ವಿಶೇಷ ಸೂಚನೆ: BSNL ನಿಂದ ಬಂತು ಹೊಸ ಪ್ಲ್ಯಾನ್ | ಜಿಯೋ, ಏರ್ ಟೆಲ್ ಗತಿಯೇನು?

ಇದೀಗ BSNL ನಿಂದ ಹೊಸ ಪ್ಲ್ಯಾನ್ ಒಂದು ಬಂದಿದ್ದು, ಸರ್ಕಾರಿ ಸ್ವಾಮ್ಯದ BSNL ಟೆಲಿಕಾಂ, ಖಾಸಗಿ ಟೆಲಿಕಾಂಗಳಿಗೆ ಪೈಪೋಟಿ ನೀಡುವಂತಹ ಅತ್ಯಾಕರ್ಷಕ ಬ್ರಾಡ್‌ಬ್ಯಾಂಡ್ ಫ್ಲ್ಯಾನ್‌ಗಳನ್ನು ಪರಿಚಯಿಸಿದೆ. ಬಿಎಸ್ಎನ್ಎಲ್ ಟೆಲಿಕಾಂ ಕಡಿಮೆ ಬೆಲೆಯಿಂದ ಹಿಡಿದು ದುಬಾರಿ ಬೆಲೆಯವರೆಗೂ ಭಿನ್ನ ಬ್ರಾಡ್‌ ಬ್ಯಾಂಡ್ ಯೋಜನೆಗಳ ಆಯ್ಕೆಯನ್ನು ಹೊಂದಿದೆ. ಹಾಗೇ ಇದೀಗ ಮತ್ತೊಂದು ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಸೇರ್ಪಡೆ ಮಾಡಿದೆ.

ಬಿಎಸ್ಎನ್ಎಲ್ ಸಂಸ್ಥೆ ಇದೀಗ ನೂತನ 5,399ರೂ. ನ ಬ್ರಾಡ್‌ಬ್ಯಾಂಡ್ ಯೋಜನೆ ಪರಿಚಯಿಸಿದೆ. ಇದು ವಾರ್ಷಿಕ ವ್ಯಾಲಿಡಿಟಿ ಅವಧಿಯ ಬ್ರಾಡ್‌ಬ್ಯಾಂಡ್ ಯೋಜನೆ ಆಗಿದ್ದು, ಈ ಬ್ರಾಡ್‌ಬ್ಯಾಂಡ್ ಸ್ಕ್ಯಾನ್ ಚಂದಾದಾರರಿಗೆ 50Mbps ಯೋಜನೆಯನ್ನು ನೀಡಲು ಪ್ರಾರಂಭಿಸಿದೆ ಎನ್ನಲಾಗಿದೆ. ಜೊತೆಗೆ ಹೆಚ್ಚುವರಿ ಪ್ರಯೋಜನಗಳನ್ನು ಈ ಯೋಜನೆ ಒದಗಿಸಲಿದೆ.

BSNL ಟೆಲಿಕಾಂ ಪರಿಚಯಿಸಿರುವ ಈ 5,399ರೂ. ಬ್ರಾಡ್‌ಬ್ಯಾಂಡ್ ಸ್ಕ್ಯಾನ್ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗಲಿದೆ. ಈ ಯೋಜನೆ ಮಾಸಿಕ ಶುಲ್ಕಕ್ಕೆ, ತಿಂಗಳಿಗೆ 450 ರೂ. ವೆಚ್ಚ ಆಗುತ್ತದೆ. ವರದಿಯ ಪ್ರಕಾರ, ಬಿಎಸ್ಎನ್‌ಎಲ್ ಟೆಲಿಕಾಂನ ಹೊಸ 5,399ರೂ. ಬ್ರಾಡ್‌ಬ್ಯಾಂಡ್ ಸ್ಕ್ಯಾನ್ 50Mbps ವೇಗವನ್ನು ಹೊಂದಿದ್ದು, ಡೇಟಾ ಮಿತಿ (FUP) ಪ್ರಕಾರ ಒಟ್ಟು 3300GB ಡೇಟಾ ಪ್ರಯೋಜನವನ್ನು ನೀಡಲಿದೆ. ಈ ಯೋಜನೆ 365 ದಿನಗಳ ವ್ಯಾಲಿಡಿಟಿಯದ್ದಾಗಿದೆ. ಇದರ ಹೊರತಾಗಿ ಈ ಯೋಜನೆ OTT ಚಂದಾದಾರಿಕೆ ಮತ್ತು ಇತರ ಪ್ರಯೋಜನಗಳನ್ನು ಹೊಂದಿಲ್ಲ.

