ಒಮ್ಮೆ ಗೂಗಲ್ ನಲ್ಲಿ ಈ ಕೀವರ್ಡ್ ಸರ್ಚ್ ಮಾಡಿದರೆ ಖಂಡಿತ ನಿಮಗೆ ಆಶ್ಚರ್ಯವಾಗುತ್ತೆ
ಸದ್ಯ ಗೂಗಲ್ ಸಿಸ್ಟಮ್ ಗೊತ್ತಿಲ್ಲದವರು ಯಾರೂ ಇಲ್ಲ ಅನಿಸುತ್ತೆ. ಆಧುನಿಕ ಜೀವನ ಶೈಲಿಯ ಜೊತೆ ಜೊತೆಗೆ ತಂತ್ರಜ್ಞಾನ ಸಹ ಅಪಾರ ಬೆಳವಣಿಗೆ ಕಂಡಿದೆ. ನಿಮ್ಮ ಬಳಿ ಸ್ಮಾರ್ಟ್‌ಫೋನ್ ಒಂದಿದ್ರೆ ಸಾಕು, ಏನೇ ಆಗಲಿ ಕೂತಲ್ಲಿಯೇ ನಮಗೆ ಪ್ರತಿಯೊಂದು ಸಲಹೆ ನೀಡುವುದು ಅಂದರೆ ಅದು ಗೂಗಲ್ ಆಗಿದೆ. ಹೌದು ಗೂಗಲ್ ನಮಗೆ ಯಾವ ರೀತಿಯ ಸಹಾಯ ಬೇಕಾದರು ಮಾಡುತ್ತದೆ. ಪ್ರಸ್ತುತ ಏನೇ ಮಾಹಿತಿ ಬೇಕಿದ್ದರೂ ಮೊದಲು ನೆನಪಿಗೆ ಬರುವುದೇ ಗೂಗಲ್. ಸದ್ಯ ಗೂಗಲ್ ಅಸಿಸ್ಟಂಟ್ ವಾಯಿಸ್ ಸರ್ಚ್ ಸೌಲಭ್ಯವು ಬಳಕೆದಾರರನ್ನು ಸೆಳೆದಿದೆ. ಇವುಗಳೊಂದಿಗೆ ಗೂಗಲ್ ಕೆಲವು ಕ್ರೇಜಿ ಸರ್ಚ್ ವಿಧಾನಗಳನ್ನು ಹೊಂದಿದ್ದು, ಜನರಿಗೆ ಮನೋರಂಜನೆ ಸಹ ನೀಡುತ್ತವೆ.
ಗೂಗಲ್ ಕೆಲವು ಕ್ರೇಜಿ ಮತ್ತು ಕುತೂಹಲಕಾರಿ ಸರ್ಚ್ ಲುಕ್‌ನಲ್ಲಿ ಗೂಗಲ್ ಡ್ಯೂಡಲ್ ಕಾಣಿಸುತ್ತದೆ. ಹಾಗೆಯೆ ಗೂಗಲ್ ಕೆಲವು ಮಾಹಿತಿಗಳ ಸರ್ಚ್ ಫಲಿತಾಂಶದಲ್ಲಿ ಬಳಕೆದಾರರಿಗೆ ಮ್ಯಾಜಿಕ್ ಅನಿಸುವಂತಹ ಚಟುವಟಿಕೆಗಳನ್ನು ಪ್ರದರ್ಶಿಸುತ್ತದೆ. ಆ ರೀತಿಯ ಗೂಗಲ್ ಸರ್ಚ್‌ನ ಕ್ರೇಜಿ ಲುಕ್‌ನ ಕೆಲವು ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
- ಬಳಕೆದಾರರು ತಮ್ಮ ಬಿಡುವಿನ ಸಮಯದಲ್ಲಿ ಬೇಸರ ಕಳೆಯಲು Google ನಲ್ಲಿರುವ ಹೈಡ್ ಗೇಮ್ ಅನ್ನು ನೀವು ಆಡಬಹುದು. ಬಳಕೆದಾರರು ಗೂಗಲ್ ಸರ್ಚ್‌ನಲ್ಲಿ Atari Breakout ಎಂದು ಸರ್ಚ್ ಮಾಡಿ. ಮೊಲದ ಫಲಿತಾಂಶದ ಲಿಂಕ್ ಕ್ಲಿಕ್ ಮಾಡಿದರೇ ಗೇಮ್ ಶುರುವಾಗುತ್ತದೆ. ಇದಕ್ಕಾಗಿ ಹೈ-ಎಂಡ್ ಸಿಸ್ಟಮ್ ಅಗತ್ಯವಿಲ್ಲ. ಉತ್ತಮ ಇಂಟರ್ನೆಟ್ ಸಂಪರ್ಕ ಸಾಕು.
