DIY Hair Mask: 8 ಹೇರ್ಮಾಸ್ಕ್ ನ್ನು ಮೊಸರಿನಿಂದ ನೀವೇ ಮಾಡಿ | ಸಿಲ್ಕ್ ಕೂದಲು ನಿಮ್ಮದಾಗಿಸಿ
ನಮ್ಮ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕೂದಲಿನ ಪಾತ್ರ ಬಹಳ ಮುಖ್ಯವಾದುದ್ದೂ. ಆದರೆ ಈಗಿನ ಈ ಜಂಜಾಟದ ಬದುಕಿನಿಂದಾಗಿ ಕಿರಿಯರಿಂದ ಹಿಡಿದು ಹಿರಿಯರವರೆಗೂ ಕೂದಲಿನ ಸಮಸ್ಯೆ ಒಂದಲ್ಲಾ ಒಂದು ಇದ್ದದ್ದೇ. ಕೂದಲ ಆರೈಕೆ ಮಾಡುವುದು ನಿಜಕ್ಕೂ ಬಹಳ ಕಷ್ಟಕರ. ಕೂದಲಿನ ಆರೈಕೆಗಾಗಿ ಕೂದಲನ್ನು ಬುಡದಿಂದ ಬಲಪಡಿಸಲು ಹಲವಾರು ಹೇರ್‌ಪ್ಯಾಕ್‌ನ್ನು ಬಳಸುತ್ತಾರೆ. ಹೇರ್ ಮಾಸ್ಕ್ ನಿಮ್ಮ ಕೂದಲು ಉದುರುವ ಸಮಸ್ಯೆಗೆ ಪರಿಹಾರ ನೀಡುತ್ತದೆ. ನಿಮ್ಮ ಅಡುಗೆಮನೆಯಲ್ಲಿ ಕೂದಲನ್ನು ಬಲಪಡಿಸಲು ಸಹಾಯ ಮಾಡುವ ಹಲವಾರು ಸಾಮಾಗ್ರಿಗಳಿವೆ. ಇವುಗಳಲ್ಲಿ ಮೊಸರು ಕೂಡಾ ಒಂದು. ಮೊಸರೊಂದಿದ್ದರೆ ಸಾಕು ನಾನ ಬಗೆಯ ಹೇರ್ ಮಾಸ್ಕ್ ಮನೆಯಲ್ಲೆ ತಯಾರಗುತ್ತೆ!!
ಹೌದು, ಮೊಸರನ್ನು ಕೂದಲಿಗೆ ಬಳಸುವುದರಿಂದ ಕೂದಲಿನ ಪೋಷಣೆಗೆ ಸಹಾಯ ಮಾಡುತ್ತದೆ. ಅಲ್ಲದೆ, ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲದ ಉಪಸ್ಥಿತಿಯು ನೆತ್ತಿಯನ್ನು ಪೋಷಿಸುತ್ತದೆ ಮತ್ತು ಆ ಮೂಲಕ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ತಲೆಹೊಟ್ಟು ಸೇರಿದಂತೆ ಹಲವು ಕೂದಲಿನ ಸಮಸ್ಯೆ ನಿವಾರಣೆಗೆ ಇದು ಸಹಕಾರಿಯಾಗಿದೆ. ಮೊಸರಿನಿಂದ ತಯಾರಾಗುವ ಹೇರ್ ಮಾಸ್ಕ್ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಮೊಸರು ಮತ್ತು ನಿಂಬೆಯ ಮ್ಯಾಜಿಕ್ ಬಗ್ಗೆ ಹೇಳ್ಬೇಕು ಅಂತಾನೇ ಇಲ್ಲಾ. ಸ್ವಲ್ಪ ಮೊಸರಿಗೆ, ಅರ್ಧ ನಿಂಬೆಹಣ್ಣು ಹಾಕಿ ಮಿಶ್ರಣ ಮಾಡಿ,ಕೂದಲಿಗೆ ಹಚ್ಚಿ. ಇದರಿಂದ ನಿಮ್ಮ ಕೂದಲ ಸಮಸ್ಯೆ ದೂರವಾಗುವುದು.
ಮೊಟ್ಟೆ ಮತ್ತು ಮೊಸರು:- ಅರ್ಧ ಕಪ್ ಮೊಸರು ತೆಗೆದುಕೊಂಡು, ಅದಕ್ಕೆ ಮೊಟ್ಟೆಯ ಹಳದಿ ಭಾಗವನ್ನು ಹಾಕಿ ಮಿಶ್ರಣ ಮಾಡಿ. ನಿಮಗೆ ಬೇಕಾದ ಹದಕ್ಕೆ ಪೇಸ್ಟ್ ತಯಾರಿಸಿಕೊಂಡು ತಲೆಗೆ ಹಚ್ಚಿ, ಸುಮಾರು 1 ಗಂಟೆಯ ನಂತರ ತಲೆಸ್ನಾನ ಮಾಡಿ.
