Canara Bank : ಬ್ಯಾಂಕ್ ಗ್ರಾಹಕರೇ ನಿಮ್ಮ ಕೆನರಾ ಬ್ಯಾಂಕ್ ನಿಂದ ರೂ.147.5 ರೂ ಕಡಿತಕ್ಕೆ ಕಾರಣ ಏನು ಗೊತ್ತಾ?
ಬ್ಯಾಂಕ್ ಕೆಲವೊಮ್ಮೆ ಇಂತಿಷ್ಟು ಮೊತ್ತ ವನ್ನು ನಿರ್ದಿಷ್ಟ ಅವಧಿಯಲ್ಲಿ ಕಡಿತ ಮಾಡಿರುತ್ತಾರೆ. ಆದರೆ ಬಹುತೇಕರಿಗೆ ಯಾವ ಕಾರಣಕ್ಕೆ ಈ ಹಣವನ್ನು ಕಡಿತ ಮಾಡಲಾಗಿದೆ ಎಂದು ತಿಳಿದಿರುವುದಿಲ್ಲ. ಕೆಲವರು ಈ ಹಣ ಕಡಿತದ ಬಗ್ಗೆ ತಿಳಿದು ಸುಮ್ಮನಿರುತ್ತಾರೆ, ಕೆಲವರು ಪ್ರಶ್ನೆ ಮಾಡುತ್ತಾರೆ. ಸದ್ಯ ನೀವು ಕೆನರಾ ಬ್ಯಾಂಕ್ ಖಾತೆ ಹೊಂದಿದ್ದರೆ ಇದೇ ಪ್ರಶ್ನೆ ನಿಮ್ಮನ್ನು ಕಾಡಿರಬಹುದು.
ಹೌದು ನೀವು ಕೆನರಾ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿದ್ದರೆ ನಿಮ್ಮ ಖಾತೆಯಿಂದ 147 .5ರೂ. ಕಡಿತವಾಗಿರಬಹುದು. ನಿಮಗೆ ತಿಳಿದಿರುವಂತೆ ಎಲ್ಲ ಬ್ಯಾಂಕ್ ಗಳು ಡೆಬಿಟ್ ಕಾರ್ಡ್ ಬಳಕೆ ಮೇಲೆ ವಾರ್ಷಿಕ ನಿರ್ವಹಣಾ ಶುಲ್ಕವನ್ನು ವಿಧಿಸುತ್ತವೆ. ಈ ಶುಲ್ಕ ಬ್ಯಾಂಕಿನಿಂದ ಬ್ಯಾಂಕಿಗೆ ವ್ಯತ್ಯಾಸವಾಗುತ್ತದೆ.
ಸದ್ಯ ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಕ್ಲಾಸಿಕ್/ಸ್ಟ್ಯಾಂಡರ್ಡ್, ಪ್ಲಾಟಿನಂ, ಬ್ಯುಸಿನೆಸ್ ಹಾಗೂ ಇತರ ಆಯ್ದ ಡೆಬಿಟ್ ಕಾರ್ಡ್ ಗಳ ಮೇಲೆ ವಾರ್ಷಿಕ ನಿರ್ವಹಣಾ ಶುಲ್ಕ ವಿಧಿಸುತ್ತದೆ. ಇದೇ ಕಾರಣಕ್ಕೆ ನಿಮ್ಮ ಬ್ಯಾಂಕ್ ಖಾತೆಯಿಂದ ಇತ್ತೀಚೆಗೆ 147 .5ರೂ. ಕಡಿತವಾಗಿದೆ.