- ಗೂಗಲ್‌ನಲ್ಲಿ Google Zero Gravity ಎಂದು ಸರ್ಚ್ ಮಾಡಿದರೇ ಕಾಣಿಸುವ ಗೂಗಲ್ ಡ್ಯೂಡಲ್ ತಕ್ಷಣಕ್ಕೆ ಕೆಳಗ ಬಿದ್ದಂತೆ ಕಾಣುತ್ತದೆ. ಏಕೆಂದರೇ ನೀವು ಸರ್ಚ್ ಮಾಡಿರುವ ಕೀ ವರ್ಡ್ ಜೀರೊ ಗ್ರ್ಯಾವಿಟಿ ಅಲ್ಲವೇ.
- ಗೂಗಲ್ ಸರ್ಚ್‌ನಲ್ಲಿ Do a Barrel Roll ಕೀ ವರ್ಡ್ ಟೈಪ್ ಮಾಡಿ ಸರ್ಚ್ ಮಾಡಿದರೇ ನಿಮ್ಮ ಕಣ್ಣುಗಳ ಮುಂದೆ ಮ್ಯಾಜಿಕ್ ನಡೆಯುತ್ತದೆ.ನೀವು ಈ ಕೀ ವರ್ಡ್ ಸರ್ಚ್ ಮಾಡಿದಾಗ ಕಾಣಿಸುವ ಫಲಿತಾಂಶದಲ್ಲಿ Do a Barrel Roll ಫಲಿತಾಂಶ ತೆರೆಯಿರಿ ಆಗ ಫಲಿತಾಂಶದ ಪುಟ ಗಿರಗಿರನೆ ತಿರುಗಿ ಬಿಡುತ್ತದೆ. ಹಾಗೆಯೇ ಎರಡು ಬಾರಿ, ಹತ್ತು ಬಾರಿ, ಇಪ್ಪತ್ತು ಬಾರಿ, ನೂರು ಬಾರಿ ಹಾಗೂ ಸಾವಿರ ಬಾರಿ, ಲಕ್ಷ ಬಾರಿ ತಿರುಗುವ ಆಯ್ಕೆ ಸಹ ಕಾಣಿಸುತ್ತದೆ.
- ಗೂಗಲ್ ಸರ್ಚ್‌ನಲ್ಲಿ zerg rush ಕೀ ವರ್ಡ್ ಅನ್ನು ಟೈಪ್ ಮಾಡಿ, ಬಂದಿರುವ ಸರ್ಚ್ ಫಲಿತಾಂಶಗಳೆಲ್ಲವು ಹಾಗೆಯೇ ಕ್ರಮೇಣ ಮಾಯವಾಗುತ್ತಾ ಹೋಗುತ್ತವೆ. zerg rush ಎನ್ನುವುದು ಒಂದು ಆಕ್ರಮಣ ತಂತ್ರವಾಗಿದ್ದು, ದೊಡ್ಡ ಪಡೆಯೊಂದಿಗೆ ಅಥವಾ ಗ್ಯಾಂಗ್‌ನೊಂದಿಗೆ ಆಕ್ರಮಣ ಮಾಡುವುದಾಗಿದೆ. ಅದೇ ರೀತಿ zerg rush ಸರ್ಚ್ ಮಾಡಿದಾಗ ಫಲಿತಾಂಶ ಪುಟದಲ್ಲಿ ಯೆಲ್ಲೊ ರಿಂಗ್‌ಗಳು ಫಲಿತಾಂಶವನ್ನು ಮಾಯ ಮಾಡುತ್ತವೆ ಅಥವಾ ನಾಶ ಮಾಡುತ್ತವೆ.
- ಬಳಕೆದಾರರು ಗೂಗಲ್ ಸರ್ಚ್‌ನಲ್ಲಿ Google Zipper ಕೀ ವರ್ಡ್ ಸರ್ಚ್ ಮಾಡಿದರೇ ಗೂಗಲ್ ಡ್ಯೂಡಲ್ ಪೇಜ್‌ನ ಮಧ್ಯದಲ್ಲಿ ಜಿಪ್/Zipper ಕಾಣಿಸುತ್ತದೆ. ಬಳಕೆಅದರರು ಜಿಪ್/Zipper ಸರಿಸಬಹುದು. ಅಂದಹಾಗೆ Zipper ಅನ್ನು ಗಿಡಿಯಾನ್ ಸಂಡ್‌ಬ್ಯಾಕ್ (Gideon Sundback) ಅವರ 132 ಹುಟ್ಟಹಬ್ಬದ ನೆನಪಿಗಾಗಿ 2012ರಲ್ಲಿ ಈ ವಿಶೇಷ ಸರ್ಚ್ ವಿಧಾನ ರೂಪಿಸಿತ್ತು.
