ಪರ್ವತದಿಂದ 300 ಅಡಿ ಕೆಳಗೆ ಬಿದ್ದ ಕಾರು |ದಂಪತಿಗಳ ಜೀವ ಉಳಿಸಿದ್ದು ಮೊಬೈಲ್!

ಅದೃಷ್ಟ ಇದ್ರೆ ಯಾವ ಕಷ್ಟಕರ ಪರಿಸ್ಥಿತಿಯಿಂದಲೂ ಮಿಂದೇಳಿ ಬರಬಹುದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಹೌದು. ಇಲ್ಲೊಂದು ಕಡೆ ಕಾರು ಪರ್ವತದಿಂದ ಕೆಳಗೆ ಬಿದ್ದರೂ ಜೀವಂತವಾಗಿ ಉಳಿದಿದ್ದಾರೆ ಜನ. ಆದ್ರೆ ವಿಶೇಷ ಏನಂದ್ರೆ ಪ್ರಯಾಣಿಕರ ಜೀವ ಉಳಿಸಿದ್ದು, ಮೊಬೈಲ್ ಫೋನ್.

ಅಮೆರಿಕದ ಕ್ಯಾಲಿಫೋರ್ನಿಯಾದ ಏಂಜಲೀಸ್ ಫಾರೆಸ್ಟ್ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು, ಕಾರು ಪರ್ವತದಿಂದ 300 ಅಡಿ ಕೆಳಗೆ ಬಿದ್ದು, ಗುಡ್ಡದ ಮಧ್ಯೆ ಸಿಕ್ಕಿಹಾಕಿಕೊಂಡಿದೆ.

ಈ ವೇಳೆ ಐಫೋನ್‌ ೧೪ನಲ್ಲಿರುವ ಕ್ರ್ಯಾಶ್ ಡಿಕೆಕ್ಷನ್  ಸಹಾಯ ಮಾಡಿದೆ. ಇದನ್ನು ಸ್ಯಾಟಿಲೈಟ್ ಎಸ್‌ಒಎಸ್ ಎನ್ನುತ್ತಾರೆ. ಇದು  ಕಾರಿಗೆ ಅಪಘಾತವಾಗಿದ್ದನ್ನು ಪತ್ತೆ ಹಚ್ಚಿ, ತುರ್ತು ಸಂಖ್ಯೆಗೆ ಸಂದೇಶ ರವಾನಿಸುತ್ತದೆ. ಅದರಂತೆ ಈ ಅಪಘಾತ ಸಂದರ್ಭದಲ್ಲಿ ಕೂಡ ವಿಶಿಷ್ಟ ಸೌಲಭ್ಯ ಬಳಸಿ ಫೋನ್ ರಕ್ಷಣಾ ತಂಡವನ್ನು ತಲುಪಿದೆ.

ಈ ವೇಳೆ ಉಪಗ್ರಹ ವೈಶಿಷ್ಟ್ಯವು ಆಪಲ್ ರಿಲೇ ಸೆಂಟರ್‌ಗೆ ಸಂದೇಶ ಕಳಿಸಿದೆ. ನಂತರ ಕೌಂಟಿ ಶೆರಿಫ್‌ಗೆ ಮಾಹಿತಿ ಹೋಗಿದ್ದು, ದಂಪತಿಯನ್ನು ರಕ್ಷಿಸಲಾಗಿದೆ. ಮಾಂಟ್ರೋಸ್ ಸಂಶೋಧನೆ ಮತ್ತು ಪಾರುಗಾಣಿಕೆ ತಂಡ ಈ ವಿಷಯವನ್ನು ಹಂಚಿಕೊಂಡಿದ್ದು, ಮೊಬೈಲ್ ನಿಂದ ದಂಪತಿಯ ಜೀವ ಉಳಿಸಿದ್ದು ವಿಶೇಷವೇ ಸರಿ.

Leave A Reply

Your email address will not be published.