ಮದುವೆ ಮೆರವಣಿಗೆಯ ಸಮಯದಲ್ಲೇ ಆಸ್ಪತ್ರೆ ಸೇರಿದ ವರ | ಕಾರಣ ತಿಳಿದು ಮದುವೆ ಕ್ಯಾನ್ಸಲ್ ಮಾಡಿದ ವಧು
ಮದುವೆ ಎಂಬ ಸುಂದರ ಬೆಸುಗೆಗೆ ಮಹತ್ವ ದೊರೆಯಲು ಸತಿ ಪತಿಗಳ ನಡುವೆ ಪ್ರೀತಿ, ಬಾಂಧವ್ಯ ಮುಖ್ಯವಾಗಿ ಹೊಂದಾಣಿಕೆ ಇದ್ದಾಗ ಮಾತ್ರ ದಾಂಪತ್ಯವು ಹಾಲು ಜೇನಿನಂತೆ ಸರಾಗವಾಗಿ ಸಾಗಲೂ ಸಾಧ್ಯ.
ಮದುವೆಯಾಗುವ ಪ್ರತಿ ಜೋಡಿಯು ಕೂಡ ತನ್ನದೆ ಆದ ನೂರಾರು ಕನಸು ಹೊತ್ತು ಹಸೆಮಣೆ ಏರುತ್ತಾ ಶುಭಗಳಿಗೆಯ ಪ್ರತಿ ಕ್ಷಣಗಳನ್ನು ಅನುಭವಿಸುತ್ತಾ ನವ ಜೀವನಕ್ಕೆ ಮುನ್ನುಡಿ ಬರೆಯುವುದು ಸಹಜ.
ನಾವು ವರಿಸುವ ಸಂಗಾತಿ ನಮ್ಮ ಆಲೋಚನೆಗಳಿಗೆ ಬೆಂಬಲವಾಗಿ ಜೊತೆಗೆ ತನಗೆ ಅನುರೂಪವಾದ ಗುಣಗಳನ್ನು ಹೊಂದಿರಬೇಕೆಂದು ಬಯಸುವುದು ಸಹಜ. ಹಾಗೆಯೇ, ಕೆಲವರು ಜೀವನ ಸಂಗಾತಿಯನ್ನು ಪಡೆಯಲು ಪೂಜೆಗಳನ್ನು ಮಾಡುತ್ತಾರೆ. ಆದರೆ, ಕೆಲ ಹುಡುಗರು ತಮ್ಮ ಮೂರ್ಖತನ ಇಲ್ಲವೇ ನಡೆ ನುಡಿಯಿಂದ ಉತ್ತಮ ಸಂಗಾತಿಯನ್ನು ಕಳೆದುಕೊಳ್ಳುವುದುಂಟು. ಈ ರೀತಿಯ ಪ್ರಕರಣ ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿದ್ದು, ವರನ ನಡೆಯಿಂದ ವಧು ಮದುವೆಯಾಗಲು ನಿರಾಕರಿಸಿದ ಘಟನೆ ನಡೆದಿದೆ.
ಹಸೆಮಣೆ ಏರಲು ಬಯಸುವ ಪ್ರತಿ ಜೋಡಿ ಕೂಡ ತನ್ನ ಮದುವೆಯ ಬಗ್ಗೆ ತನ್ನ ಮುಂದಿನ ಜೀವನದ ಬಗ್ಗೆ ಕನಸಿನ ಆಶಾ ಗೋಪುರ ಹೊಂದಿರುವುದು ಸಹಜ. ಮದುವೆಯೆಂಬ ಸುಮಧುರ ಬಾಂಧವ್ಯ ಕ್ಕೇ ಅಡಿ ಇಟ್ಟಾಗ ಎಲ್ಲಕ್ಕಿಂತ ಹೆಚ್ಚಾಗಿ ಅವಳ ಸಂಗಾತಿಯ ಬಗ್ಗೆ ಆಕೆಗೆ ಎಲ್ಲಿಲ್ಲದ ಪ್ರೀತಿ ಇರುವುದು ಸಹಜ.
ಪ್ರತಿ ಹುಡುಗಿಯು ತನ್ನನ್ನೂ ವರಿಸುವ ವರ ತನಗೆ ತಕ್ಕ ಜೋಡಿ ಯಾಗಬೇಕೆಂದೂ ಬಯಸುವುದು ಸಾಮಾನ್ಯ. ಹೆಣ್ಣು ಅದೆಷ್ಟೊ ಸೂಕ್ಷ್ಮ ವಿಚಾರಗಳಿಗೆ ಮಹತ್ವ ನೀಡುತ್ತಾಳೆ. ಆದರೆ, ಇತ್ತೀಚಿನ ದಿನಗಳಲ್ಲಿ ಅದೆಷ್ಟೋ ಕಾರಣಗಳಿಗೆ ಮದುವೆಯು ಮುರಿದುಬೀಳುತ್ತದೆ. ಇದೀಗ ಅಂತಹ ಘಟನೆಯೊಂದು ನಡೆದಿದ್ದು, ಮದುವೆಯೇ ಬೇಡ ಎಂದು ನಿರಾಕರಿಸಿ ಮದುಮಗಳು ಮಂಟಪ ಬಿಟ್ಟು ತೆರಳಿರುವ ಘಟನೆ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಮಹಾರಾಜ್ಗಂಜ್ನಲ್ಲಿ ವರನ ಈ ವರ್ತನೆ ಇಡೀ ಪುರುಷ ಸಮಾಜಕ್ಕೆ ಕಳಂಕ ತಂದಿದ್ದು, ವರನ ಮನೆಯವರು ಸಂತೋಷದಿಂದ ವಧುವನ್ನು ಮನೆ ತುಂಬಿಸಿಕೊಳ್ಳಲು ಸಿದ್ಧತೆ ನಡೆಸಿದ್ದರು. ವಧು ಕೂಡ ತನ್ನ ನೆಚ್ಚಿನ ವರನನ್ನು ನೋಡಲು ಕಾತುರದಿಂದ ಎದುರು ನೋಡುತ್ತಿದ್ದಾಗ ವರ ಮಾಡಿದ ಒಂದು ತಪ್ಪು ಇಡೀ ಸಂಬಂಧಗಳನ್ನು ನುಚ್ಚು ನೂರು ಮಾಡಿಬಿಟ್ಟಿದೆ.
