Health Tips : ಪಪ್ಪಾಯಿ ಹಣ್ಣುಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಿ, ಈ ಸಮಸ್ಯೆಗಳಿಂದ ದೂರ ಇರಿ!
ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಅಸಂಖ್ಯಾತ ಪ್ರಯೋಜನಗಳಿರುತ್ತವೆ, ಏಕೆಂದರೆ ಆ ಎಲ್ಲಾ ಪೋಷಕಾಂಶಗಳು ಹಣ್ಣುಗಳಲ್ಲಿ ಇರುತ್ತವೆ. ಪಪ್ಪಾಯಿ ಕೂಡ ಉತ್ತಮ ರುಚಿಯನ್ನು ಮಾತ್ರ ಹೊಂದಿರದೇ ಇದರಲ್ಲಿ ಉತ್ತಮವಾದ ಪೌಷ್ಟಿಕಾಂಶ ಗುಣವೂ ಇದೆ. ಕೆಲವು ಹಣ್ಣುಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಆಗ ದೇಹಕ್ಕೆ ಹೆಚ್ಚಿನ ಪ್ರಯೋಜನಗಳು ಲಭಿಸಬಹುದು.ಅವುಗಳಲ್ಲಿ ಪಪ್ಪಾಯಿ ಕೂಡ ಒಂದು. ಪಪ್ಪಾಯಿ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಾಗಳಿವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿಯನ್ನು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಗುಣಪಡಿಸಬಹುದಾಗಿದ್ದೂ, ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ನಿಯಾಸಿನ್, ಮೆನ್ನೀಸಿಯಮ್, ಕ್ಯಾರೋಟಿನ್, ಫೈಬರ್, ಫೋಲೇಟ್, ಪೊಟ್ಯಾಸಿಯಮ್, ತಾಮ್ರ, ಕ್ಯಾಲ್ಸಿಯಂ ಅಂಶಗಳು ಸಹ ಇವೆ. ಇದು ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುವ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ.
ಮಲಬದ್ಧತೆ:- ಪಪ್ಪಾಯಿಯಲ್ಲಿ ಫೈಬರ್ ಸಮೃದ್ಧವಾಗಿರುವುದರಿಂದ, ಇದು ಮಲವನ್ನು ಮೃದುಗೊಳಿಸುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮಲಬದ್ಧತೆ ಸಮಸ್ಯೆ ಅನುಭವಿಸುವವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿಯನ್ನು ತೆಗೆದುಕೊಂಡರೆ, ಅದು ತುಂಬಾ ಪ್ರಯೋಜನಕಾರಿಯಾಗಿದೆ.
ತೂಕ ಇಳಿಸಲು:- ನೀವೆನಾದರೂ ತೂಕ ಹೆಚ್ಚಳದೊಂದಿಗೆ ಹೆಣಗಾಡುತ್ತಿದ್ದರೆ ಮತ್ತು ತೂಕ ಇಳಿಸಿಕೊಳ್ಳಲು ಬಯಸಿದರೆ, ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿಯನ್ನು ತಿನ್ನಬೇಕು. ಏಕೆಂದರೆ ಪಪ್ಪಾಯಿಯಲ್ಲಿ ಕಡಿಮೆ ಕ್ಯಾಲೋರಿಗಳು ಮತ್ತು ಫೈಬರ್ ಅಂಶ ಅಧಿಕವಾಗಿರುತ್ತದೆ. ಇದೇ ಕಾರಣಕ್ಕೆ ಇದು ತೂಕವನ್ನು ಕಡಿಮೆ ಮಾಡಲು ನೆರವಾಗುತ್ತದೆ.
ಹೃದಯ:- ಪಪ್ಪಾಯಿಯಲ್ಲಿ ಫೈಬರ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಗಳು ಸಮೃದ್ಧವಾಗಿದ್ದು, ಇದು ಹೃದ್ರೋಗಗಳನ್ನು ದೂರವಿರಿಸುತ್ತವೆ. ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡಲು, ವೈದ್ಯರು ಪೊಟ್ಯಾಸಿಯಮ್ ಅನ್ನು ಹೆಚ್ಚು ತೆಗೆದುಕೊಳ್ಳಲು ಶಿಫಾರಸ್ಸು ಮಾಡುತ್ತಾರೆ. ವಿಟಮಿನ್ ಬಿ, ಸಿ, ಇ, ಬೀಟಾ-ಕ್ಯಾರೋಟಿನ್ ಮತ್ತು ಲೈಕೋಪೀನ್ ನಂತಹ ಪೋಷಕಾಂಶಗಳಿಂದ ಸಮೃದ್ಧವಾದ ಪಪ್ಪಾಯಿ ಅಪಧಮನಿಗಳೊಳಗಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
ಚರ್ಮ:- ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿಯನ್ನು ಸೇವಿಸುವುದು ಸಹ ಚರ್ಮಕ್ಕೆ ತುಂಬಾ ಒಳ್ಳೆಯದು. ಏಕೆಂದರೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿಯನ್ನು ಸೇವಿಸುವುದರಿಂದ ವಿಷವನ್ನು ತೆಗೆದುಹಾಕುತ್ತದೆ ಮತ್ತು ರಕ್ತವನ್ನು ಶುದ್ದೀಕರಿಸುತ್ತದೆ, ಇದು ಚರ್ಮಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ದೂರವಿಡುತ್ತದೆ ಮತ್ತು ಚರ್ಮವನ್ನು ಸುಧಾರಿಸುತ್ತದೆ.
ಋತುಚಕ್ರ:- ಸಾಮಾನ್ಯ ವಾಗಿ ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ನೋವು ಉಂಟಾಗುತ್ತದೆ. ಈ ಸಮಯದಲ್ಲಿ ಪಪ್ಪಾಯಿಯನ್ನು ಸೇವಿಸುವುದರಿಂದ ಮುಟ್ಟಿನ ನೋವು ಮತ್ತು ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ. ಏಕೆಂದರೆ ಪಪ್ಪಾಯಿಯಲ್ಲಿ ಸಾಕಷ್ಟು ಉರಿಯೂತ ಶಮನಕಾರಿ ಗುಣಗಳಿವೆ, ಇದು ಮುಟ್ಟಿನ ನೋವು ಮತ್ತು ಹೊಟ್ಟೆ ಉಬ್ಬರವನ್ನು ಸುಲಭವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ರೋಗ ನಿರೋಧಕ ಶಕ್ತಿ:- ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿಯನ್ನು ತೆಗೆದುಕೊಂಡರೆ, ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಏಕೆಂದರೆ ಪಪ್ಪಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ವೈರಸ್ ಗಳು ಮತ್ತು ಬ್ಯಾಕ್ಟಿರಿಯಾಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ.
ಕೊಲೆಸ್ಟ್ರಾಲ್ :- ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸಬಹುದು. ಎರಡು ಆಹಾರಗಳು ಫೈಬರ್ ಅನ್ನು ಹೊಂದಿರುವುದರಿಂದ ಗರಿಷ್ಠ ಪ್ರಯೋಜನಗಳನ್ನು ಪಡೆಯಲು ನಿಮ್ಮ ಬೇಯಿಸಿದ ಓಟ್ ಮೀಲ್ ಗೆ ಕತ್ತರಿಸಿದ ಪಪ್ಪಾಯಿಯನ್ನು ಸೇರಿಸಿ, ಇದು ದೇಹದಿಂದ ಕಡಿಮೆ ಸಾಂದ್ರತೆಯ ಲಿಪೋಪ್ರೋಟೀನ್ ಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.