ಅಡುಗೆ ಮನೆಯಲ್ಲಿರೋ ಈ ಐದು ವಸ್ತು ಉಪಯೋಗಿಸಿ ಒಂದೇ ವಾರದಲ್ಲಿ ಕಪ್ಪು ಕಂಕುಳ ದೂರ ಮಾಡಿ!!
ತೋಳಿಲ್ಲದ ಉಡುಪು ಧರಿಸುವ ಮೂಲಕ ಅಂದವಾಗಿ ಕಾಣಬೇಕು ಎಂಬ ಆಸೆ ಎಷ್ಟೋ ಹೆಣ್ಣುಮಕ್ಕಳದ್ದೂ .ಇದು ಸಹಜವೇ. ಆದರೆ ಕೆಲವರಿಗೆ ಕಂಕುಳ ಕಪ್ಪಿನಿಂದಾಗಿ ತೋಳಿಲ್ಲದ ಡ್ರೆಸ್ ಧರಿಸಲು ಹಿಂಜರಿಕೆ. ಈ ಸಮಸ್ಯೆಗೆ ಕಾರಣಗಳು ಹಲವು. ಕಂಕುಳಿನ ಕಪ್ಪು ಕಲೆಗಳಿಂದಾಗಿ ಅದು ಸಾರ್ವಜನಿಕವಾಗಿ ಮುಜುಗರವನ್ನುಂಟು ಮಾಡುತ್ತದೆ. ಈ ಕಪ್ಪು ಕಲೆಗಳಿಂದ ಮುಕ್ತಿ ಪಡೆಯುವುದು ಹೇಗೆ ಎಂದು ಹಲವು ಬಾರಿ ಯೋಚಿಸಿರುತ್ತಾರೆ. ಕೆಲವರು ಅಂಗಡಿಯಿಂದ ಕೆಲ ಉತ್ಪನ್ನಗಳನ್ನು ಖರೀದಿ ಮಾಡಿ ಪ್ರಯತ್ನವನ್ನು ಮಾಡುತ್ತಾರೆ. ಆದರೆ ಇನ್ನು ಮುಂದೆ ಆ ಚಿಂತೆಯನ್ನು ಬಿಡಿ. ಏಕೆಂದರೆ ಮನೆಯಲ್ಲೇ ಇದಕ್ಕೆ ಸರಳವಾದ ಮದ್ದಿದೆ.
ಅಲೋವೆರಾ:-ಮೊದಲನೆಯದಾಗಿ ಮನೆಯ ಕುಂಡಗಳಲ್ಲಿ ಬೆಳೆಯುವ ಅಲೋವೆರಾ ಎಲೆಗಳ ಜೆಲ್ ತೆಗೆದು ದಿನಕ್ಕೆರಡು ಬಾರಿ ಕಂಕುಳಿಗೆ ಹಚ್ಚಿದರೆ ಸಾಕು. ಕೆಲವೇ ದಿನಗಳಲ್ಲಿ ವ್ಯತ್ಯಾಸ ಗೋಚರಿಸುತ್ತದೆ. ಅಲೋವೆರಾ ಜೆಲ್ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಅದಕ್ಕಾಗಿಯೇ ಇದನ್ನು ಅನೇಕ ಸೌಂದರ್ಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ.
ಕಾಫಿ ಮತ್ತು ಜೇನುತುಪ್ಪ:- ಒಂದು ಪಾತ್ರೆಯಲ್ಲಿ ಕಾಫಿ ಮತ್ತು ಜೇನುತುಪ್ಪವನ್ನು ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದನ್ನು ನಿಮ್ಮ ಕಪ್ಪು ಅಂಡರ್ ಆರ್ಮ್‌ಗಳ ಮೇಲೆ ಹಚ್ಚಿ. ಸುಮಾರು 10 ರಿಂದ 15 ನಿಮಿಷಗಳ ಕಾಲ ಬಿಡಿ. ಇದು ಚರ್ಮದ ಸತ್ತ ಜೀವಕೋಶಗಳನ್ನು ತೆಗೆದುಹಾಕುತ್ತದೆ ಮತ್ತು ಆರ್ಮ್ಪಿಟ್ಗಳನ್ನು ಸ್ವಚ್ಛಗೊಳಿಸುತ್ತದೆ.
