ಬೆಳ್ಳಾರೆಯ ಯುವ ಉದ್ಯಮಿ ನವೀನ್ ಕಾಮಧೇನು ಅಪಹರಣ ?!

ಬೆಳ್ಳಾರೆಯ ಕಾಮಧೇನು ಜ್ಯುವೆಲ್ಲರ್ಸ್ ಮಾಲಕ ನವೀನ್ ಕಾಮಧೇನು ಅವರನ್ನು ತಂಡವೊಂದು ಬಂದು ಬಲವಂತವಾಗಿ ಆಂಬ್ಯುಲೆನ್ಸ್ ನಲ್ಲಿ ಕೊಂಡೊಯ್ದ ಘಟನೆಯೊಂದು ನಡೆದಿದೆ. ಮನೆಗೆ ಬಂದ ತಂಡವೊಂದು ಮನೆಯಲ್ಲಿದ್ದ ನವೀನ್ ಅವರನ್ನು ಬಲವಂತವಾಗಿ ಕೊಂಡೊಯ್ದರೆಂದೂ, ತಡೆದ ತಾಯಿಯ ಮೇಲೆ ಹಲ್ಲೆ ನಡೆಸಿದರೆಂದೂ ತಿಳಿದು ಬಂದಿದೆ. ಅಪಹರಿಸಿದ ತಂಡದಲ್ಲಿ ದಿವ್ಯಪ್ರಭಾ, ಸ್ಪಂದನಾ, ಪರಶುರಾಮ ಮೊದಲಾದವರಿದ್ದರು ಎನ್ನಲಾಗಿದೆ.

 

ಲಭ್ಯ ಮಾಹಿತಿಯ ಪ್ರಕಾರ, ಇವರನ್ನು ಆಂಬ್ಯುಲೆನ್ಸ್ ನಲ್ಲಿ ಅಪಹರಿಸಲಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸುಳ್ಯದ ಶಿವ ಆಂಬ್ಯುಲೆನ್ಸ್ ನವರು ತಮ್ಮ ಗ್ರೂಪ್ ಗಳಿಗೆ ಮಾಹಿತಿ ರವಾನಿಸಿದ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಬಳಿ ಅಲ್ಲಿಯ ಆಂಬ್ಯುಲೆನ್ಸ್ ನವರು ಬೆಳ್ಳಾರೆಯಿಂದ ಹೋದ ಆಂಬ್ಯುಲೆನ್ಸನ್ನು ತಡೆದು ಅದರಲ್ಲಿದ್ದ ನವೀನ್ ಮತ್ತು ಇತರರನ್ನು ಅಲ್ಲಿಯ ಪೊಲೀಸರಿಗೊಪ್ಪಿಸುವುದಾಗಿ ತಿಳಿದುಬಂದಿದೆ.

ಇಂದು ಮಧ್ಯಾಹ್ನ ಬೆಳ್ಳಾರೆಯಿಂದ ಹಿಂತಿರುಗಿದ ನವೀನ್ ತನ್ನ ಮನೆಯಂಗಳದಲ್ಲಿ ನಿಂತುಕೊಂಡಿರುವಾಗ ಅಂಬ್ಯುಲೆನ್ಸ್‌ನಲ್ಲಿ ಮತ್ತು ಇತರ ಕಾರುಗಳಲ್ಲಿ ಬಂದ ಕೆಲವರು ಅವರನ್ನು ಬಲಾತ್ಕಾರವಾಗಿ ಕಾರಿಗೆ ಕೂರಿಸಲು ಕೊಂಡೊಯ್ದರೆಂದೂ ಇದನ್ನು ಕಂಡ ತಾಯಿ ನೀರಜಾ ಮತ್ತು ಅತ್ತಿಗೆ ಪ್ರಜ್ಞ ತಡೆಯಬಂದರೆಂದೂ ಆ ಸಂದರ್ಭ ಅವರ ಮಧ್ಯೆ ಉರುಡಾಟ ನಡೆದು ಅಪರಿಚಿತರು ನವೀನರನ್ನು ವಾಹನದಲ್ಲಿ ಕೂರಿಸಿಕೊಂಡು ಹೋದರೆಂದೂ ಹೇಳಲಾಗುತ್ತಿದೆ.

ಆ ಬಳಿಕ ಘಟನೆಯಲ್ಲಿ ಗಾಯಗೊಂಡ ತಾಯಿ ನೀರಜಾ ಹಾಗೂ ಅಣ್ಣ ವಿನ್ಯಾಸ್ ಬೆಳ್ಳಾರೆ ಪೋಲೀಸರಿಗೆ ವಿಷಯ ತಿಳಿಸಿ, ಬಳಿಕ ಸುಳ್ಯ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆಂದು ತಿಳಿದು ಬಂದಿದೆ.