ಈ ಘಟನೆ ಯುಪಿಯ ಮಹಾರಾಜ್ಗಂಜ್ನ ನಿಚ್ಲಾಲ್ ಪ್ರದೇಶದಲ್ಲಿ ನಡೆದಿದ್ದು, ಮದುಮಗನ ಮದುವೆಯ ಮೆರವಣಿಗೆ ಬರಬೇಕಾದ ಸಂದರ್ಭ ಇಡೀ ಹುಡುಗಿಯ ಕಡೆಯವರು ಸ್ವಾಗತಿಸುವ ತಯಾರಿಯಲ್ಲಿ ನಿರತರಾಗಿದ್ದರು. ಸಿದ್ಧತೆಯಲ್ಲಿ ಯಾವುದೇ ಕೊರತೆಯಾಗಬಾರದು ಎಂಬುದು ಎಲ್ಲರ ಮನದ ಇಂಗಿತ ವಾಗಿತ್ತು.
ಬಹಳ ಹೊತ್ತಾದರೂ ಮೆರವಣಿಗೆ ಬಾರದೆ ಇದ್ದಾಗ ಹುಡುಗಿಯ ಕಡೆಯವರು ಗಾಬರಿಗೊಂಡಿದ್ದು ಅಳಿಯನ ಕಡೆಯವರಿಗೆ ಕರೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿಂದ ಬಂತ ಉತ್ತರ ಕೇಳಿ ಬೆಚ್ಚಿಬಿದ್ದಿದ್ದಾರೆ. ಮೆರವಣಿಗೆ ಮಧ್ಯೆ ವರನ ಆರೋಗ್ಯ ಹದಗೆಟ್ಟಿದೆ ಎಂದು ವರನ ಕಡೆಯವರು ತಿಳಿಸಿದ್ದಾರೆ. ಅದಕ್ಕಾಗಿಯೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದಿದ್ದಾರೆ. ತಕ್ಷಣವೇ ಯುವತಿ ಕೂಡ ಆಸ್ಪತ್ರೆ ತಲುಪಿದ್ದಾಳೆ.
ವಧುವಿನ ಕಡೆಯವರು ಆಸ್ಪತ್ರೆ ತಲುಪಿದ ಕೂಡಲೇ ಅಲ್ಲಿನ ಪರಿಸ್ಥಿತಿ ಕಂಡು ಗಾಬರಿಯಾಗಿದ್ದಾರೆ. ಈ ಬಳಿಕ, ವಧುವಿನ ಕಡೆಯವರು ವರನ ಅಸ್ವಸ್ಥನಾಗಲು ಕಾರಣ ಏನೆಂಬುದನ್ನು ತಿಳಿಯಲು ಮುಂದಾಗಿದ್ದಾರೆ.
ಈ ಪ್ರಯತ್ನದಲ್ಲಿ ಮೊದಮೊದಲು ವರನ ಕಡೆಯವರು ದಿಕ್ಕು ತಪ್ಪಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಸ್ವಲ್ಪ ಸಮಯದ ಬಳಿಕ, ವರನಿಗೆ ವಿಪರೀತ ಕುಡಿತದ ಚಟ ಇರುವುದು ಬಹಿರಂಗವಾಗಿದ್ದು ಹೀಗಾಗಿ, ಪ್ರಜ್ಞೆ ತಪ್ಪಿರುವುದಾಗಿ ಹುಡುಗಿಯ ಕಡೆಯವರಿಗೆ ತಿಳಿದಿದೆ.
ನೂರಾರು ಕನಸು ಹೊತ್ತ ವಧುವಿಗೆ ವರ ಮದ್ಯವ್ಯಸನಿ ಎಂದು ತಿಳಿದು ಕೂಡಲೆ ಆಕೆ ನನಗೆ ಈ ಮದುವೆ ಬೇಡ ಎಂದು ಕಡ್ಡಿ ಮುರಿದಂತೆ ಹೇಳಿದ್ದಾಳೆ. ಮದುವೆ ಕ್ಯಾನ್ಸಲ್ ಎಂದ ತಕ್ಷಣ ದೊಡ್ದ ನಾಟಕ ಪ್ರಹಸನ ನಡೆದು ಗಲಾಟೆ ಕೂಡ ನಡೆದಿದೆ. ಆದರೆ ಇದಕ್ಕೆ ತಲೆ ಕೆಡಿಸಿಕೊಳ್ಳದ ವಧು ಮದುವೆಯೇ ಬೇಡ ಎಂದು ನಿರಾಕರಿಸಿದ್ದಾಳೆ. ವರನ ನಿಜ ಬಣ್ಣ ಬಯಲು ಆದ ಬಳಿಕ, ಮದುವೆ ಎಂಬ ಹೊಸ ಜೀವನಕ್ಕೆ ಮುನ್ನುಡಿ ಬರೆಯಬೇಕಿದ್ದ ವಧು ಮದುವೆಗೆ ನಿರಾಕರಿಸಿದ್ದಾಳೆ.