4 ಚಮಚ ಮೊಸರು, ಒಂದು ಚಮಚ ಮೆಂತ್ಯ ಪುಡಿ ಮತ್ತು 3 ಚಮಚ ಈರುಳ್ಳಿ ರಸವನ್ನು ಒಂದು ಬಟ್ಟಲಿನಲ್ಲಿ ಹಾಕಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ತಲೆಗೆ ಸರಿಯಾಗಿ ನೆತ್ತಿಯ ಮೇಲೆ ಮಾಸ್ಕ್ ರೀತಿ ಹಚ್ಚಿ ಬಿಡಿ. ಅರ್ಧ ಗಂಟೆಯ ನಂತರ ತೊಳೆಯಿರಿ.
ಅರ್ಧ ಕಪ್ ಮೊಸರಿಗೆ, ಅರ್ಧ ಆವಕಾಡೋ ಪೇಸ್ಟ್ ಮಾಡಿಕೊಂಡು ಮಿಶ್ರಣ ಮಾಡಿ. ಇದಕ್ಕೆ 1 ಚಮಚ ಜೇನುತುಪ್ಪ ಹಾಗೂ 1 ಚಮಚ ತೆಂಗಿನ ಎಣ್ಣೆ ಹಾಕಿ ಕಲಸಿಕೊಂಡು ತಲೆಗೆ ಹಚ್ಚಿಕೊಳ್ಳಿ.
ಮೆಹೆಂದಿ ನಿಮ್ಮ ಕೂದಲಿಗೆ ಬಣ್ಣ ನೀಡುವುದಲ್ಲದೆ ಕೂದಲು ಉದುರದಂತೆ ತಡೆಯಲು ಸಹ ಸಹಾಯ ಮಾಡುತ್ತದೆ. ಮೊಸರಿಗೆ ಸ್ವಲ್ಪ ಮೆಹೆಂದಿ ಪೌಡರ್ ಹಾಗೂ ಸಾಸಿವೆ ಎಣ್ಣೆ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಆ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ, 1 ಗಂಟೆಯ ನಂತರ ತೊಳೆಯಿರಿ.
ರೋಸ್ಮರಿಯು ಕಾರ್ನೋಸೋಲ್ ಎಂಬ ಉರಿಯೂತದ ಏಜೆಂಟ್ ಅನ್ನು ಹೊಂದಿದ್ದೂ, ತಲೆಹೊಟ್ಟು ಹೋಗಲಾಡಿಸಲು ಸಹಾಯ ಮಾಡುತ್ತದೆ. ಸ್ವಲ್ಪ ಮೊಸರಿಗೆ ಅರ್ಧ ನಿಂಬೆಹಣ್ಣು ಹಿಂಡಿ ಮತ್ತು ರೋಸ್ಮರಿ ಸಾರಭೂತ ತೈಲದ ಎರಡು ಹನಿಗಳನ್ನು ಹಾಕಿ, ಕೂದಲಿಗೆ ಹಚ್ಚಿಕೊಳ್ಳಿ. ನಂತರ ತೊಳೆಯಿರಿ.
ಮೊಸರಿನ ಜೊತೆಗೆ ಸ್ವಲ್ಪ ಆಲಿವ್ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿಕೊಳ್ಳಿ. ಇದಕ್ಕೆ ಕಡಲೆಹಿಟ್ಟು ಹಾಕಿ ಮತ್ತೊಮ್ಮೆ ಗಂಟು ಗಂಟಾಗದಂತೆ ಕಲಸಿ. ಇದನ್ನು ನಿಮ್ಮ ಕೂದಲಿಗೆ ಹಚ್ಚಿ, ನಂತರ ತಣ್ಣನೆಯ ನೀರಿನಿಂದ ಸ್ನಾನ ಮಾಡಿ.
ಆ್ಯಪಲ್ ಸೈಡರ್ ವಿನೆಗರ್ ತೂಕ ಇಳಿಸಲು ಮಾತ್ರವಲ್ಲದೇ ಕೂದಲ ಆರೋಗ್ಯಕ್ಕೆ ಸಹ ಉತ್ತಮವೆಂದೇ ಹೇಳಬಹುದು. ಮೊಸರಿನ ಜೊತೆ ಸ್ವಲ್ಪ ಆ್ಯಪಲ್ ಸೈಡರ್ ವಿನೆಗರ್ ಹಾಗೂ ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ. ಆಮೇಲೆ ತಲೆಸ್ನಾನ ಮಾಡಿ.
ಈ ಎಲ್ಲಾ ಮಾಸ್ಕ್’ಗಳನ್ನು ನಿಮ್ಮ ಕೂದಲಿಗೆ ಸರಿಯಾದ ಹಾಗೂ ಮನೆಯಲ್ಲಿ ಸುಲಭವಾಗಿ ಸಿಗುವ ವಸ್ತುಗಳಿಂದ ಆದಷ್ಟು ತಯಾರಿಸಿಕೊಳ್ಳಿ. ಕೂದಲು ಉದುರುವ ಬಗ್ಗೆ ನಿರ್ಲಕ್ಷ್ಯ ಬೇಡ. ವೈದ್ಯರನ್ನು ಸಂಪರ್ಕಿಸಿ ಸೂಕ್ತ ಸಲಹೆಯನ್ನು ಪಡೆದುಕೊಳ್ಳಿರಿ.