ಓಸಮಾ ಬಿನ್ ಲಾಡೆನ್ ಸತ್ತಿದ್ದಾನೆ, ಆದರೆ ಗುಜರಾತ್‌ನ ಆ ಕಟುಕ ಇನ್ನೂ ಬದುಕಿದ್ದಾನೆ – ಪಾಕ್ ಸಚಿವನ ವೈಯಕ್ತಿಕ ದಾಳಿ
ಪ್ರಧಾನಿ ನರೆಂದ್ರ ಮೋದಿಯವರ ಬಗ್ಗೆ ಇಡೀ ದೇಶದ ಜನತೆಗೆ ಒಳ್ಳೆಯ ಅಭಿಪ್ರಾಯ ಇದ್ದರೂ ಕೂಡ ಅವರ ವಿರುದ್ಧ ಕಿಡಿ ಕಾರುವ ಮಂದಿಗೇನೂ ಕಮ್ಮಿಯಿಲ್ಲ.
ಇದೀಗ, ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಜರ್ದಾರಿ ಭುಟ್ಟೋ (Pakistan Foreign Minister Bilawal Bhutto Zardari) ಅಂತರಾಷ್ಟ್ರೀಯ ವೇದಿಕೆಯಲ್ಲಿ ನಾಲಿಗೆ ಹರಿಬಿಟ್ಟು ಮೋದಿ ವಿರುದ್ದ ರಾಜಕೀಯ ದಾಳಿ ನಡೆಸಿದ್ದಾರೆ.
ಗುರುವಾರ ನ್ಯೂಯಾರ್ಕ್ನಲ್ಲಿ (New York) ಪತ್ರಿಕಾಗೋಷ್ಠಿಯೊಂದನ್ನು ಉದ್ದೇಶಿಸಿ ಮಾತನಾಡಿದ ಬಿಲಾವಲ್ ನಾಲಿಗೆ ಹರಿಬಿಟ್ಟು ಮೋದಿಯ ವಿರುದ್ದ ಹರಿಹಾಯ್ದಿದ್ದಾರೆ. ಮಾಸ್ಟರ್ಮೈಂಡ್ ಒಸಾಮಾ ಬಿನ್ ಲಾಡೆನ್ಗೆ (Osama Bin laden) ಆಶ್ರಯ ನೀಡಿದ್ದ ಭಾರತದ ವಿದೇಶಾಂಗ ಸಚಿವರ ಹೇಳಿಕೆ ಬಗ್ಗೆ ಮಾತನಾಡಿದ್ದು, ಅಲ್ಲದೆ, ಬುಟ್ಟೋ ಒಸಾಮಾ ಬಿನ್ ಲಾಡೆನ್ ಸತ್ತಿದ್ದಾನೆ ಆದರೆ ಗುಜರಾತ್‌ನ (Gujarat) ಕಟುಕ ಇನ್ನೂ ಜೀವಂತವಾಗಿದ್ದಾನೆ ಎಂದು ಭಾರತದ ಪ್ರಧಾನಿಗೆ ಹೇಳಲು ಬಯಸುತ್ತೇನೆ ಎಂದು ಮೋದಿ ವಿರುದ್ಧ ವೈಯುಕ್ತಿಕ ದಾಳಿ ನಡೆಸಿದ್ದಾರೆ.