- ಗೂಗಲ್‌ನ ಇನ್ನೊಂದು ಆಕರ್ಷಕ ಸರ್ಚ್ ಪೇಜ್ ಅಂದರೇ ಅದು ಗೂಗಲ್ ಮೀರರ್-Google Mirror. ಬಳಕೆದಾರರು Google Mirror ಎಂಬ ಕೀ ವರ್ಡ್ ಸರ್ಚ್ ಮಾಡಿದರೇ ಕನ್ನಡಿಯ ಬಿಂಬದಂತೆ ‘ಗೂಗಲ ಡ್ಯೂಡಲ್’ ಕಾಣಿಸುತ್ತದೆ. ಹಾಗೆಯೇ ಸರ್ಚ್ ಮಾಹಿತಿಗಳು ಸಹ ಕನ್ನಡಿ ಬಿಂಬದಲ್ಲಿ/ ಉಲ್ಟಾ ಕಾಣಿಸುತ್ತವೆ. ನೀವು ಒಮ್ಮೆ ಪ್ರಯತ್ನಿಸಿ ನೋಡಿ.
- ಗೂಗಲ್‌ನಲ್ಲಿ Google Underwater ಕೀ ವರ್ಡ್ ಸರ್ಚ್ ಮಾಡಿದರೇ, ನಿಮಗೆ ನೀರಿನಲ್ಲಿ ಗೂಗಲ್ ಸರ್ಚ್ ಬಾಕ್ಸ್ ಕಾಣಿಸುತ್ತದೆ. ಹಾಗೂ ಗೂಗಲ್ ಡ್ಯೂಡಲ್ ನೊಂದಿಗೆ ಮೀನುಗಳು ಸಹ ಕಾಣಿಸುತ್ತವೆ.
- ಗೂಗಲ್ ಸರ್ಚ್‌ನಲ್ಲಿ blink HTML ಕೀ ವರ್ಡ್ ಟೈಪ್ ಮಾಡಿ ಸರ್ಚ್ ಮಾಡಿದರೇ ಖಂಡಿತಾ ನಿಮ್ಮ ಕಣ್ಣುಗಳ ಮುಂದೆ ಮ್ಯಾಜಿಕ್ ನಡೆಯಲಿದೆ. ಏಕೆಂದರೇ ಈ ಕೀ ವರ್ಡ್ ಸರ್ಚ್ ಮಾಡಿದಾಗ ಕಾಣಿಸುವ ಫಲಿತಾಂಶದಲ್ಲಿ HTML ಮತ್ತು blink ಪದಗಳು ಮಿನುಗಲು ಶುರು ಮಾಡುತ್ತವೆ. ನೀವು ಪ್ರಯತ್ನಿಸಿ ನೋಡಿ ಅಚ್ಚರಿ ಪಡುತ್ತಿರಾ.
- ತ್ವರಿತವಾಗಿ ಉಸಿರಾಟದ ವ್ಯಾಯಾಮ ಮಾಡುವ ಪ್ರಯತ್ನದಲ್ಲಿದ್ದರೇ, ಗೂಗಲ್ ಸರ್ಚ್‌ನಲ್ಲಿ Breathing Exercise ಎಂದು ಬರೆದು ಸರ್ಚ್ ಮಾಡಿದರೇ ನಿಮಗೆ ಉಸಿರಾಟ ವ್ಯಾಯಾಮ ಲಭ್ಯ. 1 ನಿಮಿಷದ ವಿಡಿಯೊ ನಿಮ್ಮನ್ನು ವ್ಯಾಯಾಮ ಮಾಡಲು ಗೈಡ್ ಮಾಡುತ್ತದೆ.
- ಈಗಾಗಲೇ ಗೂಗಲ್ ಸರ್ಚ್‌ನಲ್ಲಿ ನೈಜ ಪ್ರಾಣಿಗಳು ಅನಿಸುವಂತಹ 3D ಚಿತ್ರ (3D AR Animals) ನೋಡಿರಬಹುದು. ಹಾಗೆಯೇ ಗೂಗಲ್ ಸರ್ಚ್‌ನಲ್ಲಿ ಪ್ರಾಣಿಗಳ ನೈಜ ಧ್ವನಿ ಕೇಳುವಂತಹ ಫಲಿತಾಂಶ ನೀಡಲಾಗಿದೆ. ಬಳಕೆದಾರರು ಗೂಗಲ್ ಸರ್ಚ್ ನಲ್ಲಿ Animal Sounds ಅಂತಾ ಟೈಪ್ ಮಾಡಿದರೇ ಪ್ರಾಣಿಗಳ ಲಿಸ್ಟ್ ಕಾಣಿಸುತ್ತದೆ. ಬೇಕಾದ ಪ್ರಾಣಿ ಚಿತ್ರ ಕ್ಲಿಕ್ ಮಾಡಿದರೇ ಸೌಂಡ್ ಕೇಳಬಹುದು.
ಹೀಗೆ ನೀವು ಗೂಗಲ್ ಜೊತೆಗೆ ಬಿಡುವಿನ ಸಮಯದಲ್ಲಿ ಮನೋರಂಜನೆ ಜೊತೆಗೆ ಕಾಲ ಕಳೆಯಬಹುದಾಗಿದೆ. ಒಂದು ಸಲಿ ಟ್ರೈ ಮಾಡಿ ನೀವೂ ಸಹ ವಾರೆ ವಾಹ್ ಅನ್ನುತ್ತಿರಾ!.