ಬೆಳ್ತಂಗಡಿ : ಜೀರ್ಣೋದ್ಧಾರ ಕಾರ್ಯ ಸಂದರ್ಭ ಪತ್ತೆಯಾಯಿತು ಪುರಾತನ ಶಿವಲಿಂಗ | ಅಚ್ಚರಿಗೊಂಡ ಜನಸ್ತೋಮ
ಬೆಳ್ತಂಗಡಿ: ತಾಲೂಕಿನ ಉಜಿರೆ ಸಮೀಪದ ಪೆರ್ಲ ಎಂಬಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಪುರಾತನ ಶಿವಲಿಂಗ ಪತ್ತೆಯಾದ ಘಟನೆ ನಡೆದಿದೆ. ಇಲ್ಲಿನ ಪುರಾತನ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ನವೀಕರಣಕ್ಕಾಗಿ ಅಷ್ಟಮಂಗಲ ಪ್ರಶ್ನೆ ಇಟ್ಟ ಸಂದರ್ಭದಲ್ಲಿ ದೇವಸ್ಥಾನದ ಕುರುಹು ಇದ್ದ ಸ್ಥಳದಲ್ಲಿ ಪುರಾತನ ಶಿವಲಿಂಗವೊಂದು ಪತ್ತೆಯಾಗಿದೆ.
ಡಿ.16ರಂದು ನೆಲ್ಯಾಡಿಯ ದೈವಜ್ಞರಾದ ಶ್ರೀಧರ ಗೋರೆಯವರ ನೇತೃತ್ವದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಈ ಪರಿಸರದಲ್ಲಿ ಶಿವನ ಸಾನಿಧ್ಯ ಇರುವ ಬಗ್ಗೆ ಗೋಚರಿಸುತ್ತಿವೆ ಎಂದರು.
ಅವರು ತಿಳಿಸಿದ ಜಾಗದಲ್ಲಿ ಮಣ್ಣು ಅಗೆದಾಗ ಪುರಾತನ ಶಿವಲಿಂಗ ಇರುವುದು ಪತ್ತೆಯಾಗಿದೆ. ಜೀರ್ಣೋದ್ಧಾರ ಸಂದರ್ಭದಲ್ಲೇ ಶಿವಲಿಂಗ ಪತ್ತೆಯಾಗಿರುವುದು, ಸಾನಿಧ್ಯಕ್ಕೆ ಶಕ್ತಿ ಬಂದಿದೆ ಎಂದು ಸ್ಥಳೀಯರು ಹೇಳುತ್ತಾರೆ.