ಹಿಂದೂ ಸಂಘಟನೆಗಳು ಆಯ್ತು, ಈಗ ಮುಸ್ಲಿಂ ಉಲೇಮಾ ಮಂಡಳಿ ಗುರುಗಳಿಂದಲೇ ‘ ಪಠಾಣ್ ‘ ಸಿನಿಮಾ ಮೇಲೆ ನಿಷೇಧಕ್ಕೆ ಒತ್ತಾಯ !
ಮುಂದಿನ ತಿಂಗಳು ತೆರೆ ಕಾಣಲಿರುವ “ಪಠಾಣ್’ ಸಿನಿಮಾದಲ್ಲಿ ಹಿಂದುಗಳ ಪವಿತ್ರ ಬಣ್ಣ ಕೇಸರಿಗೆ ಅವಮಾನವಾಗಿದೆ ಮತ್ತು ಚಿತ್ರವು ನಾವು ಜಿಹಾದ್ ಅನ್ನು ಪ್ರೇರೇಪಿಸುತ್ತದೆ ಎಂದು ಹಿಂದೂಪರ ಸಂಘಟನೆಗಳು ಚಿತ್ರದ ಬಾಯ್ ಕಾಟ್ ಗೆ ತೊಡಗಿದ್ದು ಹಳೆಯ ಸುದ್ದಿ. ಇದೀಗ ಮುಸ್ಲಿಂ ಸಂಘಟನೆಗಳು ಕೂಡ ಪಠಾಣ್ ಚಿತ್ರದ ವಿರುದ್ಧ ದನಿ ಎತ್ತಿವೆ. ಮುಸ್ಲಿಮರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರಲಾಗಿದೆ, ಹೀಗಾಗಿ ಅದರ ಮೇಲೆ ನಿಷೇಧ ಹೇರಬೇಕು ಎಂದು ಮಧ್ಯಪ್ರದೇಶ ಉಲೇಮಾ ಮಂಡಳಿ ಒತ್ತಾಯಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಂಡಳಿ ಅಧ್ಯಕ್ಷ ಸಯ್ಯದ್ ಅನಸ್ ಅಲಿ, ಅದರಲ್ಲಿ ಅಶ್ಲೀಲತೆ, ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತರುವ ಅಂಶಗಳು ಇವೆ ಎಂದು ತಮಗೆ ಫೋನ್ ಮತ್ತು ಖುದ್ದಾಗಿ ಹಲವು ದೂರುಗಳು ಸಲ್ಲಿಕೆಯಾಗಿವೆ ಎಂದಿದ್ದಾರೆ.
ಇಂತಹ ಚಿತ್ರಕ್ಕೆ ಹೀಗಾಗಿ, ಸಿನಿಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಅವರು ಒತ್ತಾಯಿಸಿದ್ದಾರೆ. ಸಾರ್ವಜನಿಕರಿಗೆ, ಸರ್ಕಾರದವರಿಗೆ, ಯೋಧರಿಗೆ ಸಿನಿಮಾ ವೀಕ್ಷಣೆ ಮಾಡದಂತೆ ಮನವಿ ಮಾಡುವುದಾಗಿಯೂ ಉಲೇಮಾ ಮಂಡಳಿ ಮುಖಂಡ ಅಲಿ ಒತ್ತಾಯಿಸಿದ್ದಾರೆ.
ಕೋರ್ಟ್‌ಗೆ ದೂರು:
“ಪಠಾಣ್’ ಸಿನಿಮಾದ “ಬೇಷರಮ್ ರಂಗ್’ ಹಾಡು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಆರೋಪಿಸಿ, ನಟ ಶಾರುಖ್ ಖಾನ್ ಮತ್ತು ನಟಿ ದೀಪಿಕಾ ಪಡುಕೋಣೆ ವಿರುದ್ಧ ಐಎಫ್ಆರ್ ದಾಖಲಿಸಲು ಅನುಮತೆ ಕೋರಿ ಬಿಹಾರದ ಮುಜಾಫರ್‌ಪುರ ಜಿಲ್ಲಾ ನ್ಯಾಯಾಲಯಲ್ಲಿ ಈಗಾಗಲೇ ದೂರು ಅರ್ಜಿ ದಾಖಲಾಗಿದೆ. ಜ.3 ರಂದು ವಿಚಾರಣೆಗೆ ಬರಲಿದೆ. ಒಂದು ಕಡೆಯಿಂದ ಹಿಂದೂ ಸಂಘಟನೆಗಳ ವಿರೋಧ ಮತ್ತೊಂದು ಕಡೆ ಮುಸ್ಲಿಂ ಧರ್ಮ ಗುರುಗಳ ಅಸಮಾಧಾನ ಇವುಗಳ ಮಧ್ಯೆ ಪಠಾಣ್ ಚಿತ್ರವು ಹೇಗೆ ಎಲ್ಲ ವಿರೋಧಗಳನ್ನು ದಾಟಿ ಮುನ್ನಡೆಯಲ್ಲಿದೆ, ಎನ್ನುವುದನ್ನು ಕಾದು ನೋಡಬೇಕಾಗಿದೆ.