Road Safety : ನಿಮಗಿದು ಗೊತ್ತೇ? ರಸ್ತೆಗಳ ಮೇಲೆ ಬಿಳಿ- ಹಳದಿ ಗೆರೆ ಯಾಕೆ ಹಾಕ್ತಾರೆ ?

ಈಗಂತೂ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದೂ, ಪ್ರತಿಯೊಬ್ಬರ ಮನೆಯಲ್ಲಿ ಒಂದಲ್ಲಾ ಒಂದು ವಾಹನಗಳು ಇದ್ದೇ ಇರುತ್ತವೆ. ನೀವು ಹೆದ್ದಾರಿಗಳಲ್ಲಿ ಸಂಚರಿಸುವಾಗ ರಸ್ತೆ ಟಾರಿನ ಮೇಲೆ ಕಾಣುವ ಬಿಳಿ ಮತ್ತು ಹಳದಿ ಗೆರೆಗಳನ್ನು ಎಳೆದಿರುವುದನ್ನು ಗಮನಿಸಿರಬಹುದು. ಈ ರೀತಿ ಏಕೆ ಗೆರೆ ಎಳೆದಿದ್ದಾರೆಂದು ಒಮ್ಮೆಯಾದರೂ ಯೊಚಿಸಿದ್ದೀರಾ? ರಸ್ತೆಗಳ ಮೇಲೆ ಬಿಳಿ-ಹಳದಿ ಗೆರೆಗಳನ್ನು ಏಕೆ ಹಾಕಿರಲಾಗುತ್ತದೆ ಗೊತ್ತೇ?ರಸ್ತೆ ಮೇಲೆ ವಾಹನಗಳನ್ನು ಚಲಾಯಿಸುವ ವಾಹನ ಸವಾರರು ಅಷ್ಟೇ ಅಲ್ಲ, ನಡೆದುಕೊಂಡು ಹೋಗುವ ಪಾದಚಾರಿಗಳಿಗಾಗಿ ಈ ಗೆರೆಗಳನ್ನು ಹಾಕಿರುತ್ತಾರೆ ಎಂಬುದು ಗೊತ್ತಾ? ಒಂದೊಂದು ಗೆರೆಗಳಿಗೂ ಅದರದೇ ಆದ ಅರ್ಥ ಮತ್ತು ನಿಯಮಗಳಿವೆ!!

 

ಹೌದು, ಭಾರತದಲ್ಲಿ ಹೆದ್ದಾರಿಗಳು ಮತ್ತು ಲೋಕಲ್ ರಸ್ತೆಗಳಿವೆ. ಇವುಗಳಿಗೆ ಅದರದೇ ಆದ ಪ್ರತ್ಯೇಕ ನಿಯಮಗಳಿವೆ. ಸುಸಜ್ಜಿತ ರಸ್ತೆಗಳ ವರ್ಗದಲ್ಲಿ, 5 ವಿಭಿನ್ನ ರೀತಿಯ ರಸ್ತೆಗಳಿದ್ದೂ, ರಸ್ತೆ ಮೇಲಿನ ಪ್ರತಿಯೊಂದು ವಿಭಿನ್ನ ಗೆರೆಯೂ ಓವರ್ ಟೇಕಿಂಗ್ ನಿಯಮಗಳನ್ನು ಹೊಂದಿದೆ ಮತ್ತು ಕೆಲವೊಂದು ಅರ್ಥಗಳನ್ನೊಳಗೊಂಡಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

ಬಿಳಿ ನೇರ ಗೆರೆಗಳು:- ಈ ರೀತಿ ಬಿಳಿ ನೇರ ಬಾರ್ ಇದ್ದರೆ, ನೀವು ನೇರವಾಗಿ ರಸ್ತೆಯಲ್ಲಿ ನಡೆಯಬೇಕು. ಈ ರಸ್ತೆಯಲ್ಲಿ ಇತರ ವಾಹನಗಳನ್ನು ಹಿಂದಿಕ್ಕಲು ಅಥವಾ U ಟರ್ನ್ ತೆಗೆದುಕೊಳ್ಳಲು ನಿಮಗೆ ಅನುಮತಿ ಇರುವುದಿಲ್ಲ. ಈ ರಸ್ತೆಗಳು ಗುಡ್ಡಗಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇಲ್ಲಿ ಅಪಘಾತಗಳ ಸಾಧ್ಯತೆ ಹೆಚ್ಚಾಗಿರುತ್ತದೆ.

ಹಳದಿ ನೇರ ಪಟ್ಟಿ:- ಈ ರೀತಿ ನೇರವಾದ ಹಳದಿ ಪಟ್ಟಿ ಇದ್ದರೆ ಓವರ್ ಟೇಕ್ ಮಾಡಲು ಅನುಮತಿಸಲಾಗಿದೆ ಎಂದರ್ಥ. ಆದರೆ ನೀವು ನಿಮ್ಮ ಬದಿಯಲ್ಲಿದ್ದರೆ ಮಾತ್ರ. ಈ ರಸ್ತೆಯಲ್ಲಿ ಯಾವುದೇ ಬದಿಗೆ ಹಳದಿ ಪಟ್ಟಿಯನ್ನು ದಾಟಲು ಅನುಮತಿಸಲಾಗುವುದಿಲ್ಲ. ಈ ರಸ್ತೆಗಳು ಸಾಮಾನ್ಯವಾಗಿ ಕಡಿಮೆ ಗೋಚರತೆ ಇರುವ ಪ್ರದೇಶಗಳಲ್ಲಿ ಕಂಡು ಬರುತ್ತವೆ.