ಅದಲ್ಲದೆ ವಿವಿಧ ಮಾದರಿಯ ಡೆಬಿಟ್ ಕಾರ್ಡ್ ಗಳ ಮೇಲೆ ವಾರ್ಷಿಕ ನಿರ್ವಹಣಾ ಶುಲ್ಕ ಕೂಡ ಭಿನ್ನವಾಗಿರುತ್ತದೆ. ಡೆಬಿಟ್ ಕಾರ್ಡ್ ಮೇಲಿನ ನೋಂದಣಿ ಶುಲ್ಕ ಹಾಗೂ ಆಕ್ಟಿವೇಷನ್ ಅಥವಾ ಸದಸ್ಯತ್ವ ಶುಲ್ಕ ಶೂನ್ಯವಾಗಿದ್ರೂ ವಾರ್ಷಿಕ ನಿರ್ವಹಣಾ ಶುಲ್ಕ ವಿಧಿಸಲಾಗುತ್ತದೆ. ಕ್ಲಾಸಿಕ್/ಸ್ಟ್ಯಾಂಡರ್ಡ್ ಡೆಬಿಟ್ ಕಾರ್ಡ್ ಶುಲ್ಕ 125ರೂ., ಪ್ಲಾಟಿನಂ ಕಾರ್ಡ್ ಶುಲ್ಕ 350ರೂ., ಬ್ಯುಸಿನೆಸ್ ಕಾರ್ಡ್ ಶುಲ್ಕ 300ರೂ. ಹಾಗೂ ಇತರ ಆಯ್ದ ಕಾರ್ಡ್ ಮೇಲಿನ ಶುಲ್ಕ 1000ರೂ. ಆಗಿರುತ್ತದೆ.
ಇನ್ನು ಡೆಬಿಟ್ ಕಾರ್ಡ್ ಗಳ ಮೇಲಿನ ಸೇವಾ ಶುಲ್ಕದ ಮೇಲೆ ಶೇ.18ರಷ್ಟು ಜಿಎಸ್ ಟಿ ಕೂಡ ವಿಧಿಸಲಾಗುತ್ತದೆ. ಬ್ಯಾಂಕ್ ಸೇವಾ ಶುಲ್ಕದ ಮೇಲೆ ವಿಧಿಸಲಾಗುವ ಇತರ ತೆರಿಗೆಗಳನ್ನು ಕೂಡ ಗ್ರಾಹಕರಿಂದ ಪಡೆಯುತ್ತದೆ. ಹೀಗಾಗಿ ನೀವು ಕೆನರಾ ಬ್ಯಾಂಕ್ ಕ್ಲಾಸಿಕ್/ಸ್ಟ್ಯಾಂಡರ್ಡ್ ಡೆಬಿಟ್ ಕಾರ್ಡ್ ಹೊಂದಿದ್ರೆ ವಾರ್ಷಿಕ ನಿರ್ವಹಣಾ ಶುಲ್ಕ 125ರೂ.+ಜಿಎಸ್ ಟಿ (22.5 ರೂ.) ಅಂದ್ರೆ 147.5ರೂ. ಪಾವತಿಸಬೇಕಾಗುತ್ತದೆ.
ಕೆನರಾ ಬ್ಯಾಂಕ್ ಕ್ಲಾಸಿಕ್ ಡೆಬಿಟ್ ಕಾರ್ಡ್ ಮೂಲಕ ಮಾಡುವ ಎನ್ ಎಫ್ ಸಿ ವಹಿವಾಟನ್ನು ಮಾತ್ರ ಕೆನರಾ ಬ್ಯಾಂಕ್ ಹೆಚ್ಚಳ ಮಾಡಿಲ್ಲ. ಅದು ಈ ಹಿಂದಿನಂತೆ 25 ಸಾವಿರ ರೂ. ಇದೆ. ಒಮ್ಮೆಗೆ ಐದು ಸಾವಿರ ರೂ. ನಂತೆ ಪ್ರತಿದಿನ ಐದು ವಹಿವಾಟಿಗೆ ಅವಕಾಶವಿದೆ. ಅಂದರೆ 25 ಸಾವಿರ ರೂ. ವಹಿವಾಟು ನಡೆಸಲು ಅವಕಾಶವಿದೆ. ಪ್ಲಾಟಿನಮ್, ಬ್ಯುಸಿನೆಸ್, ಸೆಲೆಕ್ಟ್ ಡೆಬಿಟ್ ಕಾರ್ಡ್ ಗಳ ನಗದು ವಹಿವಾಟಿನ ಮಿತಿಯನ್ನು ಪ್ರತಿದಿನ 50,000ರೂ.ನಿಂದ 1ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಹಾಗೆಯೇ ಪಿಒಎಸ್ ಮಿತಿಯನ್ನು ಎರಡು ಲಕ್ಷ ರೂ.ನಿಂದ ಐದು ಲಕ್ಷ ರೂ.ಗೆ ಹೆಚ್ಚಿಸಲಾಗಿದೆ.
