ಸೆಕ್ಸ್ ಮಾಡುವಾಗ ಪರಿಮಳಯುಕ್ತ ಕಾಂಡೋಮ್ ಬಳಸಬಾರದು ಯಾಕೆ?
ಸೆಕ್ಸ್ ಮಾಡುವಾಗ ಹೆಚ್ಚಿನವರು ಈ ಸುವಾಸನೆ ಭರಿತ ಕಾಂಡೋಂ ಬಳಸೋದನ್ನು ಹೆಚ್ಚು ಇಷ್ಟ ಪಡುತ್ತಾರೆ. ಆದರೆ ಅದು ಸೇಫಾ ಅಲ್ವಾ ಅನ್ನೋದು ಇಲ್ಲಿ ಬರೋ ಮುಖ್ಯ ಪ್ರಶ್ನೆ. ಈಗಂತಲೂ ಈ ಕಾಂಡೋಂಗಳು ಹೆಚ್ಚಿನ ಪರಿಮಳದಿಂದ ಕೂಡಿದ್ದು ಹಲವಾರು ಫ್ಲೇವರ್‌ನಲ್ಲಿ ದೊರಕುತ್ತದೆ. ಅವುಗಳಲ್ಲಿ ಚಾಕೊಲೇಟ್, ಬಬಲ್‌ಗಂ. ಸ್ಟ್ರಾಬೆರಿ, ಕಾಲಾ ಖಟ್ಟಾ ಹೀಗೆ ಅವರವರ ರುಚಿಗೆ ತಕ್ಕ ಹಾಗೆ ಅವರವರ ಇಷ್ಟದ ಕಾಂಡೋಂ ದೊರೆಯುತ್ತದೆ.
ಸುವಾಸನೆಯ ಕಾಂಡೋಮ್‌ಗಳು ಯೋನಿಗೆ ಸಮಸ್ಯೆ ಉಂಟು ಮಾಡಬಹುದು. ಏಕೆಂದರೆ ಅದರಲ್ಲಿರುವ ಸಕ್ಕರೆಯ ಕಾರಣದಿಂದಾಗಿ. ಸಕ್ಕರೆ ಅಂಶ ಹೆಚ್ಚಿದ್ದರೆ ಯೋನಿಯ pH ಹೆಚ್ಚಿಸುತ್ತದೆ. ಇದರಿಂದ ಯೀಸ್ಟ್ ಸೋಂಕು ಉಂಟಾಗುತ್ತದೆ. ಕಾಂಡೋಮ್‌ನ ರಾಸಾಯನಿಕ ಅಂಶ ಹೆಚ್ಚಾದಂತೆ ಯೋನಿ ಕಿರಿಕಿರಿ ಅಥವಾ ತೀವ್ರವಾದ ಯೀಸ್ಟ್ ಸೋಂಕಿನ ಸಾಧ್ಯತೆಯು ಹೆಚ್ಚಾಗುತ್ತದೆ.
ಈ ಸುವಾಸನೆ ಹೊಂದಿರುವ ಕಾಂಡೋಮ್‌ಗಳನ್ನು ಹೆಚ್ಚಿನ ತೃಪ್ತಿ ಹಾಗೂ ಸಂತೋಷಕ್ಕಾಗಿ ಉಪಯೋಗಿಸಲಾಗುತ್ತದೆ. ವಿಶೇಷವಾಗಿ ಮೌಖಿಕ ಸಂಭೋಗಕ್ಕಾಗಿ ಇಂತಹ ಸುವಾಸನೆ ಭರಿತ ಕಾಂಡೋಂನ್ನು ತಯಾರಿ ಮಾಡಲಾಗುತ್ತದೆ. ಫ್ಲೇವರ್ ಹೆಚ್ಚಾಗಿ ಕೊಡಲು ಕಾರಣವೇನೆಂದರೆ ಈ ಕಾಂಡೋಂಗಳ ಕೆಟ್ಟ ಲ್ಯಾಟೆಕ್ಸ್ ರಬ್ಬರ್ ವಾಸನೆಯನ್ನು ಕಡಿಮೆಮಾಡಲು. ಮೌಖಿಕ ಸಂಭೋಗದ ಸಮಯದಲ್ಲಿ ಹೆಚ್ಚಿದ ತೃಪ್ತಿ ಮತ್ತು ಸಂತೋಷದ ಕಾರಣಕ್ಕಾಗಿ ಈ ಸುವಾಸನೆ ಭರಿತ ಕಾಂಡೋಮ್‌ನ್ನು ಪರಿಚಯಿಸಲಾಯಿತು.
ಲೈಂಗಿಕ ಸಂಪರ್ಕಕ್ಕೆ ಬಂದಾಗ ಗಂಡು ಹೆಣ್ಣಿನ ಯೋನಿ ಮತ್ತು ಶಿಶ್ನದ ಸ್ರವಿಸುವಿಕೆಯಿಂದ ಬಾಯಿಯ ಸೋಂಕು ಉಂಟಾಗಬಹುದು. ಹಾಗಾಗಿ ಮೌಖಿಕ ಸಂಭೋಗದ ಸಮಯದಲ್ಲಿ ಹಾಗೂ ಯೋನಿ ಸಂಭೋಗದ ಸಮಯದಲ್ಲಿ ಕಾಂಡೋಂ ಧರಿಸೋದು ಮುಖ್ಯ. ಇಲ್ಲದಿದ್ದರೆ ಪ್ರತಿರಕ್ಷಣಾ ಸಿಂಡ್ರೋಮ್( AIDS), ಗೊನೊರಿಯಾ, ಹರ್ಪಿಸ್, ಸಿಫಿಲಿಸ್ ಮತ್ತು ಕ್ಯಾಂಡಿಡಿಯಾಸಿಸ್‌ಗೆ ಕಾರಣವಾಗುವ ಸಂಭವ ಹೆಚ್ಚು.
ಗರ್ಭನಿರೋಧಕವನ್ನು ಬಳಸುವ ಮತ್ತೊಂದು ಪ್ರಮುಖ ಕಾರಣವೇ ಲೈಂಗಿಕವಾಗಿ ಹರಡುವ ರೋಗಗಳ ಹರಡುವಿಕೆಯನ್ನು ತಡೆಗಟ್ಟುವುದು. ಸರಿಯಾಗಿ ಬಳಸಿದರೆ, ಎಲ್ಲಾ ರೀತಿಯ ಕಾಂಡೋಮ್‌ಗಳು ಗಂಡು ಅಥವಾ ಹೆಣ್ಣಿಗೆ ಸರಿಸುಮಾರು 96% ರಿಂದ 98% ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.