ಇನ್ನೂ, ಬಿಎಸ್ಎನ್ಎಲ್ 499ರೂ. ಬ್ರಾಡ್‌ಬ್ಯಾಂಡ್ ಯೋಜನೆ 40 Mbps ಇಂಟರ್ನೆಟ್ ವೇಗವನ್ನು 3.3TB FUP ಡೇಟಾದೊಂದಿಗೆ ಅನಿಯಮಿತ ಕರೆ ಸೌಲಭ್ಯ ಹೊಂದಿದೆ. ನಿಗದಿತ FUP ಡೇಟಾ ಬಳಕೆಯ ಮಿತಿ ಮುಗಿದ ಬಳಿಕ ಡೇಟಾ ವೇಗ 4 Mbps ಇದ್ದು, ಬಳಕೆದಾರರು ಮೊದಲ ತಿಂಗಳ ಬಾಡಿಗೆಯಲ್ಲಿ 500ರೂ ವರೆಗಿನ 90% ರಿಯಾಯಿತಿಯನ್ನು ಪಡೆಯಬಹುದು.

ಬಿಎಸ್ಎನ್ಎಲ್ ಫೈಬರ್ ವ್ಯಾಲ್ಯೂ ಯೋಜನೆ ಶುಲ್ಕ ತಿಂಗಳಿಗೆ 799 ರೂ. ಆಗಿದ್ದು, ಬಳಕೆದಾರರು ಅದೇ 3.3 TB (3,300 GB) ಮಾಸಿಕ ಡೇಟಾದವರೆಗೆ 100 Mbps ವೇಗದಲ್ಲಿ ಬ್ರೌಸ್ ಮಾಡಬಹುದು. ಫೈಬರ್ ಬೇಸಿಕ್ ಯೋಜನೆಯ ಹಾಗೇ ಆಪರೇಟರ್ 3.3 TB ಡೇಟಾ ಮಿತಿಯನ್ನು ತಲುಪಿದ ನಂತರ ವೇಗವನ್ನು 2 Mbps ಆಗುತ್ತದೆ.

ಬಿಎಸ್ಎನ್ಎಲ್ ‘ಫೈಬರ್ ಪ್ರೀಮಿಯಂ’ ಯೋಜನೆ ತಿಂಗಳ ಶುಲ್ಕ 999 ರೂ. ಆಗಿದ್ದು, ಈ ಯೋಜನೆ 2 TB (2000 GB) ಡೇಟಾ ಮತ್ತು 200 ಎಮ್‌ಬಿಪಿಎಸ್ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ಹೊಂದಿದೆ. ಎಫ್‌ಯುಪಿ ಡೇಟಾವನ್ನು ಮುಗಿದ ನಂತರ ವೇಗ 2 Mbps ಆಗುತ್ತದೆ. ಇನ್ನೂ, ಡಿಸ್ನಿ + ಹಾಟ್‌ಸ್ಟಾರ್ ಪ್ರೀಮಿಯಂ ಚಂದಾದಾರಿಕೆಯನ್ನು ಸ್ವೀಕರಿಸುವ ಬಳಕೆದಾರಿಗೆ ಆಪರೇಟರ್ ಒಟಿಟಿ ಪ್ರಯೋಜನ ನೀಡಲಿದೆ.

Leave A Reply

Your email address will not be published.