Tech Tips: ವಾಟ್ಸಪ್ ನಲ್ಲಿ ಟೈಪ್ ಮಾಡದೇ ಟೆಕ್ಸ್ಟ್ ಮೆಸೇಜ್ ಕಳುಹಿಸಬಹುದು | ಹೇಗೆಂದು ಇಲ್ಲಿದೆ

ದಿನನಿತ್ಯ ವಾಟ್ಸಪ್ ಮೂಲಕ ಲೆಕ್ಕವಿಲ್ಲದಷ್ಟು ಸಂದೇಶಗಳು ರವಾನೆ ಆಗುತ್ತಲೇ ಇರುತ್ತವೆ. ಕೆಲವರಿಗೆ ಮೆಸೇಜ್ ಟೈಪ್ ಮಾಡೋದು ಅಂದ್ರೆ ಉದಾಸೀನತೆ. ಇನ್ನೂ ಕೆಲವರಿಗೆ ಟೈಪಿಂಗ್ ಪ್ರಿಯವಾಗಿರುತ್ತದೆ. ಆದರೆ ವಾಟ್ಸಪ್ ಬಗ್ಗೆ ನಿಮಗೆ ಗೊತ್ತಿಲ್ಲದ ಟ್ರಿಕ್ ಇಲ್ಲಿದೆ. ಅದೇನೆಂದರೆ, ವಾಟ್ಸಪ್ ನಲ್ಲಿ ಟೈಪ್ ಮಾಡದೆಯೇ ಟೆಕ್ಸ್ಟ್ ಮೆಸೇಜ್ ಅನ್ನು ಕಳುಹಿಸಬಹುದು. ಹೇಗೆಂದು ನೋಡೋಣ.

ಇನ್ನೂ, ಈ ವೈಶಿಷ್ಟ್ಯ ನಿಮ್ಮ ಧ್ವನಿಯ ಆಧಾರದ ಮೇಲೆ ಕೆಲಸ ಮಾಡುತ್ತದೆ. ಅಂದ್ರೆ ನೀವು ಟೆಕ್ಸ್ಟ್ ಮಾಡುವ ಸಂದೇಶವನ್ನು ನೀವು ಮಾತನಾಡುವ ಮೂಲಕ ಹೇಳಬೇಕು ಹಾಗೂ ನೀವು ಹೇಳಿದ್ದು ಸ್ವಯಂಚಾಲಿತವಾಗಿ ಟೈಪ್ ಆಗುತ್ತದೆ. ಇದಕ್ಕೆ ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್​ನಿಂದ ಗೂಗಲ್ ಇಂಡಿಕ್ ಕೀಬೋರ್ಡ್ ಆಪ್ ಅನ್ನು ಡೌನ್​ಲೋಡ್ ಮಾಡಿಕೊಂಡು ಇನ್​ಸ್ಟಾಲ್ ಮಾಡಬೇಕು.

ಇಂಡಿಕ್ ಕೀಬೋರ್ಡ್ ಆಪ್ ಅನ್ನು ಇನ್​ಸ್ಟಾಲ್ ಮಾಡಿದ ನಂತರ ವಾಟ್ಸಪ್ ಅನ್ನು ತೆರೆದು, ನೀವು ಸಂದೇಶ ಕಳುಹಿಸಬೇಕಿರುವ ಚಾಟ್​ಗೆ ಹೋಗಿ, ಸಂದೇಶ ಟೈಪ್ ಮಾಡಲು ಕೀಬೋರ್ಡ್ ತೆರೆಯಿರಿ. ನಂತರ ಕೀಬೋರ್ಡ್​ಗಳ ಮೇಲೆ ಮೇಲ್ಭಾಗದಲ್ಲಿ ಮೈಕ್ ಸೈನ್ ಇರುತ್ತದೆ. ಅದನ್ನು ಟ್ಯಾಪ್ ಮಾಡಿ. ಹಾಗೇ ವಾಯ್ಸ್ ಮೆಸೇಜ್ ಗೆ ಇರುವ ಮೈಕ್ ಅನ್ನು ಬಳಸಬೇಡಿ. ಕೀಬೋರ್ಡ್ ನಲ್ಲಿರುವ ಮೈಕ್ ಮಾತ್ರ ನೀವು ಬಳಸಬೇಕು.

ಆ ಮೈಕ್ ಟ್ಯಾಪ್ ಮಾಡಿದಾಗ ನಿಮ್ಮ ಮುಂದೆ ಒಂದು ಮೈಕ್ ಪ್ರಕಟವಾಗುತ್ತದೆ. ಹಾಗೂ ನಿಮಗೆ ಮಾತನಾಡಲು ಸೂಚನೆ ನೀಡುತ್ತದೆ. ಇನ್ನೂ ಇದರಲ್ಲಿ ನೀವು ಕಳುಹಿಸಬೇಕೆನ್ನುವ ಸಂದೇಶವನ್ನು ಮಾತನಾಡುವ ಮೂಲಕ ಹೇಳಿ, ನಿಮ್ಮ ಸಂದೇಶ ಪೂರ್ಣವಾಗಿ ಹೇಳಿದ ಬಳಿಕ ಮೈಕ್ ಐಕಾನ್ ಅನ್ನು ಟ್ಯಾಪ್ ಮಾಡಿ. ಆಗ ನೀವು ಮಾತನಾಡಿದ್ದೆಲ್ಲವು ಇಲ್ಲಿ ಟೈಪ್ ಆಗುತ್ತದೆ. ನಂತರ ಸೆಂಡ್ ಬಟನ್ ಒತ್ತಿದರೆ ಆಯಿತು, ಇಷ್ಟೇ ಸುಲಭವಾಗಿ ಟೈಪ್ ಮಾಡದೆ ಮಾತಿನ ಮೂಲಕ ಸಂದೇಶ ಕಳುಹಿಸಬಹುದು.

Leave A Reply

Your email address will not be published.