ಎರಡು ಹಳದಿ ಬಣ್ಣದ ಪಟ್ಟಿ:- ಹೆದ್ದಾರಿ ಮೇಲೆ ಸ್ಥಿರವಾದ ಎರಡು ಹಳದಿ ಬಣ್ಣದ ಗೆರೆಗಳು ಇದ್ದರೆ ಓವರ್‌ಟೇಕ್ ಮಾಡುವುದು ಕಡ್ಡಾಯವಾಗಿ ನಿಷೇಧಿಸಿದೆ ಎಂದರ್ಥ.ಈ ಪಟ್ಟೆಗಳು ಸಾಮಾನ್ಯವಾಗಿ ಒಂದೇ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ಎರಡು ಲೇನ್ ಗಳ ರಸ್ತೆಯಲ್ಲಿರುತ್ತದೆ. ಇನ್ನೊಂದು ಬದಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಸಂಚರಿಸುವುದರಿಂದ ಯಾವುದೇ ಕಾರಣಕ್ಕೂ ಇಲ್ಲಿ ನೀವು ಲೇನ್ ಬದಲಾಯಿಸುವಂತಿಲ್ಲ.

ಹಳದಿ ಗೆರೆಗಳ ಮಧ್ಯೆ ಬ್ರೇಕ್:- ರಸ್ತೆಯ ಮೇಲೆ ಬಿಟ್ಟು ಬಿಟ್ಟು ಹಳದಿ ಪಟ್ಟಿ ಹಾಕಿದ್ದರೆ ನೀವು ಸುಲಭವಾಗಿ ಓವರ್ ಟೇಕ್ ಮಾಡಬಹುದು ಮತ್ತು ಅದರ ಮೇಲೆ ಯು-ಟರ್ನ್ ತೆಗೆದುಕೊಳ್ಳಬಹುದು. ಇದಲ್ಲದೆ, ಓವರ್ ಟೇಕ್ ಮಾಡುವಾಗ, ವಾಹನವನ್ನು ಸಾಲಿನ ಇನ್ನೊಂದು ಬದಿಗೆ ಕೊಂಡೊಯ್ಯಬಹುದು. ಆದರೆ ಇತರ ವಾಹನಗಳ ಸಂಚಾರವನ್ನು ಗಮನಿಸುತ್ತಿರಬೇಕು.

ಬಿಳಿ ಗೆರೆಗಳ ಮಧ್ಯೆ ಬ್ರೇಕ್ :- ಈ ತರಹದ ಬಿಳಿ ಗೆರೆಗಳು ಸಾಮಾನ್ಯವಾಗಿ ಭಾರತದ ಹೈವೇಗಳಲ್ಲಿ ಕಾಣ ಸಿಗುತ್ತವೆ. ಇದರ ಅರ್ಥ ಇಲ್ಲಿ ನೀವು ಓವರ್ ಟೇಕ್ ಮಾಡಬಹುದು, ನೀವು ಹೋಗುತ್ತಿರುವ ಲೇನ್ ಬದಲಾಯಿಸಬಹುದು ಮತ್ತು ಯೂ ಟರ್ನ್ ತೆಗೆದುಕೊಳ್ಳಬಹುದು. ಆದರೆ ಎಚ್ಚರಿಕೆಯಿಂದ ಎಲ್ಲಾ ದಿಕ್ಕಿನೆಡೆ ನೋಡಿಕೊಂಡು ಲೇನ್ ಬದಲಾಯಿಸಬೇಕು ಮತ್ತು ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಪ್ರತಿಯೊಬ್ಬರು ರಸ್ತೆ ಸಂಚಾರ ನಿಯಮಗಳನ್ನು ತಿಳಿದುಕೊಂಡಿರಬೇಕು ಮತ್ತು ಕಡ್ಡಾಯವಾಗಿ ಪಾಲಿಸಬೇಕು. ಟ್ರಾಫಿಕ್ ಸಿಗ್ನಲ್ಗಳನ್ನು ಪಾಲಿಸುತ್ತಾ ವಾಹನ ಚಲಾಯಿಸಬೇಕು. ಇದರಿಂದ ರಸ್ತೆ ಅಪಘಾತಗಳ ಪ್ರಮಾಣವನ್ನು ಕಡಿಮೆ ಮಾಡಬಹುದು. ಭಾರತದಲ್ಲಿ ರಸ್ತೆ ಅಪಘಾತಗಳಿಂದ ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂಬುವುದನ್ನು ಮರೆಯಬೇಡಿ. ಜವಾಬ್ದಾರಿಯುತವಾಗಿ ಸಂಚರಿಸಿ.

Leave A Reply

Your email address will not be published.