ಸದ್ಯ ಕೆನರಾ ಬ್ಯಾಂಕ್ ಡೆಬಿಟ್ ಕಾರ್ಡ್, ಪಿಒಎಸ್ ಹಾಗೂ ಇ-ಕಾಮರ್ಸ್ ವಹಿವಾಟುಗಳ ದೈನಂದಿನ ಮಿತಿಯನ್ನು ಇತ್ತೀಚೆಗೆ ಹೆಚ್ಚಿಸಿದೆ. ಎಟಿಎಂ ದೈನಂದಿನ ವಹಿವಾಟು ಮಿತಿಯನ್ನು 40 ಸಾವಿರ ರೂ.ನಿಂದ 75 ಸಾವಿರ ರೂ.ಗೆ ಕೆನರಾ ಬ್ಯಾಂಕ್ ಹೆಚ್ಚಳ ಮಾಡಿದೆ. ಇನ್ನು ಪಿಒಎಸ್ ಮಿತಿಯನ್ನು ಒಂದು ಲಕ್ಷ ರೂ.ನಿಂದ ಎರಡು ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ.
ಅದಲ್ಲದೆ ಎಸ್ ಬಿಐ ಕೂಡ ತನ್ನ ಗ್ರಾಹಕರ ಖಾತೆಗಳಿಂದ ಇತ್ತೀಚೆಗೆ ಎಟಿಎಂ ಅಥವಾ ಡೆಬಿಟ್ ಕಾರ್ಡ್ ವಾರ್ಷಿಕ ನಿರ್ವಹಣಾ ಶುಲ್ಕ ಕಡಿತಗೊಳಿಸಿದೆ. ಕ್ಲಾಸಿಕ್, ಸಿಲ್ವರ್, ಗ್ಲೋಬಲ್, ಕಾಂಟ್ಯಾಕ್ಟ್ ಲೆಸ್ ಡೆಬಿಟ್ ಕಾರ್ಡ್ ಗಳ ನಿರ್ವಹಣೆಗೆ ಎಸ್ ಬಿಐ 125ರೂ. ವಾರ್ಷಿಕ ನಿರ್ವಹಣಾ ಶುಲ್ಕ ವಿಧಿಸುತ್ತದೆ. ಈ ಸೇವಾ ಶುಲ್ಕಕ್ಕೆ ಶೇ.18ರಷ್ಟು ಜಿಎಸ್ ಟಿ ಅನ್ವಯಿಸುತ್ತದೆ. ಹೀಗಾಗಿ 125ರೂ.ಗೆ ಶೇ.18ರಷ್ಟು ಜಿಎಸ್ ಟಿ ಅಂದರೆ 22.5ರೂ. ಸೇರಿಸಿದ್ರೆ ಒಟ್ಟು 147.5ರೂ. ಕಡಿತಗೊಳಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಈ ಮೇಲಿನಂತೆ ಡೆಬಿಟ್ ಕಾರ್ಡ್ ಬಳಕೆ ಮೇಲೆ ಇಂತಿಷ್ಟು ವಾರ್ಷಿಕ ನಿರ್ವಹಣಾ ಶುಲ್ಕವನ್ನು ವಿಧಿಸಲಾಗಿದೆ ಎಂದು ಗ್ರಾಹಕರಿಗೆ ತಿಳಿಸಿದೆ. ಅದಲ್ಲದೆ ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಕ್ಲಾಸಿಕ್/ಸ್ಟ್ಯಾಂಡರ್ಡ್, ಪ್ಲಾಟಿನಂ, ಬ್ಯುಸಿನೆಸ್ ಹಾಗೂ ಇತರ ಆಯ್ದ ಡೆಬಿಟ್ ಕಾರ್ಡ್ ಗಳ ಮೇಲೆ ವಾರ್ಷಿಕ ನಿರ್ವಹಣಾ ಶುಲ್ಕ ವಿಧಿಸುತ್ತದೆ ಎಂದು ಸಹ ಮಾಹಿತಿ ನೀಡಿದೆ.