ರಾಯಲ್ ಎನ್‌ಫೀಲ್ಡ್‌ಗೆ ಎದುರಾಳಿಯಾಗಿದ್ದ ಹೀರೋದ ಈ ಜನಪ್ರಿಯ ಬೈಕ್ ಮಾರಾಟ ಸ್ಥಗಿತ .!
ರಾಯಲ್ ಎನ್‌ಫೀಲ್ಡ್‌ಗೆ ಟಕ್ಕರ್ ನೀಡುತ್ತಿದ್ದ ಹೀರೋದ ಈ ಜನಪ್ರಿಯ ಬೈಕ್ ಮಾರಾಟ ಸ್ಥಗಿತಗೊಳಿಸಿದೆ. ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿ ತನ್ನ ಹೀರೋ ಎಕ್ಸ್‌ಪಲ್ಸ್ ಸರಣಿಯ ಮೂಲಕ ಪ್ರಸಿದ್ದಿ ಪಡೆದಿದ್ದ ಡ್ಯುಯಲ್-ಸ್ಪೋರ್ಟ್ಸ್ ಮೋಟಾರ್ ಸೈಕಲ್‌ಗಳನ್ನು ಮಾರಾಟ ಮಾಡುತ್ತಿತ್ತು. ಆದರೆ ಇದೀಗ ಈ ಪೈಕಿ ಒಂದರ ಮಾರಾಟವನ್ನು ಕಂಪನಿ ಸ್ಥಗಿತಗೊಳಿಸಿದೆ.
Hero MotoCorp ಅಗ್ಗದ ಮತ್ತು ಹೆಚ್ಚಿನ ಮೈಲೇಜ್ ನೀಡುವ ಬೈಕ್‌ಗಳನ್ನು ತಯಾರಿಸುವಲ್ಲಿ ಪ್ರಸಿದ್ದಿ ಪಡೆದಿದೆ. ಈ ಕಂಪನಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಗೆ ಟಕ್ಕರ್ ನೀಡುವಂಥಹ ಆಫ್ ರೋಡಿಂಗ್ ಬೈಕ್‌ಗಳನ್ನು ಕೂಡ ಮಾರುಕಟ್ಟೆಗೆ ಪರಿಚಯ ಮಾಡಿಸಿದೆ. ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿ ತನ್ನ ಹೀರೋ ಎಕ್ಸ್‌ಪಲ್ಸ್ ಸರಣಿಯ ಮೂಲಕ ಡ್ಯುಯಲ್-ಸ್ಪೋರ್ಟ್ಸ್ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡುತ್ತದೆ. ಈ ಸೀರೀಸ್ ಅಡಿಯಲ್ಲಿ Xpulse 200 2V, 200 4V ಎಂಬ ಎರಡು ವೆರಿಯೇಂಟ್ ಗಳನ್ನೂ ಈ ಮೊದಲು ಮಾರುಕಟ್ಟೆಗೆ ಪರಿಚಯಿಸಿತ್ತು. ಆದರೆ ಇದೀಗ ಈ ಪೈಕಿ ಒಂದರ ಮಾರಾಟವನ್ನು ಕಂಪನಿ ಸ್ಥಗಿತಗೊಳಿಸಿದೆ.
Xpulse 200 2V ಬೈಕ್ ಈಗ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಕಂಡು ಬರುತ್ತಿಲ್ಲ. Xpulse 200 4Vಯನ್ನು ಮಾರುಕಟ್ಟೆಗೆ ಪರಿಚಯಿಸಿದ ಬಳಿಕ 2V ಮಾದರಿ ಸ್ಥಗಿತವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಹಾಗೆ ಆಗಿರಲಿಲ್ಲ. 200 4Vಗೆ ಹೋಲಿಕೆ ಮಾಡಿದರೆ Xpulse 200 2V ಬೆಲೆ 10,000 ರೂಪಾಯಿಗಳಷ್ಟು ಕಡಿಮೆಯಾಗಿದೆ. Xpulse 200 2Vಯ ಬೆಲೆ 1.27 ಲಕ್ಷ ರೂ. ಆಗಿದ್ದರೆ 200 4V ಬೆಲೆ ರೂ. 1.37 ಲಕ್ಷ ಆಗಿದೆ.
Hero Xpulse 200 199.6cc, ಸಿಂಗಲ್-ಸಿಲಿಂಡರ್, ಏರ್/ಆಯಿಲ್-ಕೂಲ್ಡ್, ಎರಡು-ವಾಲ್ವ್ ಎಂಜಿನ್ ನೊಂದಿಗೆ ಬರುತ್ತಿತ್ತು. ಈ ಎಂಜಿನ್ 17.8bhp ಪವರ್ ಮತ್ತು 16.45Nm ಟಾರ್ಕ್ ಅನ್ನು ಜನರೇಟ್ ಮಾಡುವ ಜೊತೆಗೆ ಎಂಜಿನ್ ಅನ್ನು 5 ಸ್ಪೀಡ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿತ್ತು. ಅಲ್ಲದೆ, ಇದರ ಡಿಜಿಟಲ್ ಡಿಸ್ಪ್ಲೇ ಕಾಲ್ ಅಲರ್ಟ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಗೇರ್ ಇಂಡಿಕೇಟರ್, ಇಕೋ ಮೋಡ್ ಮತ್ತು ಡ್ಯುಯಲ್ ಟ್ರಿಪ್ ಮೀಟರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿತ್ತು .ಈ ಬೈಕ್ ನ ಬೈಕ್‌ನ ತೂಕ 157ಕೆ.ಜಿ ಯಷ್ಟಿತ್ತು . ಮೋಟಾರ್‌ಸೈಕಲ್ ನ್ಯಾವಿಗೇಷನ್ ಮತ್ತು ಕಾಲ್ ಅಲರ್ಟ್ ಗೆ ಬ್ಲೂಟೂತ್ ಸಂಪರ್ಕ, ಪೂರ್ಣ-ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ.
ಅಲ್ಲದೆ, ಈ ಮಾದರಿಯು 21-ಇಂಚಿನ ಫ್ರಂಟ್ ಮತ್ತು 18-ಇಂಚಿನ ರಿಯರ್ ವ್ಹೀಲ್ ಅನ್ನು ಒಳಗೊಂಡಿದೆ. ಇದನ್ನು ಆಫ್-ರೋಡಿಂಗ್ ಗೆ ಸರಿ ಹೊಂದುವಂತೆ ಮಾಡುವ ನಿಟ್ಟಿನಲ್ಲಿ ಹೆಚ್ಚಿನ ಹ್ಯಾಂಡಲ್‌ಬಾರ್, ಸಿಂಗಲ್ ಪೀಸ್ ಸೀಟ್, ಎಕ್ಸಾಸ್ಟ್ ಮತ್ತು 14-ಲೀಟರ್ ಇಂಧನ ಟ್ಯಾಂಕ್ ಅನ್ನು ನೀಡಲಾಗಿದೆ. ಬೈಕ್ ನ ಸೀಟ್ ಎತ್ತರ 823 ಎಂಎಂ ಮತ್ತು ಗ್ರೌಂಡ್ ಕ್ಲಿಯರೆನ್ಸ್ 220 ಎಂಎಂ ಆಗಿದ್ದು, ಎರಡೂ ವ್ಹೀಲ್ ಗಳಲ್ಲಿ ಡಿಸ್ಕ್ ಬ್ರೇಕ್ ಗಳನ್ನು ಮತ್ತು ಸಿಂಗಲ್ ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ. ಸಿಂಗಲ್ ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ.