ಗಮನಿಸಿ : ಇನ್ನು ಮುಂದೆ ತಿರುಪತಿ ಪ್ರಯಾಣ ತುಂಬಾ ಸುಲಭ
ನೀವೇನಾದರೂ ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕೆಂದು ಯೋಜನೆ ಹಾಕಿದ್ದೀರಾ?? ಹಾಗಾದ್ರೆ ನಿಮ್ಮ ಪ್ರಯಾಣ ಸುಲಲಿತವಾಗಿ ಸುಲಭವಾಗಿ ಹೋಗಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ರೈಲ್ವೆ ಸೇವೆ ದೊರೆಯಲಿದೆ. ಇದರ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.
ಸೋಲಾಪುರ ಲೋಕಮಾನ್ಯ ತಿಲಕ್ ಟರ್ಮಿನಲ್-ಸೋಲಾಪುರ ಹಾಗೂ ಸೋಲಾಪುರ-ತಿರುಪತಿ-ಸೋಲಾಪುರ ವಿಶೇಷ ರೈಲುಗಳನ್ನು ಡಿಸೆಂಬರ್ 13ರಿಂದ ಆರಂಭಿಸಲಾಗಿದೆ. ಈ ರೈಲುಗಳು ಬೀದರ್ ಮೂಲಕವೇ ಸಂಚರಿಸಲಿವೆ.
ಸೋಲಾಪುರ-ಲೋಕಮಾನ್ಯ ತಿಲಕ್ ಟರ್ಮಿನಲ್-ಸೋಲಾಪುರ ರೈಲು ಪ್ರತಿ ಮಂಗಳವಾರ ಸಂಚಾರ ನಡೆಸಲಿವೆ. ಸೋಲಾಪುರದಿಂದ ಬೆಳಗ್ಗೆ 9:20ಕ್ಕೆ ಹೊರಟು ಕಲಬುರಗಿ ಮಾರ್ಗವಾಗಿ ಬೀದರ್ಗೆ ಮಧ್ಯಾಹ್ನ 2:49 ಗಂಟೆಗೆ ತಲುಪಲಿದೆ.
ಹೌದು!!ತಿರುಪತಿ ದರ್ಶನ ಮಾಡಬಯಸುವವರು ಈ ರೈಲುಗಳನ್ನು ಬಳಸಿಕೊಂಡು ಸುಲಭವಾಗಿ ಪ್ರಯಾಣ ಮಾಡಬಹುದಾಗಿದೆ. ಕರ್ನಾಟಕದಿಂದ ತಿರುಪತಿ ಪ್ರಯಾಣಕ್ಕೆ ಹೊಸ ಸೌಲಭ್ಯವೊಂದು ಆರಂಭಗೊಂಡಿದ್ದು, ಬೀದರ್, ಕಲಬುರಗಿ ಮತ್ತು ಸುತ್ತಮುತ್ತಲಿನ ಊರುಗಳ ನಾಗರಿಕರು ಈ ಹೊಸ ಸೇವೆಯ ಸದುಪಯೋಗ ಪಡಿಸಿಕೊಳ್ಳಬಹುದು
ಸೋಲಾಪುರ-ತಿರುಪತಿ-ಸೋಲಾಪುರ ರೈಲು ಫೆಬ್ರವರಿ 16ರವರೆಗೆ ಸಂಚರಿಸಲಿದ್ದು, ಈ ಅವಧಿಯಲ್ಲಿ ಒಟ್ಟು 12 ಬಾರಿ ಈ ರೈಲುಗಳು ಪ್ರಯಾಣಿಕರಿಗೆ ಸೇವೆ ಒದಗಿಸಲಿವೆ.
ಈ ವಿಶೇಷ ರೈಲು ಸೋಲಾಪುರದಿಂದ ಗುರುವಾರ ರಾತ್ರಿ 9:40ಕ್ಕೆ ಹೊರಟು ಶುಕ್ರವಾರ ಬೆಳಗ್ಗೆ 4:04ಕ್ಕೆ ತಿರುಪತಿ ತಲುಪಲಿದೆ. ಬೀದರ್, ಕಲಬುರಗಿ, ಯಾದಗಿರಿ ಮಾರ್ಗವಾಗಿ ಈ ರೈಲು ಸಂಚರಿಸಲಿದ್ದು, ರೈಲ್ವೆ ಪ್ರಯಾಣಿಕರು ಈ ಸೇವೆಯ ಸದುಪಯೋಗ ಪಡಿಸಿಕೊಳ್ಳಬಹುದು.
ರೈಲ್ವೇ ಸೇವೆ ಸುಲಲಿತವಾಗಿ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ರೈಲುಗಳ ಸಂಚಾರ ನಡೆಸಲಿದ್ದು,ಈ ರೈಲ್ವೆ ಸೇವೆಗಳ ಮೂಲಕ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಪುನೀತರಾಗಬಹುದು.