ತುಳಸಿ ಎಲೆಯ ಆರೋಗ್ಯಕರ ಮಾಹಿತಿ ನಿಮಗಾಗಿ

ತುಳಸಿ ಭಾರತೀಯ ಪುರಾಣ ಮತ್ತು ಹಿಂದೂ ತತ್ತ್ವಶಾಸ್ತ್ರದಲ್ಲಿ ಗಮನಾರ್ಹವಾದ ಗಿಡಮೂಲಿಕೆಯಾಗಿದೆ. ತುಳಸಿ ಸಸ್ಯವು ಭಕ್ತರಿಗೆ ದೇವರಿಗೆ ಹತ್ತಿರವಾಗಲು ಅಥವಾ ಮೋಕ್ಷವನ್ನು ಪಡೆಯಲು ಸಹಾಯ ಮಾಡುತ್ತದೆ. ಮನೆಯಲ್ಲಿ ತುಳಸಿ ಸಸ್ಯದ ಉಪಸ್ಥಿತಿಯು ನಕಾರಾತ್ಮಕ ಶಕ್ತಿಗಳನ್ನು ನಿರ್ಮೂಲನೆ ಮಾಡಲು ಅಥವಾ ದುಷ್ಟಶಕ್ತಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಅನೇಕ ಜನರು ನಂಬಿದ್ದಾರೆ. ತುಳಸಿ ಸಸ್ಯವು ಅನೇಕ ರೋಗಗಳನ್ನು ಗುಣಪಡಿಸುವ ಔಷಧೀಯ ಗುಣಗಳನ್ನು ಹೊಂದಿದೆ. ಇದರ ಔಷಧೀಯ ಗುಣಗಳು ದೇಹಕ್ಕೆ ಮಾತ್ರವಲ್ಲದೆ ಚರ್ಮಕ್ಕೂ ಪ್ರಯೋಜನಕಾರಿಯಾಗಿದೆ.

ಮೊಡವೆ ಸಮಸ್ಯೆ:- ಸಾಮಾನ್ಯವಾಗಿ ಹೆಣ್ಣು ಮಕ್ಕಳಲ್ಲಿ ಮೊಡವೆ ಸಮಸ್ಯೆಗಳು ಆಗಾಗ್ಗೆ ಕಾಣಿಸುತ್ತದೆ. ಇದಕ್ಕಾಗಿ ಮಾರುಕಟ್ಟೆಯಿಂದ ಕೆಮಿಕಲ್ ಯುಕ್ತ ಕ್ರೀಮ್ ಬಳಸುತ್ತಾರೆ. ಇದರಿಂದ ಹಾನಿಯೇ ಹೆಚ್ಚು ತುಳಸಿ ಮತ್ತು ಬೇವಿನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ತೊಳೆದ ನಂತರ ರಾತ್ರಿಯಿಡೀ ನೆನೆಸಿ. ಬೆಳಿಗ್ಗೆ ಅವುಗಳನ್ನು ಪುಡಿಮಾಡಿ ಪೇಸ್ಟ್ ಮಾಡಿ. ಪೇಸ್ಟ್‌ಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಮತ್ತು ಮಿಶ್ರಣವನ್ನು ಮುಖದ ಮೇಲೆ ಹಚ್ಚಿರಿ. ಇದನ್ನು 15 ನಿಮಿಷಗಳ ಕಾಲ ಬಿಟ್ಟು ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಪ್ರತಿ ದಿನ ಬೆಳಗ್ಗೆ ಸ್ವಚ್ಛವಾದ ಮುಖಕ್ಕೆ ಹಚ್ಚಿಕೊಳ್ಳಿ. ಏಳು ದಿನಗಳಲ್ಲಿ ಮೊಡವೆಗಳ ಸಮಸ್ಯೆ ಕಡಿಮೆಯಾಗುತ್ತದೆ.

