ಇಲ್ನೋಡಿ, 2023 ರಲ್ಲಿ ದುಬಾರಿ ಆಗಲಿದೆ ಈ ಎಲ್ಲಾ ಕಾರುಗಳು | ಯಾವುದೆಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ!!!

ಭಾರತದ ಮಾರುಕಟ್ಟೆಯಲ್ಲಿ ಕಾರುಗಳಿಗೇನು ಭರವಿಲ್ಲ. ಹೊಸ ಹೊಸ ಸ್ಟೈಲಿಶ್ ಲುಕ್’ನೊಂದಿಗೆ ಫೀಚರ್ ಅನ್ನು ಒಳಗೊಂಡ ಕಾರುಗಳು ಬಿಡುಗಡೆಯಾಗುತ್ತಲೇ ಇದೆ. ಇನ್ನೇನೂ ಕೆಲವೇ ದಿನಗಳಲ್ಲಿ ಹೊಸ ವರ್ಷ ಪ್ರಾರಂಭವಾಗಲಿದ್ದೂ, ಕಾರು ಖರೀದಿಸುವ ನೀರಿಕ್ಷೆಯಲ್ಲಿರುವವರಿಗೆ ಪ್ರಮುಖ ಕಾರು ಕಂಪನಿಗಳು ಬಿಗ್ ನ್ಯೂಸ್ ಒಂದನ್ನು ನೀಡಿದೆ. 2023 ಬರುತ್ತಿದ್ದಂತೆ ಭಾರತದಲ್ಲಿ ವಾಹನಗಳ ಬೆಲೆ ದುಬಾರಿಯಾಗಲಿವೆ ಎಂದು ವಾಹನ ತಯಾರಕ ಕಂಪನಿ ತಿಳಿಸಿದೆ.

ಹೊಸ ಮಾನದಂಡಗಳ ಪ್ರಕಾರ, ವಾಹನ ಚಲಾಯಿಸುವಾಗ ರಿಯಲ್ ಟೈಮ್ ಎಮಿಷನ್ ಮಟ್ಟವನ್ನು ಮೇಲ್ವಿಚಾರಣೆ ಮಾಡಲು ವಾಹನಗಳು ಆನ್‌ಬೋರ್ಡ್ ಅಟೋ-ಎಮಿಷನ್ ಡಿಟೆಕ್ಟರ್ ಸಾಧನವನ್ನು ಹೊಂದಿರಬೇಕು. ಹಾಗಾಗಿ ಭಾರತದ ಪ್ರಮುಖ ವಾಹನ ತಯಾರಕರು ಮುಂದಿನ ತಿಂಗಳಿನಿಂದ ವಿವಿಧ ಮಾದರಿಗಳ ಕಾರುಗಳ ಬೆಲೆ ಏರಿಸುವುದಾಗಿ ಘೋಷಿಸಿದ್ದಾರೆ. ಇದು ಏಪ್ರಿಲ್ 2023 ರಿಂದ ಜಾರಿಗೆ ಬರಲಿದೆ.

ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟಾರ್ಸ್, ಮರ್ಸಿಡಿಸ್-ಬೆನ್ಸ್, ಆಡಿ, ರೆನಾಲ್ಡ್, ಕಿಯಾ ಇಂಡಿಯಾ ಮತ್ತು ಎಂಜಿ ಮೋಟಾರ್ ಬೆಲೆ ಏರಿಸಲಿವೆ. ಈ ಸಂಸ್ಥೆಗಳು ಮುಂದಿನ ತಿಂಗಳಿನಿಂದ ಬೆಲೆಗಳನ್ನು ಹೆಚ್ಚಿಸುವ ಬಗ್ಗೆ ಘೋಷಣೆಗಳನ್ನು ಮಾಡಿದ್ದಾರೆ. ‘ಕಚ್ಚಾ ವಸ್ತುಗಳ ಆಮದು ವೆಚ್ಚದಲ್ಲಿ ಸ್ಥಿರವಾಗಿ ಏರಿಕೆ ಆಗುತ್ತಿದ್ದು ಮುಂಬರುವ ದಿನಗಳಲ್ಲಿ ಬೆಲೆ ಏರಿಸುವ ಬಗ್ಗೆ ನಾವು ನಿರ್ಧರಿಸಿದ್ದೇವೆ ಹಾಗೂ ನಮ್ಮ ಉತ್ಪನ್ನಗಳ ಬೆಲೆಯನ್ನು ಜನವರಿ 23ರಿಂದ ಪರಿಷ್ಕರಣೆ ಮಾಡಬೇಕಾಗಿದೆ’ ಎಂದು ಹೋಂಡಾ ಕಾರ್ಸ್ ಇಂಡಿಯಾದ ಉಪಾಧ್ಯಕ್ಷ ಕುನಾಲ್ ಬೆಹ್ನಾ ತಿಳಿಸಿದ್ದಾರೆ.

