ಈತನೇ ನೋಡಿ ವಿಶ್ವದ ಅತ್ಯಂತ ಕುಳ್ಳಗಿನ ವ್ಯಕ್ತಿ | 2.2 ಅಡಿ ಎತ್ತರದ ಈತನಿಗೆ ವಿಶ್ವದ ಎತ್ತರದ ಕಟ್ಟಡ ಬುರ್ಜ್ ಖಾಲಿಫ್ ಏರುವ ಕನಸು !
ಇರಾನ್ ಮೂಲದ 20 ವರ್ಷದ ಅಫ್ರಿನ್ ಎಸ್ಮಾಯಿಲ್ ವಿಶ್ವದ ಅತ್ಯಂತ ಕುಳ್ಳ ವ್ಯಕ್ತಿ ಎಂದು ದಾಖಲೆ ಸೃಷ್ಟಿಸಿದ್ದಾರೆ. ದಾಖಲೆ ನಿರ್ಮಿಸಿರುವ ಅಫ್ರಿನ್ ಕೇವಲ 65.24 ಸೆಂ.ಮೀ (2 ಅಡಿ1.6 ಇಂಚು) ಉದ್ದ ಇದ್ದಾರೆ.
ಆತ ಈ ಹಿಂದಿನ ದಾಖಲೆ ಹೊಂದಿರುವ ಕೊಲಂಬೋ ಮೂಲದ ಎಡ್ವರ್ಡ್ “ನಿನೊ” ಹೆರ್ನಾಂಡೆಜ್ ಗಿಂತ ಸುಮಾರು 7 ಸೆಂ.ಮೀ ಅಫ್ರಿನ್ ಗಿಡ್ಡವಿದ್ದಾರೆ.ಅಫ್ರಿನ್ ಗಿನ್ನೆಸ್ ವಿಶ್ವ ದಾಖಲೆಯಲ್ಲಿ ಹೆಸರು ಪಡೆದ ನಾಲ್ಕನೇ ಚಿಕ್ಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಫ್ರಿನ್ ಅವರನ್ನು 24 ಗಂಟೆಗಳ ಅವಧಿಯಲ್ಲಿ ಒಟ್ಟು ಮೂರು ಬಾರಿ ಎತ್ತರ ಪರೀಕ್ಷೆಗೆ ಒಳಪಡಿಲಾಯಿತು. ನಂತರ ಅಳತೆ ಮಾಡಿ ನಿಖರ ಎತ್ತರವನ್ನು ಗುರುತು ಹಾಕಿಕೊಳ್ಳಲಾಗಿದೆ. ಹುಟ್ಟುವಾಗಲೇ ಆಫ್ರಿನ್ ಅವರು ಕೇವಲ 700 ಗ್ರಾಂ ದೇಹದ ತೂಕದೊಂದಿಗೆ ಜನಿಸಿದ ಅವರು ಈಗ ಸುಮಾರು 6.5 ಕೆಜಿ ತೂಕ ಇದ್ದಾರೆ.
ಅವರ ದೇಹದ ಎತ್ತರ ಚಿಕ್ಕಂದಿನಿಂದಲೇ ಬೆಳೆಯುತ್ತಲೇ ಇಲ್ಲದ ಕಾರಣ ಆತ ಕುಳ್ಳ ಆಗಿತೆ ಉಳಿದ ಆತ ಸರಿಯಾಗಿ ವಿದ್ಯಾಭ್ಯಾಸವನ್ನು ನಡೆಸಲು ಆಗಲಿಲ್ಲ. ಆತನ ತಂದೆ ಕಟ್ಟಡ ನಿರ್ಮಾಣ ಕಾರ್ಯದ ಕಾರ್ಮಿಕ. ಆ ಕೆಲಸವನ್ನು ಕೂಡ ಮಾಡಲು ಆಗದಷ್ಟು ಸಣ್ಣ ವ್ಯಕ್ತಿ ಆಫ್ರಿನ್.
ಇದೀಗ ಆತನ ಅದೃಷ್ಟ ಖುಲಾಯಿಸಿದೆ, ಆತ ನೇರ ದುಬೈಗೆ ಹಾರಿದ್ದಾನೆ. ಈಗ ದುಬೈನಲ್ಲಿ ಆತ ಶಾಪಿಂಗ್ ನಲ್ಲಿ ತೊಡಗಿಸಿಕೊಂಡಿದ್ದು, ಆತನ ಅಳತೆಗೆ ಬೇಕಾದ ಮಾದರಿಯಲ್ಲಿ ಬಟ್ಟೆಗಳನ್ನು ಉಳಿಸಿಕೊಳ್ಳಲು ಟೈಲರ್ ಅನ್ನು ಭೇಟಿಯಾಗಿದ್ದಾರೆ. ಅಲ್ಲಿ ಶಾಪಿಂಗ್ ಮಾಡುವ ಜೊತೆಗೆ ವಿಶ್ವದ ಅತ್ಯಂತ ಎತ್ತರದ ಕಟ್ಟಡವಾದ ಬುರ್ಜ್ ಖಾಲಿಫ್ ಅನ್ನು ಏರುವುದು ವಿಶ್ವದ ಅತ್ಯಂತ ಕುಳ್ಳ ವ್ಯಕ್ತಿಯ ಕನಸು.