ಮುಖದ ಹೊಳಪಿಗಾಗಿ:- ಸಾಮನ್ಯವಾಗಿ ಎಲ್ಲರೂ ತಮ್ಮ ಮುಖ ಹೊಳಪಗಿರಬೇಕೆಂದು ಬಯಸುತ್ತಾರೆ. ಇದಕ್ಕೆ ಮನೆಯಲ್ಲೇ ಸಿಂಪಲ್ ಆದ ಮದ್ದನ್ನು ತಯಾರಿಸಬಹುದು. ತುಳಸಿ ಎಲೆಗಳನ್ನು ರುಬ್ಬಿ ಪೇಸ್ಟ್ ತಯಾರಿಸಿ. ಇದು ಕನಿಷ್ಠ ಒಂದು ಚಮಚ ಇರಬೇಕು. ಇದಕ್ಕೆ ಒಂದು ಚಮಚ ಒರಟಾಗಿ ರುಬ್ಬಿದ ಓಟ್ಸ್, ಒಂದು ಚಿಟಿಕೆ ಅರಿಶಿನ ಸೇರಿಸಿ ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಮುಖದ ಮೇಲೆ ಹಚ್ಚಿರಿ, ಸುಮಾರು 2-3 ನಿಮಿಷಗಳ ಕಾಲ ಅದನ್ನು ಸ್ಕೃಬ್ ಮಾಡಿ, ನಂತರ ಅದನ್ನು 15 ನಿಮಿಷಗಳ ಕಾಲ ಬಿಡಿ. ವಾರದಲ್ಲಿ ಮೂರು ಬಾರಿ ಈ ರೀತಿ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.

​ಕಪ್ಪು ಕಲೆ:- ತುಳಸಿ ಪೇಸ್ಟ್ ಮತ್ತು ಕಿತ್ತಳೆ ಸಿಪ್ಪೆ ಪುಡಿಯನ್ನು ಒಂದು ಬಟ್ಟಲಿನಲ್ಲಿ ಅಗತ್ಯವಿರುವಂತೆ ಮಿಶ್ರಣ ಮಾಡಿ. ಇದಕ್ಕೆ ಒಂದು ಚಮಚ ರೋಸ್ ವಾಟರ್, ಒಂದು ಚಮಚ ನಿಂಬೆ ರಸ, ಒಂದು ಚಿಟಿಕೆ ಅರಿಶಿನ ಪುಡಿಯನ್ನು ಸೇರಿಸಿ. ಈ ಮಿಶ್ರಣವನ್ನು ಕಪ್ಪು ಕಲೆಗಳಿರುವ ಜಾಗಕ್ಕೆ ಹಚ್ಚಿರಿ. ಇದನ್ನು ಮುಖದ ಮೇಲೆ ಮತ್ತು ದೇಹದ ಇತರ ಭಾಗಗಳಿಗೆ ಹಚ್ಚಬಹುದು.
ಇವುಗಳ ನಿರಂತರ ಬಳಕೆಯಿಂದ ಮುಖದಲ್ಲಿನ ಕಪ್ಪು ಕಲೆಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ ಮತ್ತು ನಿಮ್ಮ ಚರ್ಮ ಕಾಂತಿಯುತವಾಗುತ್ತದೆ.

ಟೋನರ್ ಮಾಡಿಕೊಳ್ಳಿ:- ನಿಮ್ಮ ಚರ್ಮವನ್ನು ಆರೋಗ್ಯವಾಗಿಡಲು ತುಳಸಿ ಟೋನರ್ ಅನ್ನು ಬಳಸಬಹುದು. ಇದನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ತೊಳೆದ ತುಳಸಿ ಎಲೆಗಳನ್ನು ಹಾಕಿ. ನೀರು ಕುದಿಯಲು ಬಂದ ನಂತರ, ಅದನ್ನು ಸುಮಾರು 5 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಕುದಿಯಲು ಬಿಡಿ. ತುಳಸಿ ನೀರನ್ನು ತಣ್ಣಗಾಗಲು ಬಿಡಿ ನಂತರ ಅದನ್ನು ಫಿಲ್ಟರ್ ಮಾಡಿ. ಸಿದ್ಧಪಡಿಸಿದ ಟೋನರನ್ನು ಸ್ಪ್ರೇ ಬಾಟಲಿಗೆ ಸುರಿಯಿರಿ. ಇದನ್ನು ಪ್ರತಿದಿನ ಬಳಸಬಹುದು.

Leave A Reply

Your email address will not be published.