BBK9 : ದೊಡ್ಮನೆಯಿಂದ ಹೊರಗೆ ಬಂದ್ರು ಗೌಡ್ರು!!!

ಬಿಗ್​ ಬಾಸ್​ ಸೀಸನ್​ 9 ಅಂತೂ ಕೊನೆಗಳಿಗೆ ಹತ್ತಿರ ಬರ್ತಾ ಇದೆ. ವೀಕ್ಷಕರು ಕೂಡ ಸಖತ್​ ಕಾತುರತೆಯಿಂದ ಯಾರು ಗೆಲ್ಬೋದು ಅಂರ ತುದಿಗಾಲಿನಲ್ಲಿ ಕಾಯುತ್ತಾ ಇದ್ದಾರೆ. ಇದರ ನಡುವೆ ಎಲಿಮಿನೇಷನ್​ ಅಂತ ಬಂದಾಗ ಕೂಡ ಅಷ್ಟೇ ಹಾಟ್​ ಆಗಿರುತ್ತೆ ಮನೆ.

ಎಸ್​, ಹಿಂದಿನ ವಾರ ಪ್ರಶಾಂತ್​ ಸಂಬರಗಿ ಮನೆಯಿಂದ ಹೊರಗೆ ಹೋಗಿರುವುದು ಎಲ್ರಿಗೂ ಶಾಕ್​ ನೀಡಿತ್ತು. ಅದೇ ರೀತಿಯಾಗಿ ಈ ವಾರ ಮನೆಯಿಂದ ಹೊರಗೆ ಹೋಗ್ತಾ ಇರೋ ಸ್ಪರ್ಧಿ ಅನುಪಮಾ ಗೌಡ.

ಎಸ್​, ಪ್ರವೀಣರಾಗಿ ಬಂದಿದ್ದ 9 ರಲ್ಲಿ ಅನುಪಮಾ ಗೌಡ ಕೂಡ ಒಬ್ಬರು. ಮೊದಲ ಸೀಸನ್​ಕಿಂತ ಈ ಸೀಸನ್​ನಲ್ಲಿ ತುಂಬಾ ಬದಲಾವಣೆ ವ್ಯಕ್ತಿತ್ವವಾಗಿ ಕಾಣಿಸಿಕೊಳ್ಳುವುದರ ಜೊತೆಗೆ ಆಟವಾಡಿದ್ದರು. ಮನೆಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚಾದ ಅನುಪಮಾ ಈ ವಾರ ಎಲಿಮಿನೇಟ್ ಆಗಿದ್ದಾರೆ. ಆದರೂ 13 ವಾರಗಳ ಕಾಲ ಬಿಗ್​ ಬಾಸ್​ ಮನೆಯಲ್ಲಿ ಇದ್ದರು, ಗ್ರೇಟ್​ ಬಿಡಿ. ಈ ಎಲಿಮಿನೇಷನ್​ ಕೂಡ ಸಖತ್​ ಶಾಕ್​ ನೀಡಿದೆ ಅಂತ ಹೇಳಿದ್ರೂ ತಪ್ಪಾಗಲಾರದು.

Leave A Reply

Your email address will not be published.