ಅಬ್ಬಾ ಈ ಟೀ ಬೆಲೆ ಕೇಳಿದರೆ ನೀವು ಖಂಡಿತ ಹೌಹಾರ್ತೀರಾ…ಚಿನ್ನದ ಟೀ ಒಮ್ಮೆ ಕುಡಿಯೋ ಆಸೆ ಇದ್ರೆ ಟ್ರೈ ಮಾಡಿ

ಟೀ ಅಂದರೆ ಎಲ್ಲರಿಗೂ ಇಷ್ಟ ಬಿಡಿ. ಇನ್ನು ಸಹಜವಾಗಿ ಚಳಿಗಾಲದಲ್ಲಿ ಟೀ ನಮ್ಮನ್ನು ಆಕರ್ಷಿಸುತ್ತದೆ. ಅದಲ್ಲದೆ ಚಹಾ ಪ್ರಿಯರು ಟೀಯನ್ನು 12 ತಿಂಗಳ ಕಾಲ ಸೇವಿಸುತ್ತಾರೆ. ಚಳಿ ಸಮಯದಲ್ಲಿ ಬೆಚ್ಚಗೆ ಒಂದು ಟೀ ಕುಡಿದಾಗ ಆಗುವ ಖುಷಿಯೇ ಬೇರೆ. ಆದರೆ ಮನೋಹರಿ ಗೋಲ್ಡ್ ಚಹಾ ಬಗ್ಗೆ ನೀವು ಕೇಳಿದ್ದೀರಾ ಈ ಚಹಾವು ಹಲವಾರು ಆರೋಗ್ಯ ಪ್ರಯೋಜನಗಳ ವಿಭಿನ್ನ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಇದು ಪ್ರಕಾಶಮಾನವಾದ ಹಳದಿ ಬಣ್ಣವನ್ನು ಹೊಂದಿದೆ ಮತ್ತು ಹಿತವಾದ ರುಚಿಯನ್ನು ನೀಡುತ್ತದೆಯಂತೆ.

ಸದ್ಯ ಮೊನೊಹರಿ ಟೀ ಎಸ್ಟೇಟ್‌ನಲ್ಲಿ ಬೆಳೆದ ಅಸ್ಸಾಂನ ಮನೋಹರಿ ಗೋಲ್ಡ್ ಎಂಬ ಅರಾರೆ ತಳಿಯ ಚಹಾವು ಪ್ರತಿ ಕಿಲೋಗ್ರಾಂಗೆ 1.15 ಲಕ್ಷ ರೂ. ಗೆ ಮಾರಾಟವಾಗುತ್ತಿದೆ ಎಂದು ಸುದ್ದಿ ಆಗಿದೆ.

ಹೌದು ಮೊನೊಹರಿ ಟೀಯ ವ್ಯವಸ್ಥಾಪಕ ನಿರ್ದೇಶಕ ರಾಜನ್ ಲೋಹಿಯಾ ಪ್ರಕಾರ ಹಾಟ್ ಫೇವರಿಟ್ ಆಗಿ ಹೊರಹೊಮ್ಮಿರುವ ಮನೋಹರಿ ಗೋಲ್ಡ್ ಚಹಾ(Manohari Gold Tea)ದ ದಾಖಲೆಯ ಮಾರಾಟವಾಗಿದೆ ಎಂದು ತಿಳಿಸಿದ್ದಾರೆ. ಅದಲ್ಲದೆ ಈ ಪ್ರೀಮಿಯಂ ಅಸ್ಸಾಂ ಚಹಾವು ಹೈದರಾಬಾದ್‌ನ ನೀಲೋಫರ್ ಕೆಫೆಯಲ್ಲಿ ಲಭ್ಯವಿದೆ ಎಂದಿದ್ದಾರೆ.
“ಕಳೆದ ಐದು ವರ್ಷಗಳಿಂದ, ನಾವು ಮನೋಹರಿ ಗೋಲ್ಡ್ ಅನ್ನು ತಯಾರಿಸುತ್ತಿದ್ದೇವೆ. ಚಹಾದ ಬೇಡಿಕೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಈ ವರ್ಷ 1 ಕೆಜಿ ಉತ್ಪನ್ನವನ್ನು 1.15 ಲಕ್ಷಕ್ಕೆ ಮಾರಾಟ ಮಾಡಿದ್ದೇವೆ. ಅಸ್ಸಾಂ ಮತ್ತು ರಾಜ್ಯದ ಚಹಾ ಉದ್ಯಮಕ್ಕೆ ಇದು ಒಳ್ಳೆಯ ಸುದ್ದಿ. ಕೋಲ್ಕತ್ತಾ ಮೂಲದ ಖಾಸಗಿ ಪೋರ್ಟಲ್ ಮೂಲಕ ಚಹಾವನ್ನು ಮಾರಾಟ ಮಾಡಲಾಗಿದ್ದು, ಸದ್ಯ ಹೈದರಾಬಾದ್ ಮೂಲದ ನೀಲೋಫರ್ ಕೆಫೆ ಖರೀದಿಸಿದೆ ಎಂದು ತಿಳಿಸಿದ್ದಾರೆ .

ಕಳೆದ ಐದು ವರ್ಷಗಳಿಂದ ತನ್ನ ಸ್ಥಿತಿಯನ್ನು ಹಾಗೆಯೇ ಉಳಿಸಿಕೊಂಡು, ಅಪ್ಪರ್ ಅಸ್ಸಾಂನಲ್ಲಿರುವ ಎಸ್ಟೇಟ್ ಡಿಸೆಂಬರ್ 16 ರಂದು 1 ಲಕ್ಷ ರೂಪಾಯಿಗಳಿಗೆ ಚಹಾವನ್ನು ಮಾರಾಟ ಮಾಡಿತು. ಇದು ಭಾರತೀಯ ಚಹಾ ಹರಾಜಿನಲ್ಲಿ ಪಡೆದ ಅತ್ಯಧಿಕ ಬೆಲೆಯಾಗಿದೆ ಇದೊಂದು ವಿಶೇಷ ಸಂಗತಿ ಹೌದು .

ಡಿಸೆಂಬರ್ 2021 ರಂದು ಗುವಾಹಟಿ ಟೀ ಹರಾಜು ಕೇಂದ್ರದಲ್ಲಿ (GTAC) ಮನೋಹರಿ ಗೋಲ್ಡ್ ಟೀ ಪ್ರತಿ ಕಿಲೋಗ್ರಾಂಗೆ 99,999 ರೂ.ಗೆ ಮಾರಾಟವಾಯಿತು. ಮೊನೊಹರಿ ಟೀ ತನ್ನ ಪ್ರೀಮಿಯಂ ಉತ್ಪನ್ನವನ್ನು ಪ್ರತಿ ಕೆಜಿಗೆ 75,000 ರೂ.ಗೆ ದಾಖಲೆಯ ಬೆಲೆಗೆ ರಾಜ್ಯದಲ್ಲಿ ಎರಡು ಬಾರಿ ಮಾರಾಟ ಮಾಡಿತು.

2020 ರಲ್ಲಿ, ಡಿಕೋಮ್ ಟೀ ಎಸ್ಟೇಟ್ ತನ್ನ ಗೋಲ್ಡನ್ ಬಟರ್ಫ್ಲೈ ಟೀಯನ್ನು ಪ್ರತಿ ಕಿಲೋಗ್ರಾಂಗೆ 75,000 ರೂ.ಗೆ ಮಾರಾಟ ಮಾಡಿತು. ನಂತರ, ಅರುಣಾಚಲ ಪ್ರದೇಶದ ಪೂರ್ವ ಸಿಯಾಂಗ್‌ನಲ್ಲಿರುವ ದೋನಿ ಪೊಲೊ ಟೀ ಎಸ್ಟೇಟ್ ತಯಾರಿಸಿದ ವಿಶೇಷ ಚಹಾವು ಗುವಾಹಟಿ ಹರಾಜಿನಲ್ಲಿ ಅದೇ ಬೆಲೆಗೆ ಮಾರಾಟವಾಯ್ತು. 2018 ರಿಂದ ಸತತವಾಗಿ ಐದನೇ ಬಾರಿಗೆ ಇತಿಹಾಸವನ್ನು ಸೃಷ್ಟಿಸಿದಕ್ಕೆ ಕಂಪನಿ ಸಂತೋಷಗೊಂಡಿರುವ ವಿಚಾರವನ್ನು ಜನರೊಂದಿಗೆ ಹಂಚಿಕೊಂಡಿದ್ದಾರೆ.

Leave A Reply

Your email address will not be published.