ಇತ್ತ ನವೀನರನ್ನು ಆಂಬ್ಯುಲೆನ್ಸ್ ನಲ್ಲಿ ಅಪಹರಿಸಲಾಗಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಸುಳ್ಯದ ಆಂಬ್ಯುಲೆನ್ಸ್ ನವರು ತಮ್ಮ ಗ್ರೂಪ್ ಗಳಿಗೆ ಮಾಹಿತಿ ರವಾನಿಸಿದ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಬಳಿ ಅಲ್ಲಿಯ ಆಂಬ್ಯಲೆನ್ಸ್ ನವರು ಬೆಳ್ಳಾರೆಯಿಂದ ಹೋದ ಆಂಬ್ಯಲೆನ್ಸನ್ನು ತಡೆದು ಅದರಲ್ಲಿದ್ದ ನವೀನ್ ಮತ್ತು ಇತರರನ್ನು ಅಲ್ಲಿಯ ಪೊಲೀಸರಿಗೊಪ್ಪಿಸುವುದಾಗಿ ಮಾಹಿತಿ ಲಭ್ಯವಾಗಿದೆ.

ಇತ್ತೀಚೆಗೆ ಬೆಳ್ಳಾರೆಯಲ್ಲಿ ಪೊಲೀಸ್ ಅಧಿಕಾರಿಯೊಂದಿಗೆ ಅವರ ಪತ್ನಿ ಜತೆಯಲ್ಲಿದ್ದ ಘಟನೆಯ ಬಳಿಕ ನವೀನ್ ಹಾಗೂ ಪತ್ನಿ, ಮನೆಯವರಲ್ಲಿ ವಿರಸ ಮೂಡಿ ಬಳಿಕ ಒಂದೆರಡು ಬಾರಿ ಮಾತುಕತೆ ನಡೆದಿತ್ತೆನ್ನಲಾಗಿದೆ. ಆದಿತ್ಯವಾರವೂ ಮಾತುಕತೆಗೆಂದು ಪತ್ನಿ ಮತ್ತು ಬಂಧುಗಳು ಆಗಮಿಸಿದ್ದು, ಮಾತುಕತೆ ನಡೆದಿತ್ತೆನ್ನಲಾಗಿದೆ. ಸೋಮವಾರ ಈ ಅಪಹರಣ ಘಟನೆ ನಡೆದಿದೆ‌.

ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿರುವ ನವೀನ್ ಅವರ ನೀರಜಾಕ್ಷಿಯವರು ಮಾಧ್ಯಮದೊಂದಿಗೆ ಮಾತನಾಡಿ, ಇಂದು ಮಧ್ಯಾಹ್ನ ಅಂಬ್ಯುಲೆನ್ಸ್‌ನಲ್ಲಿ 7-8 ಜನ ಬಂದು ನವೀನ್ ರವರನ್ನು ಅಪಹರಣ ಮಾಡಿದ್ದಾರೆ. ದಿವ್ಯ ಪ್ರಭಾ, ಅವರ ಮಗ ಮತ್ತು ಮಗಳು ಸ್ಪಂದನಾರವರು ಕೂಡಾ ಬಂದಿದ್ದರು. ಅಪಹರಣಗಾರರು ನನ್ನ ಮತ್ತು ಸೊಸೆಯ ಮೇಲೆ ಹಲ್ಲೆ ಮಾಡಿದ್ದಾರೆ. ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ಕೊಡಲು ಬಂದಾಗ ದೂರು ಸ್ವೀಕರಿಸಲಿಲ್ಲ. ಅದಕ್ಕಾಗಿ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಸುಳ್ಯ ಠಾಣೆಗೆ ದೂರು ಕೊಡಲು ಬಂದಿದ್ದೇವೆ. ಇತ್ತೀಚಿಗೆ ನಡೆದ ಘಟನೆ ಸಂಬಂಧಿಸಿ ನಿನ್ನೆ ಮನೆಯಲ್ಲಿ ಮಾತುಕತೆ ನಡೆದಿದೆ. ನವೀನ್ ಸ್ಪಂದನಾರವರರನ್ನು ಮನೆಗೆ ಹತ್ತಿಸಿಕೊಳ್ಳಲು ನಿರಾಕರಿಸಿದರಿಂದ ಸೇಡು ತೀರಿಸಿಕೊಳ್ಳಲು ಅಪಹರಣ ಮಾಡಲಾಗಿದೆ ಎಂದು ಹೇಳಿದ್ದಾರೆ.

Leave A Reply

Your email address will not be published.