ಆಲೂಗೆಡ್ಡೆ:- ಚರ್ಮದ ಯಾವುದೇ ಭಾಗ ಕಪ್ಪಾಗಿರಲಿ, ಅಲ್ಲಿ ಅಲೂಗೆಡ್ಡೆ ರಸ ಹಚ್ಚುವುದರಿಂದ ಕಪ್ಪಾದ ಭಾಗ ನಿಧಾನಕ್ಕೆ ಬೆಳ್ಳಗಾಗುವುದಲ್ಲದೇ ಚರ್ಮದ ಹೊಳಪು ಹೆಚ್ಚುತ್ತದೆ. ಆಲೂಗೆಡ್ಡೆಯನ್ನು ಎರಡು ಭಾಗ ಮಾಡಿ ಅದನ್ನು ಕಂಕುಳಿಗೆ ಉಜ್ಜಬಹುದು ಅಥವಾ ಆಲೂಗೆಡ್ಡೆಯ ಸಿಪ್ಪೆ ತೆಗೆದು ಅದನ್ನು ಅರೆದು ರಸ ತೆಗೆದು ಹಚ್ಚಬಹುದು. ಅದನ್ನು 15 ರಿಂದ 20 ನಿಮಿಷಗಳ ಕಾಲ ಹಾಗೇ ಬಿಟ್ಟು ಒಣಗಿದ ಮೇಲೆ ತೊಳೆಯಬೇಕು. ಪ್ರತಿದಿನ ಹೀಗೆ ಮಾಡುವುದರಿಂದ ಕಪ್ಪು ಕಲೆ ನಿವಾರಣೆಯಾಗುತ್ತದೆ.
ಅರಿಶಿನ ಮತ್ತು ನಿಂಬೆ:- ಇವೆರಡರ ಸಂಯೋಜನೆಯು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ನೀವು ಒಂದು ಬಟ್ಟಲಿನಲ್ಲಿ ಒಂದು ಚಮಚ ಅರಿಶಿನ ಮತ್ತು ನಿಂಬೆ ರಸವನ್ನು ಹಿಂಡಿ ಮತ್ತು ಅದನ್ನು ಮಿಶ್ರಣ ಮಾಡಿ. ಪೇಸ್ಟ್ ಸಿದ್ಧವಾದಾಗ, ಅದನ್ನು ಅಂಡರ್ ಆರ್ಮ್ಸ್ ಮೇಲೆ ಅನ್ವಯಿಸಿ. ಒಣಗಿದ ನಂತರ, ಅದನ್ನು ಶುದ್ಧ ನೀರಿನಿಂದ ತೊಳೆಯಿರಿ.
ಸೌತೆಕಾಯಿ:- ಸೌತೆಕಾಯಿಯಲ್ಲಿ ಬ್ಲೀಚಿಂಗ್ ಅಂಶವಿದ್ದು ಇದು ಚರ್ಮದ ಉಷ್ಣಾಂಶವನ್ನು ಕಡಿಮೆ ಮಾಡುವ ಜೊತೆಗೆ ಕಾಂತಿಯನ್ನು ಹೆಚ್ಚಿಸುತ್ತದೆ. ಸೌತೆಕಾಯಿಯನ್ನು ಅರೆದು ರಸ ತೆಗೆಯಿರಿ. ನಂತರ ಹತ್ತಿಯನ್ನು ರಸದಲ್ಲಿ ಅದ್ದಿ ಕಂಕುಳಿನ ಸುತ್ತಲೂ ಹಚ್ಚಿ. ಈ ರೀತಿ ಪ್ರತಿದಿನ ಮಾಡುವುದರಿಂದ ಕಂಕುಳ ಹೊಳಪು ಹೆಚ್ಚುವುದಲ್ಲದೇ ಕಂಕುಳಿನಿಂದ ಬರುವ ದುರ್ವಾಸನೆಯೂ ಕಡಿಮೆಯಾಗುತ್ತದೆ.