ನೀವು ಈ ಉಂಗುರ ಧರಿಸಿದ್ದೀರಾ? ಹಾಗಿದ್ದರೆ ಈ ವಿಚಾರ ತಿಳಿದುಕೊಳ್ಳಲೇಬೇಕು

ಪ್ರತಿಯೊಬ್ಬರೂ ಜೀವನದಲ್ಲಿ ಹಣ, ಐಶ್ವರ್ಯ, ನೆಮ್ಮದಿ ಹಾಗೂ ತಮ್ಮ ವೃತ್ತಿ ಜೀವನ, ವ್ಯಾಪಾರ, ವ್ಯವಹಾರ ಚೆನ್ನಾಗಿ ಇರಬೇಕು. ಖುಷಿಯಿಂದ ಜೀವನ ನಡೆಸಬೇಕು ಅಂತಾನೆ ಅನ್ಕೊಳ್ತಾರೆ ಹೊರತು ಯಾರೂ ಕೂಡ ಇದೆಲ್ಲಾ ಬೇಡ ಕಡುಬಡವನಾಗೇ ಇರುತ್ತೇನೆ ಎಂದು ಬಯಸುವುದಿಲ್ಲ. ಹಾಗೇ ತಮ್ಮ ಏಳಿಗೆಗಾಗಿ ಹಲವರು ಜ್ಯೋತಿಷ್ಯಕ್ಕೆ ಮೊರೆ ಹೋಗ್ತಾರೆ. ವಿವಿಧ ತರಹದ ಹರಳನ್ನು ಧರಿಸುತ್ತಾರೆ.

ಅದರಲ್ಲೂ ಕೆಲವರು ಬೆಳ್ಳಿ ಉಂಗುರ ಒಳಿತು ಎಂದು ಧರಿಸಿದರೆ, ಇನ್ನೂ ಕೆಲವರು ಕೈ ಬೆರಳು ಖಾಲಿ ಎನಿಸುತ್ತದೆ ಎಂದು ಧರಿಸುವವರೂ ಇದ್ದಾರೆ. ಆದರೆ ಈ ಬೆಳ್ಳಿ ಉಂಗುರದ ಪ್ರಯೋಜನ ಹಲವರಿಗೆ ತಿಳಿದಿಲ್ಲ. ಇದನ್ನು ಕೈ ಬೆರಳಲ್ಲಿ ಧರಿಸುವುದರಿಂದ ಹಲವು ಪ್ರಯೋಜನಗಳಿವೆ. ಅವು ಯಾವುದೆಲ್ಲಾ ಎಂಬುದು ಇಲ್ಲಿದೆ.

ಇನ್ನೂ, ಈ ಬೆಳ್ಳಿ ಉಂಗುರವನ್ನು ಧರಿಸುವುದರಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಹಾಗೂ ಜೀವನದಲ್ಲಿ ನೆಮ್ಮದಿ ಇರುತ್ತದೆ. ಗುರು ಮತ್ತು ಚಂದ್ರನ ಪ್ರಭಾವ ಬೆಳ್ಳಿಯ ಮೇಲೆ ಉತ್ತಮವಾಗಿ ಇರುವುದರಿಂದ ಬೆಳ್ಳಿ ಉಂಗುರವನ್ನು ಧರಿಸುವುದು ತುಂಬಾನೇ ಒಳ್ಳೆಯದು ಎಂದು ಹೇಳುತ್ತಾರೆ.

ಹೆಚ್ಚಾಗಿ ಬೆಳ್ಳಿ ಉಂಗುರವನ್ನು ಕೈ ಬೆರಳುಗಳಲ್ಲಿನ ಕಿರುಬೆರಳಿಗೆ ಧರಿಸಲಾಗುತ್ತದೆ. ಹಾಗೇ ಬೆಳ್ಳಿ ದೇಹದ ನೀರಿನ ಅಂಶವನ್ನು ನಿಯಂತ್ರಿಸುತ್ತದೆ. ಜೊತೆಗೆ ಕಫ, ಪಿತ್ತ, ವಾತಗಳಂತಹ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ. ಹಾಗಾಗಿ ಬೆಳ್ಳಿಗೆ ಅದರದೇ ಆದ ವಿಶೇಷವಾದ ಪ್ರಾಮುಖ್ಯತೆ ಇದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬೆಳ್ಳಿ ಮನಸ್ಸನ್ನು ಗಟ್ಟಿ ಹಾಗೂ ತೀಕ್ಷ್ಣಗೊಳಿಸುತ್ತದೆ ಎನ್ನಲಾಗಿದೆ. ಜೊತೆಗೆ ಮನಸ್ಸನ್ನು ಕೇಂದ್ರೀಕರಿಸುತ್ತದೆ. ಹಾಗೇ ಜಾತಕದಲ್ಲಿ ಚಂದ್ರನ ಕೆಟ್ಟ ಪರಿಣಾಮಗಳನ್ನು ದೂರು ಮಾಡಲು ಜ್ಯೋತಿಷಿಗಳು ಬೆಳ್ಳಿಯನ್ನು ಧರಿಸುವಂತೆ ಸಲಹೆ ನೀಡುತ್ತಾರೆ. ಹಾಗೇ ಚಿಕ್ಕ ಬೆರಳಿಗೆ ಶುದ್ಧ ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ಚಂದ್ರನ ಕೆಟ್ಟ ಪರಿಣಾಮಗಳು ಶುಭ ಪರಿಣಾಮಗಳಾಗಿ ಮಾರ್ಪಡುತ್ತವೆ. ಇದರಿಂದ ಮನಸ್ಸಿನಲ್ಲಿ ಸಮತೋಲನ ಉಂಟಾಗಿ ನಿಮಗೆ ಧನ ಪ್ರಾಪ್ತಿಯಾಗುತ್ತದೆ.

ಇನ್ನೂ, ಭಾವನಾತ್ಮಕ ಸಮಸ್ಯೆ ಇರುವವರು ಈ ಬೆಳ್ಳಿಯನ್ನು ಧರಿಸುವುದು ಒಳಿತಲ್ಲ. ಹಾಗೇ ರಾಶಿಗಳಲ್ಲಿ, ವೃಶ್ಚಿಕ, ಮೀನ ಮತ್ತು ಕರ್ಕಾಟಕ ರಾಶಿಯವರಿಗೆ ಬೆಳ್ಳಿಯನ್ನು ಧರಿಸುವುದು ಶುಭ. ಇನ್ನೂ, ಸಿಂಹ, ಧನು ಮತ್ತು ಮೇಷ ರಾಶಿಯವರಿಗೆ ಅನುಕೂಲಕರ ಅಲ್ಲ ಎಂದು ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ. ಹಾಗೇ ಬೆಳ್ಳಿಯ ಸರವನ್ನು ಮೊದಲು ಗಂಗಾಜಲದಿಂದ ಶುದ್ಧೀಕರಿಸಿ. ನಂತರ ಅದನ್ನು ಕುತ್ತಿಗೆಗೆ ಧರಿಸಬೇಕು. ಇದರಿಂದ ಹಾರ್ಮೋನುಗಳು ಕೂಡ ಸಮತೋಲನದಲ್ಲಿ ಇರುತ್ತದೆ.

Leave A Reply

Your email address will not be published.