ವಿಶ್ವಸಂಸ್ಥೆಯ ಸಭೆಗಳಲ್ಲಿ ಭಾಗವಹಿಸಲು ನ್ಯೂಯಾರ್ಕ್ಗೆ ಆಗಮಿಸಿದ್ದ ಎಸ್.ಜೈಶಂಕರ್ ಅವರ ವಿರುದ್ಧ ವಾಗ್ದಾಳಿ ದಾಳಿ ನಡೆಸಿದ ಭುಟ್ಟೋ, ‘ಮೋದಿ ಪ್ರಧಾನಿಯಾಗುವ ಮುನ್ನವೇ ಅವರ ಪ್ರವೇಶವನ್ನು ಅಮೆರಿಕ ನಿಷೇಧ ಹೇರಿದೆ. ಮೋದಿಯ ವಿರುದ್ಧ ವಾಗ್ದಾಳಿ ನಡೆಸಿದ ಬಳಿಕ, ವಿದೇಶಾಂಗ ಸಚಿವ ಎಸ್.ಜೈಶಂಕರ್ ವಿರುದ್ಧ ಮತ್ತಷ್ಟು ಆರೋಪ ಹೊರಿಸಿದ ಭುಟ್ಟೋ ಇಬ್ಬರೂ(ಮೋದಿ ಹಾಗೂ ಜೈಶಂಕರ್) ಭಾರತದವರಲ್ಲ ಎಂದು ಆರೋಪಿಸಿದ್ದಲ್ಲದೆ, ಅವರು ಆರ್ ಎಸ್ ಎಸ್ ನ ಪ್ರಧಾನಿ ಮತ್ತು ವಿದೇಶಾಂಗ ಸಚಿವರು ಎಂದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ನ್ಯೂಯಾರ್ಕ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಲಾವಲ್ ಅವರು ಭಾರತ ಸರ್ಕಾರವು ಗಾಂಧಿಯವರ ಸಿದ್ಧಾಂತ ತತ್ವವನ್ನು ನಂಬುವ ಬದಲಿಗೆ ತನ್ನ ಕೊಲೆಗಾರನ ತತ್ವಗಳನ್ನು ಬಲವಾಗಿ ನಂಬುತ್ತದೆ. ಭಾರತ ಸರ್ಕಾರ ಹಿಟ್ಲರ್ ನಿಂದ ಪ್ರಭಾವಿತವಾಗಿದೆ ಎಂದು ಹೇಳಿದ್ದು, ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಭಯೋತ್ಪಾದಕ ದಾಳಿಗೆ ಭಾರತವೇ ಕಾರಣ ಎಂಬಂತೆ ಬಿಂಬಿಸಿ ಹೊಣೆಗಾರರನ್ನಾಗಿ ಮಾಡಿದ ಬಿಲಾವಲ್, ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ನೆರೆಯ ದೇಶದಿಂದ ಬೆಂಬಲ ದೊರೆಯುತ್ತಿದ್ದು, ಬಲೂಚಿಸ್ತಾನದಲ್ಲಿ ಅಸ್ಥಿರತೆಯನ್ನು ಸೃಷ್ಟಿಸಲು ಬಾಹ್ಯ ಶಕ್ತಿಗಳು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಶ್ಮೀರ ಸಮಸ್ಯೆಯನ್ನು ಪ್ರಸ್ತಾಪಿಸಿದ್ದಾರೆ. ಜಾಗತಿಕ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಯುಎನ್ಎಸ್ಸಿ ಪ್ರಾಥಮಿಕ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ. ಭಾರತದ ವಿದೇಶಾಂಗ ಸಚಿವಾಲಯ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದ ಹಿನ್ನೆಲೆ, ಅದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಸಚಿವರ ಈ ರೀತಿ ಅಸಭ್ಯ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬುಧವಾರ ಮಾತನಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದಕ್ಕಾಗಿ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದ್ದಾರೆ.
ಮೋದಿಯ ವಿರುದ್ದ ಕಿಡಿ ಕಾರಿದ ಪಾಕಿಸ್ತಾನಕ್ಕೆ ಸಲಹೆ ನೀಡಿದ ಜೈಶಂಕರ್, ಅಲ್-ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ನಂತಹ ಭಯೋತ್ಪಾದಕನಿಗೆ ಆಶ್ರಯ ಒದಗಿಸಿದ ಜೊತೆಗೆ ನೆರೆಯ ದೇಶದ ಸಂಸತ್ತಿನ ಮೇಲೆ ದಾಳಿ ಮಾಡಿದ ದೇಶದಿಂದ ಈ ರೀತಿಯ ಉಪದೇಶ ಅರ್ಹವಲ್ಲ ಎಂದಿದ್ದಾರೆ.