ಕುರ್ಕುರೆ ಪ್ಯಾಕೆಟ್ ನಲ್ಲಿ 500ರೂ.ನೋಟು | ಆಶ್ಚರ್ಯ ಗೊಂಡ ಜನ | ಖರೀದಿಗೆ ಮುಗಿಬಿದ್ದ ಜನಸ್ತೋಮ
ವಾರೆವಾಹ್! ಕುರ್ಕುರೆ ಬೇಕೇ ಕುರ್ಕುರೆ ಯಾರಿಗುಂಟು ಯಾರಿಗಿಲ್ಲ. ರಾಯಚೂರಿನಲ್ಲಿ ಕುರ್ಕುರೆಗಾಗಿ ಮುಗುಬಿದ್ದ ಜನರು. ಹೌದು ಕುರ್ಕುರೆ ಪ್ಯಾಕೆಟ್ಗಳಲ್ಲಿ ಗರಿಗರಿ 500 ರೂ. ನೋಟುಗಳು ಪತ್ತೆಯಾಗಿವೆ. ಅದೂ ಒಂದೆರಡಲ್ಲ ರಾಶಿ ರಾಶಿಯಂತೆ.
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಹುನೂರು ಗ್ರಾಮದಲ್ಲಿ 5 ರೂಪಾಯಿಯ ಕುರ್ಕುರೆ ಪ್ಯಾಕೆಟ್ಗಳಲ್ಲಿ 500 ರೂಪಾಯಿಯ ಅಸಲಿ ನೋಟ್ಗಳು ಕಂಡುಬಂದಿವೆ. ಹೌದು ಮಾಕ್ಸ್ ವಿಟ್, ಪಂಜಾಬ್ ಸೇರಿದಂತೆ ವಿವಿಧ ಕಂಪನಿಯ ಪ್ಯಾಕೆಟ್ಗಳಲ್ಲಿ ಇವು ಕಂಡುಬಂದಿವೆ. ಕೆಲವು ಪ್ಯಾಕೆಟ್ಗಳ ಒಳಗಡೆ 5-6 ನೋಟ್ಗಳು ಸಹ ಪತ್ತೆಯಾಗಿವೆ.
ಸದ್ಯ ಹುನೂರು ಗ್ರಾಮದಲ್ಲಿರುವ ಬಹುತೇಕ ಅಂಗಡಿಗಳಲ್ಲಿ ಈ ಘಟನೆ ನಡೆದಿದೆ. ಇದರಿಂದ ಆಸೆಗೆ ಬಿದ್ದಿರುವ ಗ್ರಾಮಸ್ಥರು 500 ರೂ. ಸಿಗುವ ಕುರ್ಕುರೆ ಪ್ಯಾಕೆಟ್ಗಳಿಗಾಗಿ ಮುಗಿಬಿದ್ದಿದ್ದಾರೆ. ಮೂರು ದಿನಗಳಲ್ಲಿ ಗ್ರಾಮದಲ್ಲಿ ಕುರ್ಕುರೆ ಸ್ಟಾಕ್ ಖಾಲಿಯಾಗಿದೆ. ಇನ್ನಷ್ಟು ಕುರ್ಕುರೆ ತರುವಂತೆ ಅಂಗಡಿಯವರಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಅದಲ್ಲದೆ ಇದುವರೆಗೂ ಹೀಗೆ ಪತ್ತೆಯಾದ ನೋಟುಗಳ ಮೌಲ್ಯ ಲಕ್ಷಾಂತರ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.
ಮಾಹಿತಿ ಪ್ರಕಾರ ಒಬ್ಬರಿಗೇ ಸುಮಾರು 12,500 ರೂಪಾಯಿ ಕೂಡ ಇದರಲ್ಲಿ ಸಿಕ್ಕಿದೆ ಎನ್ನಲಾಗಿದೆ. ಒಟ್ಟಿನಲ್ಲಿ ರಾಯಚೂರಿನಲ್ಲಿ ಕುರ್ಕುರೆ ಹವಾ ಬಹಳ ಜೋರಾಗಿತ್ತು ಎಂಬ ಸುದ್ದಿ ಎಲ್ಲೆಡೆ ಹರಡಿದೆ.