ಬೆಲೆ ಏರಿಕೆ ಮಾಡಲಿರುವ ಕಂಪನಿಗಳ ಮಾಹಿತಿ ಇಲ್ಲಿದೆ.
●ಜಪಾನಿನ ಕಾರು ತಯಾರಕ ಕಂಪನಿಯಾದ ಹೋಂಡಾ ತನ್ನ ವಾಹನಗಳ ಬೆಲೆಯನ್ನು ರೂ. 30,000 ವರೆಗೆ ಹೆಚ್ಚಿಸಬಹುದು.
●ಹ್ಯುಂಡೈ ಇಂಡಿಯಾ: ಬೆಲೆ ಏರಿಕೆಯು ಬೇರೆ ಬೇರೆ ಮಾದರಿಗಳಲ್ಲಿ ಬೇರೆ ಬೇರೆ ರೀತಿ ಇರಲಿದೆ. ಇದು ಜನವರಿ 2023 ರಿಂದ ಜಾರಿಗೆ ಬರಲಿದೆ.
●ಜೀಪ್ ಇಂಡಿಯಾ: ಬೇರೆ ಬೇರೆ ಮಾಡೆಲ್‌ನ ವಾಹನಗಳಿಗೆ ಬೇರೆ ಬೇರೆ ರೀತಿ ಬೆಲೆ ಏರಿಕೆ ಆಗಲಿದೆ. ಜೀಪ್ SUV ಗಳು 2-4% ರಷ್ಟು ಬೆಲೆ ಏರಿಕೆಯನ್ನು ಕಾಣಲಿವೆ.
●ಮಾರುತಿ ಸುಜುಕಿ: ನಿರಂತರವಾಗಿ ಏರುತ್ತಿರುವ ವೆಚ್ಚ ಮತ್ತು ಇತ್ತೀಚಿನ ಹೊಸ ಅವಶ್ಯಕತೆಗಳಿಂದ ಬೆಲೆ ಏರಿಕೆಯ ನಿರ್ಧಾರವನ್ನು ಪ್ರಕಟಿಸಲಾಗಿದೆ ಎಂದು ಕಂಪನಿ ಹೇಳುತ್ತಿದೆ.
●ಟಾಟಾ ಮೋಟಾರ್ಸ್: ಟಾಟಾ ಮೋಟರ್ಸ್‌ ICE ಮತ್ತು EV ಗಳ ಮಾದರಿಗಳಿಗೆ ಬೆಲೆ ಏರಿಕೆಯಾಗಲಿದೆ. ಟಾಟಾ ಕಂಪೆನಿ, ಎಷ್ಟು ಬೆಲೆ ಏರಿಕೆ ಆಗಲಿದೆ ಎನ್ನುವುದನ್ನು ಇನ್ನೂ ಬಹಿರಂಗಗೊಳಿಸಿಲ್ಲ.
●ಕಿಯಾ ಇಂಡಿಯಾ: ಜನವರಿ 2023 ರಿಂದ ಕಿಯಾ ವಾಹನಗಳು ರೂ. 50,000 ವರೆಗೆ ದುಬಾರಿಯಾಗಲಿವೆ.

●ಮರ್ಸಿಡೀಸ್ ಬೆಂಜ್: ಈ ಐಷಾರಾಮಿ ಕಾರು ಕಂಪನಿ, ತನ್ನ ಕಾರುಗಳ ಬೆಲೆಗಳನ್ನು 5% ವರೆಗೆ ಹೆಚ್ಚಿಸಲಿದೆ.
●ಎಂ.ಜಿ ಮೋಟಾರ್: ಕಂಪನಿಯು ತನ್ನ SUV ಬೆಲೆಗಳನ್ನು ಬರೋಬ್ಬರಿ ರೂ. 90,000 ವರೆಗೆ ಹೆಚ್ಚಿಸಲಿದೆ.
●ಆಡಿ ಇಂಡಿಯಾ: ಆಡಿ ಕಂಪನಿ, ಜನವರಿ 2023 ರಿಂದ ಕಾರಿನ ಬೆಲೆಗಳನ್ನು ಶೇಕಡಾ 1.7 ರಷ್ಟು ಹೆಚ್ಚಿಸಲಿದೆ ಎಂಬ ಮಾಹಿತಿ ಲಭಿಸಿದೆ.

Leave A Reply

Your email address will not be published.