಾಯಿಜೀಪ್ ಮೆರಿಡಿಯನ್ ರೂ. 2.5 ಲಕ್ಷದವರೆಗೆ ರಿಯಾಯಿತಿ ಇದೆ.

ಟಾಟಾ ಸಫಾರಿ ಮತ್ತು ಹ್ಯಾರಿಯರ್ ಕಾರು. ಇದರ ಗರಿಷ್ಠ ರೂ. ಒಂದು ಲಕ್ಷದವರೆಗೆ ರಿಯಾಯಿತಿ ಪಡೆಯಬಹುದು. ಈ SUVಗಳು 2 ಲೀಟರ್ ಎಂಜಿನ್ ಹೊಂದಿದ್ದು, ಇದರ ಹೊಸ ರೂಪಾಂತರಗಳು ಹೊಸ ವರ್ಷದಲ್ಲಿ ಲಭ್ಯವಿರುತ್ತವೆ. ಹಾಗೇ ಫೋಕ್ಸ್‌ವ್ಯಾಗನ್ ಟೈಗೂನ್‌ ಕಾರು. ಇದು ಕಂಪನಿಯ ಮೊದಲ SUV ಆಗಿದ್ದು, ಈ ಕಾರಿನ ಮೇಲೆ ಗ್ರಾಹಕರು ರೂ. 1 ಲಕ್ಷದವರೆಗೆ ರಿಯಾಯಿತಿ ಪಡೆಯಬಹುದಾಗಿದೆ.

ಮಹೀಂದ್ರ XUV 300 ಇದರ ಮೇಲೆ ರೂ. 75 ಸಾವಿರದವರೆಗೆ ರಿಯಾಯಿತಿಲ್ಲಿ ಲಭ್ಯವಿದೆ. ಈ ಕಾರು ಮೂರು ಎಂಜಿನ್ ಆಯ್ಕೆಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ಹಾಗೇ ನಿಸ್ಸಾನ್ ಕಿಕ್ಸ್ ಮಾದರಿಯಲ್ಲಿ, ಇದು ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದ್ದು, ಈ ಕಾರಿನ ಮೇಲೆ ರೂ. 70 ಸಾವಿರದವರೆಗೆ ರಿಯಾಯಿತಿ ಲಭ್ಯವಿದೆ.

ಮಾರುತಿ ಸುಜುಕಿ ಎಸ್ಪ್ರೆಸೊ ಕಾರು, ಈ ಕಾರಿನ ಮೇಲೆ ರೂ. 75 ಸಾವಿರದವರೆಗೆ ರಿಯಾಯಿತಿ ಇದ್ದು, ಈ ಕಾರು 1.0 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಇನ್ನೂ, ಮಾರುತಿ ಸುಜುಕಿ ಸೆಲೆರಿಯೊ ಮೇಲೆ ಆಫರ್ ಇದ್ದು, ಇದರ ಮೇಲೆ ರೂ. 75 ಸಾವಿರದವರೆಗೆ ರಿಯಾಯಿತಿ ಇದೆ. ಹೋಂಡಾ WRV ಎರಡು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಕಂಪನಿಯಿಂದ ಲಭ್ಯವಿರುವ ಏಕೈಕ SUV ಆಗಿದೆ. ಈ ಕಾರಿನ ಮೇಲೆ ರೂ. 75 ಸಾವಿರದವರೆಗೆ ಆಫರ್ ಇದೆ. ಹೋಂಡಾ ಸಿಟಿ 5ನೇ ತಲೆಮಾರಿನ ಕಾರು ರೂ. 75 ಸಾವಿರದವರೆಗೆ ರಿಯಾಯಿಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.

ಇನ್ನೂ, ಗ್ರಾಂಡ್ ಐ10 ನಿಯೋಸ್ ಟರ್ಬೊ ,ಈ ಕಾರಿನ ಮೇಲೆ ರೂ.1 ಲಕ್ಷದವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ಇದು 1.0 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಆಯ್ಕೆಯಾಗಿದ್ದು, ಶಕ್ತಿಶಾಲಿ ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಇದು ಕೂಡ ಒಂದು.

Leave A Reply

Your email address will not be published.